ಸಹಭಾಗಿತ್ವದಿಂದ ಸೌಹಾರ್ದ ವೃದ್ಧಿ – ಕೆ. ಗೋಪಾಲ ಪೂಜಾರಿ

0
502

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

2-04-2016-9

ಮರವಂತೆ : ಒಂದು ಮತಾನುಯಾಯಿಗಳ ಆಚರಣೆಯಲ್ಲಿ ಇನ್ನುಳಿದ ಮತಾನುಯಾಯಿಗಳು ಸಹಭಾಗಿಗಳಾದರೆ ಎಲ್ಲ ಧರ್ಮಗಳು ಸಾರುವ ಸೌಹಾರ್ದ ವೃದ್ಧಿಯಾಗುತ್ತದೆ. ಮರವಂತೆ ಜುಮ್ಮಾ ಮಸೀದಿ ಪರಿಸರದಲ್ಲಿ ಇಂತಹ ಸಹಭಾಗಿತ್ವ ಇರುವುದರಿಂದ ಇಲ್ಲಿ ಅನುಕರಣೀಯ ಸೌಹಾರ್ದ, ಶಾಂತಿ ನೆಲೆಸಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಮರವಂತೆಯ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಜಲಾಲಿಯ್ಯ ರಾತೀಬ್ ಹಾಗೂ ಸುನ್ನಿ ಮಹಾ ಸಮ್ಮೇಳನದ ನಿಮಿತ್ತ ಶುಕ್ರವಾರ ನಡೆದ ಸನ್ಮಾನ ಮತ್ತು ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ನಾವುಂದದ ಖ್ಯಾತ ಆಯುರ್ವೇದ ವೈದ್ಯ ಡಾ. ಕೆ. ರಾಘವನ್ ನಂಬಿಯಾರ್ ಮತ್ತು ನಿವೃತ್ತ ಉಪನ್ಯಾಸಕ, ಪಂಚಾಯತ್ ರಾಜ್ ಪರಿಣತ ಎಸ್. ಜನಾರ್ದನ ಮರವಂತೆ ಅವರನ್ನು ಸನ್ಮಾನಿಸಲಾಯಿತು. ಈಚೆಗೆ ನಡೆದ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾದ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಜಗದೀಶ ಪೂಜಾರಿ, ಪ್ರವೀಣಕುಮಾರ ಶೆಟ್ಟಿ, ಶ್ಯಾಮಲಾ ಎಸ್. ಕುಂದರ್ ಅವರನ್ನು ಅಭಿನಂದಿಸಲಾಯಿತು.

ಮಸೀದಿ ಅಧ್ಯಕ್ಷ ಎನ್. ಅಬ್ದುಲ್ಲಾ ತೌಫೀಕ್, ಗೌರವಾಧ್ಯಕ್ಷ ಬಿ. ಎ. ಸಯ್ಯದ್, ಉಪಾಧ್ಯಕ್ಷ ಎಂ. ಎ. ಖಾದರ್, ಮಾಜಿ ಅಧ್ಯಕ್ಷ ಬಿ. ಎಸ್. ಮೊಯ್ದಿನ್, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ, ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ, ನಾವುಂದದ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ, ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಎನ್. ಕೆ. ಬಿಲ್ಲವ, ಮರವಂತೆ ಶ್ರೀರಾಮ ಮಂದಿರದ ಅಧ್ಯಕ್ಷ ಬಿ. ವೆಂಕಟರಮಣ ಖಾರ್ವಿ ಉಪಸ್ಥಿತರಿದ್ದರು.

ಸಲ್ಮಾನ್ ಶಾಂತಿಗೀತೆ ಹಾಡಿದರು. ಮಸೀದಿಯ ಕಾರ್ಯದರ್ಶಿ ಬಿ. ಎಚ್. ಅಬ್ದುಲ್ ಹಮೀದ್ ಸ್ವಾಗತಿಸಿ, ನಿರೂಪಿಸಿದರು. ಮಸೀದಿಯ ಮುದರ್ರಿಸ್ ಜಿ. ಕೆ. ಇಕ್ರಾಮುಲ್ಲಾ ಸಖಾಫಿ ಅಲ್‌ಕಾಮಿಲ್ ಪ್ರಸ್ತಾವನೆಗೈದರು. ಇಲ್ಯಾಸ್ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)