ಪ್ರಿಯದರ್ಶಿನಿ ದಿಢೀರ್ ರಾಜಕೀಯ ಪ್ರವೇಶ ; ಈ ಬಾರಿ ಜಿ.ಪಂ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ

1
2102

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (15) ಸಮ್ಮತ (2) ಅಸಮ್ಮತ (2) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

priya.b.

ಕಂಬದಕೋಣೆ ಜಿ.ಪಂ. ಕ್ಷೇತ್ರ ಮಹಿಳೆಯರ ಹಣಾಹಣಿ

ಬಿಜೆಪಿಯಿಂದ ರಾಜಕೀಯ ಅಖಾಡಕ್ಕೆ ಹೊಸ ಪರಿಚಯ ಪ್ರಿಯದರ್ಶಿನಿ

ಬೈಂದೂರು : ಉಡುಪಿ ಜಿಲ್ಲಾ ಪಂಚಾಯತ್ ನ ಕರಾವಳಿ ಭಾಗವನ್ನು ಒಳಗೊಂಡ ಕಂಬದಕೋಣೆ ಜಿಲ್ಲಾ ಪಂಚಾಯತ್ ಕ್ಷೇತ್ರ ಈ ಬಾರಿ ಮಹಿಳೆಯರ ಕದನದ ಅಖಾಡಕ್ಕೆ ಪರಿಣಮಿಸಿದೆ. ಸಾಮಾನ್ಯ ಮಹಿಳಾ ಮೀಸಲಾತಿ ಕ್ಷೇತ್ರಕ್ಕೆ ಬಂದಿರುವುದರಿಂದ ಸಾಕಷ್ಟು ರಾಜಕೀಯ ಪ್ರಹಸನಗಳಿಗೆ ಈ ಕ್ಷೇತ್ರ ಒಳಗಾಗಿ ಜಿಲ್ಲೆಯ ಕಣ್ಣು ಈ ಕ್ಷೇತ್ರದ ಮೇಲೇಯೇ ನಿಂತಿದೆ. ಇಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ರಾಜಕೀಯಕ್ಕೆ ಹೊಸ ಪರಿಚಯ ಶ್ರೀಮತಿ ಪ್ರಿಯದರ್ಶಿನಿ ಸ್ಪರ್ಧಿಸುತ್ತಿದ್ದಾರೆ.

ತಾಂತ್ರಿಕ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿ ಸಾಮಾಜಿಕ ರಂಗದಲ್ಲಿಯೂ ಕೂಡಾ ಆಸಕ್ತಿಯನ್ನು ಬೆಳೆಸಿಕೊಂಡು ಸದಾ ಕ್ರೀಯಾಶೀಲರಾಗಿರುವ ಇವರು ನಾಡಾದ ಐಟಿಐ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇಂಜಿನೀಯರಿಂಗ್ ಪದವೀಧರೆಯಾದ ಇವರು ಬಿಜೂರು ಗ್ರಾಮದ ನಿವಾಸಿ. ಕಮಲೇಶ್ ಬೆಸ್ಕೂರ್ ಅವರ ಪತ್ನಿ. ಪ್ರಸ್ತುತ ಕೊಲ್ಲೂರು ಡಾಟ್ ಕಾಮ್ ನ ಸಂಯೋಜಕಿಯಾಗಿರುವ ಇವರು ವಿದ್ಯಾವಂತ ಮಹಿಳಾ ಅಭ್ಯರ್ಥಿಯಾಗಿಯೂ ಈ ಚುನಾವಣೆಯಲ್ಲಿ ಗುರುತಿಸಿಕೊಳ್ಳುತ್ತಾರೆ. ರಾಜಕೀಯ ಹಿನ್ನೆಲೆ ಕುಟುಂಬದಿಂದ ಬಂದಿರುವ ಪ್ರಿಯದರ್ಶಿನಿ ಅವರ ತಾಯಿ ಶಾರದಾ ಬಿಜೂರು ಈ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ, ಜಿ.ಪಂ. ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು. ಹಾಗಾಗಿ ರಾಜಕೀಯದ ಹಿನ್ನೆಲೆ ಇದೆಯಾದರೂ ಪ್ರಿಯದರ್ಶಿನಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ರಾಜಕೀಯಕ್ಕೆ ಪ್ರವೇಶ ಮಾಡುತ್ತಿದ್ದಾರೆ.

ಸಾಮಾಜಿಕ ವಲಯದಲ್ಲಿ ಸೇವೆ ಸಲ್ಲಿಸಬೇಕು ಎನ್ನುವ ತುಡಿತ, ಬಿಜೆಪಿ ಪಕ್ಷದಿಂದ ಸಿಕ್ಕಿದ  ಅವಕಾಶವನ್ನು ಬಳಸಿಕೊಂಡು ಕ್ಷೇತ್ರದ ಪ್ರತಿನಿಧಿಯಾಗಿ ಜನಸೇವೆ ಮಾಡುವ ಆಕಾಂಕ್ಷೆ ಹೊಂದಿದ್ದಾರೆ. ಭಾರತೀಯ ಜನತಾ ಪಕ್ಷದಿಂದಲೂ ಉತ್ತಮ ಸಹಕಾರ, ಮಾರ್ಗದರ್ಶನ, ಸಲಹೆ ಸೂಚನೆಗಳು ಸಿಗುತ್ತಿದ್ದು, ಕುಟುಂಬ ವರ್ಗದಿಂದಲೂ ಕೂಡಾ ಉತ್ತಮ ಪ್ರೋತ್ಸಾಹ ದೊರಕುತ್ತಿದೆ ಎನ್ನುವ ಪ್ರಿಯದರ್ಶಿನಿ ಈ ಚುನಾವಣೆಯಲ್ಲಿ ಸುಲಭ ಜಯದ ವಿಶ್ವಾಸ ವ್ಯಕ್ತ ಪಡಿಸುತ್ತಾರೆ. ಯುವ ಸಂಘಟನೆ, ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿರುವ ಇವರು ತ್ರಾಸಿಯ ಯುವತಿ ಮಂಡಲದ ಅಧ್ಯಕ್ಷೆ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುವತಿ ಮಂಡಲದ ಎಲ್ಲಾ ಚಟುವಟಿಕೆಯಲ್ಲಿ  ಮುಂಚೂಣಿಯ ನೇತೃತ್ವ ವಹಿಸಿ ಬೆಳವಣಿಗೆಗೂ ಕಾರಣಿಭೂತರಾಗಿದ್ದಾರೆ. ಸಹಕಾರ ಕ್ಷೇತ್ರಕ್ಕೂ ಪ್ರವೇಶ ಮಾಡಿರುವ ಇವರು ಸೌಪರ್ಣಿಕ ಮಹಿಳಾ ಸೊಸೈಟಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದೇವಾಡಿಗ ಸಮುದಾಯಕ್ಕೆ ಸೇರಿದ ಪ್ರಿಯದರ್ಶಿನಿ ಅವರ ತಂದೆ ಮಂಜು ದೇವಾಡಿಗರು 1994ರಿಂದ 2005ರ ತನಕ ಗ್ರಾಮಕರಣಿಕರಾಗಿ ಸೇವೆ ಸಲ್ಲಿಸಿ, 2005-2011ರ ತನಕ ಕಂದಾಯ ನಿರೀಕ್ಷಕರಾಗಿ, 2013ರಲ್ಲಿ ತಾಲೂಕು ಕಛೇರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (15) ಸಮ್ಮತ (2) ಅಸಮ್ಮತ (2) ಖಂಡಿಸುವೆ (0) ಅಭಿಪ್ರಾಯವಿಲ್ಲ (0)