ತಂದೆ 2005 ಕ್ಕೂ ಮುಂಚೆ ಮೃತಪಟ್ಟಿದ್ದರೆ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಇಲ್ಲ: ಸುಪ್ರೀಂ

0
2981

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (6) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

supreme-court

ನವದೆಹಲಿ: ದೇಶದಾದ್ಯಂತ ಹಲವಾರು ಮಹಿಳೆಯರಿಗೆ ಹಿನ್ನಡೆಯಾಗಬಲ್ಲ ತೀರ್ಪಿನಲ್ಲಿ, 2005 ರಲ್ಲಿ ಜಾರಿಯಾದ ಹಿಂದು ಉತ್ತರಾಧಿಕಾರ ಕಾಯ್ದೆ ತಿದ್ದುಪಡಿಗಿಂತಲೂ ಮುಂಚಿತವಾಗಿ ತಂದೆ ಮೃತಪಟ್ಟಿದ್ದರೆ, ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ದೊರಕುವ ಪ್ರಶ್ನೆಯೇ ಇಲ್ಲ ಎಂದು ಸುಪ್ರೀಮ್ ಕೋರ್ಟ್ ತಿಳಿಸಿದೆ.

2005ರಲ್ಲಿ ತಿದ್ದುಪಡಿಯಾದ ಹಿಂದು ಉತ್ತರಾಧಿಕಾರ ಕಾಯ್ದೆ ಹಿಂದಿನ ವ್ಯಾಜ್ಯಗಳಿಗೆ ಬಳಕೆಯಾಗುವುದಿಲ್ಲ. ಹೆಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿ ಪಡೆಯಲು ಅವರ ತಂದೆ 9ನೆ ಸೆಪ್ಟಂಬರ್ 2005 ರ ನಂತರ ಬದುಕಿರಬೇಕು ಎಂದು ಕೋರ್ಟ್ ತಿಳಿಸಿದೆ.

ಅನಿಲ್ ಆರ್ ದಾವೆ ಮತ್ತು ಆದರ್ಶ್ ಕೆ ಗೋಯಲ್ ಇವರುಗಳನ್ನು ಒಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಸಿಗುವಷ್ಟೇ ಪ್ರಮಾಣದಲ್ಲಿ ಹೆಣ್ಣು ಮಕ್ಕಳಿಗೂ ಹಂಚಿಕೆಯಾಗಬೇಕು ಎಂದು ಹಿಂದು ಉತ್ತರಾಧಿಕಾರ ಕಾಯ್ದೆಯಲ್ಲಿ 9 ನೆ ಸೆಪ್ಟಂಬರ್ 2005ರಲ್ಲಿ ತಿದ್ದುಪಡಿ ತರಲಾಗಿತ್ತು.

ಈ ಹಿಂದೆ ಕೂಡು ಹಿಂದು ಕುಟುಂಬದಿಂದ ಮಹಿಳೆ ಜೀವನ ನಿರ್ವಹಣೆಯನ್ನಷ್ಟೇ ಕೇಳಬಹುದಿತ್ತು. ಮತ್ತು ಈ ಕಾಯ್ದೆಯನ್ನು ಪರಿಚಯಿಸಿದ ಡಿಸೆಂಬರ್ 20 2004 ಕ್ಕೂ ಮುಂಚಿತವಾಗಿ ಆಸ್ತಿ ಹಂಚಿಕೆಯಾಗಿದ್ದರೆ ಹೆಣ್ಣು ಮಕ್ಕಳಿಗೆ ಪಾಲು ಕೇಳುವ ಅವಕಾಶವಿರಲಿಲ್ಲ. ಈಗ ಸುಪ್ರೀಮ್ ಕೋರ್ಟ್ ಮತ್ತೊಂದು ನಿರ್ಬಂಧವನ್ನು ಹೇರಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (6) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)