ಕೊಲ್ಲೂರು ಶ್ರೀ. ಮೂಕಾಂಬಿಕೆ ಸನ್ನಿಧಿಯಲ್ಲಿ ಸಾಮೂಹಿಕ ಅಕ್ಷರಭ್ಯಾಸ ( ವಿದ್ಯಾರಂಭ ) ಕಾರ್ಯಕ್ರಮ

0
1652

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

vidyaramba 3

ಬೈಂದೂರು,  ಅ,22 : ಪ್ರಸಿದ್ಧ ಶಕ್ತಿ ಕ್ಷೇತ್ರವಾದ ಕೊಲ್ಲೂರು ಶ್ರೀ. ಮೂಕಾಂಬಿಕಾ ದೇವಸ್ಥಾನದಲ್ಲಿ ಸಾಮೂಹಿಕ ಅಕ್ಷರಭ್ಯಾಸ ಕಾರ್ಯಕ್ರಮ ಗುರುವಾರ ವಿಜೃಂಭಣೆಯಿಂದ ನಡೆಯಿತು. ವಿಜಯದಶಮಿ ಪ್ರಯುಕ್ತ ಕರ್ನಾಟಕದ ಮತ್ತು ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿದೆಡೆಯಿಂದ ಆಗಮಿಸುವ ಸಾವಿರಾರು ಭಕ್ತರು ಮಕ್ಕಳಿಗೆ ವಿದ್ಯಾರಂಭ ಮಾಡಿಸುತ್ತಾರೆ.

vidyaramba 2

vidyaramba 4

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ಶಿವ ಮತ್ತು ಶಕ್ತಿಯರು ಸಮ್ಮಿಳಿತಗೊಂಡ ಪುಣ್ಯ ಕ್ಷೇತ್ರ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವಿಜಯದಶಮಿಯಂದು ನಡೆಯುವ ವಿದ್ಯಾರಂಭ ಪೂಜೆಗೆ ಪ್ರಶಸ್ತ ಸ್ಥಳ. ವಿಜಯದಶಮಿ ದಿನದಂದು ಇಪ್ಪತ್ತು ಸಾವಿರಕ್ಕೂ ಅಧಿಕ ಕೇರಳ ಮತ್ತು ಕರ್ನಾಟಕದ ಭಕ್ತರು ಮೂಕಾಂಬಿಕಾ ದೇವಸ್ಥಾನದಲ್ಲಿ ತಮ್ಮ ಮಕ್ಕಳಿಗೆ ಅಕ್ಷರಭ್ಯಾಸ ನಡೆಸುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಶಾರದಾ ದೇವಿಯ ಮೂರ್ತಿಯ ಎದುರಿನಲ್ಲಿ ಮಕ್ಕಳಿಗೆ ಮೊಟ್ಟ ಮೊದಲ ಅಕ್ಷರಭ್ಯಾಸ ಮಾಡಲಾಗುತ್ತದೆ. ಮಕ್ಕಳ ನಾಲಿಗೆಯ ಮೇಲೆ ಅರಿಶಿನ ಕೊಂಬಿನಲ್ಲಿ ಓಂಕಾರ ಬರೆಯಲಾಗುತ್ತದೆ. ನಂತರ ಹೆತ್ತವರು ಮಕ್ಕಳ ಕೈ ಹಿಡಿದು ಅಕ್ಕಿಕಾಳಿನಲ್ಲಿ ಓಂಕಾರ ಹಾಗೂ ಗಣೇಶ ನಾಮ ಹಾಗೂ ತಮ್ಮ ಮಾತ್ರ ಭಾಷೆ, ಎ,ಬಿ, ಸಿ, ಸಂಖ್ಯೆಗಳು, ಅ, ಆ, ಇ, ಮುಂತಾದವುಗಳನ್ನು ಬರೆಸುವುದರ ಮೂಲಕ ಅಕ್ಷರಭ್ಯಾಸ ಮಾಡಿಸುತ್ತಾರೆ.

vidyaramba 1

vidyaramba 5

vidyaramba 6

vidyaramba 7

ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಂದು ಅಕ್ಷರಭ್ಯಾಸ ನಡೆಸುವರು ಕೇರಳದ ಭಕ್ತರು. ಕೊಲ್ಲೂರು ಶ್ರೀ. ಮೂಕಾಂಬಿಕೆಯ ಸನ್ನಿಧಿಯಲ್ಲಿ ಮಕ್ಕಳಿಗೆ ವಿದ್ಯಾರಂಭ ಮಾಡುವುದರಿಂದ ಮಕ್ಕಳಿಗೆ ಉಜ್ವಲ ಭವಿಷ್ಯ ಇದೆ ಅನ್ನೋದು ಕೇರಳಿಗರ ಭಕ್ತಿ ಮತ್ತು ನಂಬಿಕೆ. ಕೇರಳ ವಿದ್ಯೆಯ ವಿಷಯದಲ್ಲಿ ಉನ್ನತ ಸ್ಥಾನದಲ್ಲಿರೋದಕ್ಕೆ ಮೂಕಾಂಬಿಕೆಯ ಆರ್ಶೀವಾದವೇ ಕಾರಣ ಅನ್ನುವ ಮಾತೂ ಇದೆ. ವಿಜಯದಶಮಿ ಎಲ್ಲ ಆರಂಭಗಳಿಗೂ ಸೂಕ್ತವಾದ ದಿನ. ಹೀಗಾಗಿ ವಿಜಯದಶಮಿ ವಿದ್ಯಾರಂಭಕ್ಕೆ ವಿಶೇಷವಾದ ಮಹತ್ವ ಬಂದಿದೆ. ವರ್ಷಂಪ್ರತಿ ಈ ದಿನದಂದು ಬೆಳಿಗ್ಗೆ 3 ಗಂಟೆಯಿಂದಲೇ ಸಾವಿರಾರು ಭಕ್ತರು ವಿದ್ಯಾರಂಭಕ್ಕೆ ಕಾದು ಕುಳಿತಿರುತ್ತಾರೆ. ಈ ಪ್ರಕ್ರಿಯೆ ಮಧ್ಯಾಹ್ನ 1.30ರವರೆಗೂ ನಡೆಯುತ್ತದೆ.

ಕೊಲ್ಲೂರಿನಲ್ಲಿ ನಡೆಯುವ ಈ ಅಕ್ಷರಭ್ಯಾಸ ಶೃಂಗೇರಿ ಶಾರದಾಂಬಾ ಕ್ಷೇತ್ರವನ್ನು ಹೊರತುಪಡಿಸಿ ಬೇರೆಲ್ಲಿಯೂ ನಡೆಯೋದಿಲ್ಲ ಅನ್ನೋದು ಇಲ್ಲಿನ ವಿಶೇಷತೆ. ನವ ಅನ್ನ ಪ್ರಾಶನ: ಊರವರಿಗೆ ಕದಿರು ವಿತರಣೆಯ ಶಾಸ್ತ್ರ ನಡೆಯುತ್ತದೆ.

“ಪ್ರತೀ ವರ್ಷ ಈ ವಿದ್ಯಾರಂಭ ಪ್ರಕ್ರಿಯೆ ಈ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಈ ವರ್ಷ ಎರಡು ಸಾವಿರಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದಾರೆ. ತಾಯಿಯ ಸನ್ನಿಧಿಯಲ್ಲಿ ವಿದ್ಯಾರಂಭ ಮಾಡಿಸುವುದರಿಂದ ವಿದ್ಯೆಯಲ್ಲಿ ಮಕ್ಕಳಿಗೆ ಉಜ್ವಲ ಭವಿಷ್ಯ ಸಿಗುತ್ತದೆ, ಎನ್ನುವುದು ನಂಬಿಕೆ”.

– ಕೃಷ್ಣ ಪ್ರಸಾದ ಅಡ್ಯಂತಾಯ ( ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ )

 

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)