ಬಕ್ರೀದ್‍ಗೆ ಶಾರೂಖ್ ಖರೀದಿಸಿದ ಕರ್ನಾಟಕ ಟಗರು ಬೆಲೆ ರು.2.40 ಲಕ್ಷ

0
3859

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

14-09-2015-8

ಬೆಂಗಳೂರು: ಬಾಲಿವುಡ್ ನಟ ಶಾರೂಖ್ ಖಾನ್ ಕರ್ನಾಟಕ ಬಕ್ರೀದ್ ಗಾಗಿ ರಾಜ್ಯದ 2 ಟಗರುಗಳನ್ನು ಖರೀದಿಸಿದ್ದು, ಅವನ್ನು ಬರಮಾಡಿಕೊಳ್ಳಲು ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿಸಿದ್ದಾರಂತೆ.

ಪ್ರತಿ ವರ್ಷದ ಬಕ್ರೀದ್ ಹಬ್ಬಕ್ಕೆ ಭೂರಿ ಭೋಜನಕ್ಕಾಗಿ ಟಗರುಗಳನ್ನು ಖರೀದಿಸುವ ಶಾರೂಖ್, ಆಯ್ಕೆ ಮಾಡಿಕೊಳ್ಳುವುದು ಕರ್ನಾಟಕವನ್ನು. ಈ ವರ್ಷವೂ ಇಲ್ಲಿಂದಲೇ ಟಗರುಗಳನ್ನು ಪಾರ್ಸೆಲ್ ಮಾಡಿಸುತ್ತಿರುವ ಮಾಹಿತಿ ಖಚಿತವಾಗಿದೆ.

ಬೆಂಗಳೂರಿನ ಚಾಮರಾಜಪೇಟೆಯ ಕುರಿ ವ್ಯಾಪಾರಸ್ಥರಾದ ಮೊಹಮ್ಮದ್ ಇಬ್ರಾಹಿಂ ಅವರು ಈ ವ್ಯಾಪಾರವನ್ನು ಶಿಸ್ತಾಗಿ ಮಾಡಿ ಮುಗಿಸಿದ್ದಾರೆ. ಇನ್ನೇನಿದ್ದರೂ ಬೆಂಗಳೂರಿನಿಂದ ಮುಂಬೈಗೆ ಟಗರುಗಳನ್ನು ಸಾಗಿಸುವದಷ್ಟೇ. ಇದೇ 22ರಂದು ಈ ಟಗರುಗಳು ಮುಂಬೈ ತಲುಪಲಿವೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ವಿಶೇಷವಾದ ಈ ಎರಡು ಟಗರುಗಳನ್ನು ಹುಡುಕಿದ್ದಾರೆ. ಎರಡೂ ಟಗರು ಸೇರಿ ಬರೋಬ್ಬರಿ 240 ಕೆಜಿ ತೂಗುತ್ತವೇ. ತೂಕವಷ್ಟೇ ಅಲ್ಲ, ಬೆಲೆಯು ಜೋರಾಗಿ ಇದೆ. ಸತ್ತಾರ್ ಅವರಿಂದ ಎರಡು ಟಗರುಗಳನ್ನು ರು.2.20 ಲಕ್ಷಕ್ಕೆ ಖರೀದಿಸಿರುವ ಮೊಹಮ್ಮದ್ ಇಬ್ರಾಹಿಂ, ಅವನ್ನು ಮೊಹಮ್ಮದ್ ಜಬೀ ಅವರಿಗೆ ರು.2.40 ಲಕ್ಷಕ್ಕೆ ಮಾರಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)