ಗ್ರಾಹಕರ ಖಾತೆಗೆ ಆಧಾರ್ ಜೋಡನೆ ಮಾಡುವ ಆಧಾರ್ ಲಿಂಕ್ ಕಾರ್ಯಕ್ರಮ

0
888

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಾಗೂರು ಶಾಖೆಯಲ್ಲಿ ಕಿರಿಮಂಜೇಶ್ವರ ಗ್ರಾಪಂ ವ್ಯಾಪ್ತಿಯ, ಚಾಲ್ತಿ ಹಾಗೂ ಉಳಿತಾಯ ಖಾತೆ ಹೊಂದಿರುವ ಗ್ರಾಹಕರ ಖಾತೆಗೆ ಆಧಾರ್ ಜೋಡನೆ ಮಾಡುವ ಆಧಾರ್ ಲಿಂಕ್ ಕಾರ್ಯಕ್ರಮ ನಡೆಯಿತು.

28-08-2015-27

ಹಾಡಿಸ್ಥಳ ದೇವಸ್ಥಾನದ ವಠಾರದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ದೇವಳದ ಆಡಳಿತ ಮೊಕ್ತೇಸರ ಚೆನ್ನಕೇಶವ ಕಾರಂತ್ ಚಾಲನೆ ನೀಡಿದರು. ಬ್ಯಾಂಕಿನ ಹಿರಿಯ ಸಹಾಯಕ ಮಹಾಪ್ರಬಂಧಕ ಜಿ. ಸೀತಾರಾಮ ಮಡಿವಾಳ ಆಧಾರ್ ಜೋಡನೆಯ ಅಗತ್ಯತೆ, ಸರಕಾರ ಹಾಗೂ ಬ್ಯಾಂಕಿನಿಂದ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದರು. ನಾಗೂರು ಶಾಖಾ ವ್ಯವಸ್ಥಾಪಕ ಶಂಕರ ಶೆಟ್ಟಿ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಎಲ್ಲಾ ಗ್ರಾಹಕರು ಆಧಾರ್ ಜೋಡನೆ ಮಾಡುವುದರ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಹಿರಿಯ ಸಹಾಯಕ ರಾಜೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು ಶಾಖಾ ಸಿಬ್ಬಂದಿ ಸುಕೇಶ್ ಶೆಟ್ಟಿ, ಆನಂದ ಗುಡಾಡಿ ಸಹಕರಿಸಿದರು. ಈ ಅಭಿಯಾನವು ಈ ತಿಂಗಳ ಕೊನೆಯ (ಅ.31)ವರೆಗೆ ಚಾಲ್ತಿಯಲ್ಲಿರುತ್ತದೆ.

 

ನರಸಿಂಹ ನಾಯಕ್…..

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)