ಪಡುಬಿದ್ರಿ ಪೇಟೆಯಲ್ಲಿ ಚತುಷ್ಪಥ ಕಾಮಗಾರಿ ವಿರೋಧಿಸಿ ಸಂತ್ರಸ್ತರ ಸಮಿತಿ ನೀಡಿದ್ದ ಬಂದ್‌ ಕರೆಗೆ ಮಿಶ್ರ ಪ್ರತಿಕ್ರಿಯೆ

0
315

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯಲ್ಲಿ ಪಡುಬಿದ್ರಿ ಪೇಟೆಯಲ್ಲಿ ಹಾದು ಹೋಗುವ ಬಗ್ಗೆ 3ಎ ನೋಟಿಸ್ ಜಾರಿಗೊಳಿಸಿರುವುದನ್ನು ವಿರೋಧಿಸಿ ಶುಕ್ರವಾರ ಹೆದ್ದಾರಿ ಅಗಲ ಗೊಳಿಸುವ ಸಂಭಾವ್ಯ ಸಂತ್ರಸ್ತರ ಸಮಿತಿ ಕರೆ ನೀಡಿದ್ದ ಪಡುಬಿದ್ರಿ ಪೇಟೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

padubidri

ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತ ವಾಗಲಿಲ್ಲ. ಪಡುಬಿದ್ರಿ ಪೇಟೆ ಹೊರತು ಪಡಿಸಿ ಉಳಿದೆಲ್ಲಾ ಕಡೆಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದಿದ್ದವು. ರಿಕ್ಷಾ ಚಾಲಕರು ಬಂದ್‌ನಲ್ಲಿ ಪಾಲ್ಗೊಂಡಿರಲಿಲ್ಲ.ಬಂದ್‌ಗೆ ಕರೆ ನೀಡಿದ್ದ ಸಂಭಾವ್ಯ ಸಂತ್ರಸ್ತರ ಸಮಿತಿಯು ಕಾರ್ಮಿಕರನ್ನು ಸೇರಿಸಿ ಪ್ರತಿಭಟನೆ ನಡೆಸಿದ ಬಳಿಕ ಪ್ರತಿ ಭಟನಾ ಮೆರವಣಿಗೆ ನಡೆಸಿದರು. ಘಟನಾ ಸ್ಥಳಕ್ಕೆ ಬಂದ ಉಡುಪಿ ತಹ ಶೀಲ್ದಾರ್ ಗುರುಪ್ರಸಾದ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿಯನ್ನು ಜಿಲ್ಲಾಡ ಳಿತ ಹಾಗೂ ಹೆದ್ದಾರಿ ಪ್ರಾಧಿಕಾರಕ್ಕೆ ನೀಡುವುದಾಗಿ ತಹಶೀಲ್ದಾರ್ ಹೇಳಿದರು.

ಇದಕ್ಕೆ ಮೊದಲು ಪ್ರತಿಭಟನಾಕಾರರ ನ್ನುದ್ದೇಶಿಸಿ ಮಾತನಾಡಿದ ಸಂತ್ರಸ್ತರ ಸಮಿತಿ ಅಧ್ಯಕ್ಷ ವೈ.ಸುಕುಮಾರ್,  ಇಲಾಖಾ ಆದೇಶವನ್ನು ಧಿಕ್ಕರಿಸಿದ ಕ್ರಮ ವನ್ನು ಪ್ರಶ್ನಿಸಿ ನ್ಯಾಯಾಂಗ ಹೋರಾಟ ನಡೆಸಲಿದ್ದೇವೆ. ಪೇಟೆಯನ್ನು ಉಳಿಸಿ ಬೈಪಾಸ್ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಡಾ.ವೈ.ಎನ್.ಶೆಟ್ಟಿ, ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷ ವೈ.ಸುಧೀರ್, ಸಂತೋಷ್ ಕುಮಾರ್ ಶೆಟ್ಟಿ, ಡಾ. ಎನ್.ಟಿ.ಅಂಚನ್, ವೈ.ಗೋಪಾಲ ಶೆಟ್ಟಿ, ವಿಶುಕುಮಾರ್ ಶೆಟ್ಟಿ ಬಾಲ್, ಜೇಮ್ಸ್ ಡಯಾನ್ ಅಂದ್ರಾದೆ, ಉಪಸ್ಥಿತರಿದ್ದರು.

ಪಡಿತರ ಅಂಗಡಿ ಬಂದ್‌ಗೆ ಆಕ್ರೋಶ: ಪಡುಬಿದ್ರಿ ಬಂದ್‌ ಕರೆ ನೀಡಿದ ಹಿನ್ನೆಲೆ ಯಲ್ಲಿ ಪಡುಬಿದ್ರಿಯಲ್ಲಿರುವ ವ್ಯವಸಾಯ ಸಹಕಾರಿ ಬ್ಯಾಂಕ್ ಹಾಗೂ ಪಡಿತರ ಅಂಗಡಿಗಳನ್ನು ಶುಕ್ರವಾರ ಬಂದ್ ನಡೆ ಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣ ವಾಯಿತು. ಕೆಲವರು ಸಿಎ ಬ್ಯಾಂಕ್‌ಗೆ ಬಂದವರು ಬಂದ್ ನಡೆಸಿರುವುದನ್ನು ಕಂಡು ವಾಪಾಸ್‌ ಹೋಗಬೇಕಾಯಿತು. ಅಲ್ಲದೆ ಪಡಿತರ ಅಂಗಡಿಗೂ ಬಂದ ಜನರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಹೆದ್ದಾರಿ ಕಾಮಗಾರಿ ಕೂಡಲೇ ಆರಂಭಿಸಿ- ದಸಂಸ: ಇದೇ ವೇಳೆ ಪಡು ಬಿದ್ರಿ ಸಿರಿಗಾರ್ಡನ್‌ನಲ್ಲಿ ದಲಿಸ ಸಂಘರ್ಷ ಸಮಿತಿಯ ಪ್ರೊ.ಕೃಷ್ಣಪ್ಪ ಬಣ ಕರೆದ ಸುದ್ದಿಗೋಷ್ಠಿಯಲ್ಲಿ ಪಡುಬಿದ್ರಿಯಲ್ಲಿ ತಕ್ಷಣದಿಂದ ಪೇಟೆಯಲ್ಲಿ ಹೆದ್ದಾರಿ ಅಗಲ ಗೊಳಿಸುವ ಕಾಮಗಾರಿ ನಡೆಸಬೇಕೆಂದು ಒತ್ತಾಯಿಸಿದೆ. ದಸಂಸ ಮೈಸೂರು ವಿಭಾ ಗೀಯ ಸಂಚಾಲಕ ಶೇಖರ ಹೆಜ್ಮಾಡಿ ಮಾತನಾಡಿ, ಪಡುಬಿದ್ರಿ ಪೇಟೆಯಲ್ಲಿ ಹೆದ್ದಾರಿಯನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಿರುವ ವ್ಯಾಪಾರಸ್ಥರನ್ನು ಶೀಘ್ರ ತೆರವುಗೊಳಿಸಿ ರಸ್ತೆ ಅಗಲಗೊಳಿಸುವ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಉಮಾನಾಥ ಪಡುಬಿದ್ರಿ, ರಮೇಶ್ ಕಂಚಿನಡ್ಕ, ಶೀನ ಪಾದೆಬೆಟ್ಟು, ಗಣೇಶ್ ಇದ್ದರು.

ಸ್ಥಾಪಿತ ಹಿತಾಸಕ್ತಿಗಳು ಪಡುಬಿದ್ರಿ ಪೇಟೆ ಅಗಲಗೊಳಿಸುವ ಕಾಮಗಾರಿ ವಿರೋಧಿಸಿ ನಡೆಸಿದ ಬಂದ್ ಕೇವಲ ಬೆರಳಣಿಕೆಯ ವ್ಯಾಪಾರಸ್ಥರ ಪ್ರತಿಭಟನೆಯಾಗಿದೆ
ಶೇಖರ ಹೆಜ್ಮಾಡಿ,
ಡಿಎಸ್‌ಎಸ್‌ ಮುಖಂಡ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)