ಮುರುಕಲು ಮನೆಯಲ್ಲಿ ಮರುಗುತ್ತಿದೆ ತಾಯಿ ಮಗನ ಬದುಕು

0
3290

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

0

ಸುಬ್ರಹ್ಮಣ್ಯ: ಆಕಸ್ಮಿಕ ವಿದ್ಯುತ್‌ ಅವಘಡದಲ್ಲಿ ಹಾಸಿಗೆ ಹಿಡಿದ ಹರಿಹರಪಳ್ಳತ್ತಡ್ಕ ಸಮೀಪದ ಪಳ್ಳತ್ತಡ್ಕ ನಿವಾಸಿ ಕೃಷ್ಣ ರೈ ಹಾಗೂ ಆತನ ಆರೈಕೆಯಲ್ಲಿ ತೊಡಗಿದ ವೃದ್ಧೆ ತಾಯಿ ಸುಬ್ಬಕ್ಕನ ಬದುಕು ಇದೀಗ ನರಕಸದೃಶ ಸ್ಥಿತಿಗೆ ತಲುಪಿದೆ. ಹಂಚಿನ ಛಾವಣಿಯ ಪುಟ್ಟ ಮುರುಕುಲು ಮನೆಯೊಳಗೆ ತಾಯಿ ಮಗನ ಬದುಕು ಮುರುಟುತ್ತಿದೆ. ತಾಯಿ ಮಗ ಇಬ್ಬರಿಗೂ ಇದೀಗ ಜ್ವರ ಭಾದೆ ಕಾಣಿಸಿಕೊಂಡು ಬದುಕು ದುಸ್ತರವಾಗಿದೆ.

ಹರಿಹರಪಳ್ಳತ್ತಡ್ಕ ಗ್ರಾಮದ ಪಳ್ಳತ್ತಡ್ಕ ನಿವಾಸಿ ಕೃಷ್ಣ ರೈ ವಿದ್ಯುತ್‌ ಇಲಾಖೆಯಲ್ಲಿ ಖಾಯಂ ಅಲ್ಲದ ನೆಲೆಯಲ್ಲಿ ದಿನಕೂಲಿ ನೌಕರನಾಗಿ ಕರ್ತವ್ಯ ನಿರ್ವಹಿಸುತಿದ್ದರು. 1995ರ ಅಕ್ಟೋಬರ್‌ನಲ್ಲಿ ಆಕಸ್ಮಿಕ ವಿದ್ಯುತ್‌ ಅವಘಡವೊಂದರಲ್ಲಿ ವಿದ್ಯುತ್‌ ಕಂಬದಿಂದ ಕೆಳಗೆ ಬಿದ್ದು ಬೆನ್ನಿನ ಹುರಿ ಮೂಲೆ ಮುರಿತಕ್ಕೆ ಒಳಗಾಗಿ ಹಾಸಿಗೆ ಹಿಡಿದಿದ್ದಾರೆ.

ಇಪ್ಪತ್ತು ವರ್ಷ ಕಳೆದಿದೆ

ಕಳೆದ 20 ವರ್ಷಗಳಿಂದ ಹಾಸಿಗೆ ಹಿಡಿದ ಮಗ ಒಂದೆಡೆಯಾದರೆ, ಇತ್ತ ತಾಯಿಯ ಆರೋಗ್ಯವೂ ಹದಗೆಟ್ಟಿದೆ. ತಾಯಿಯ ಆರೋಗ್ಯ ದಿನದಿಂದ ದಿನಕ್ಕೆ ಹದೆಗೆಡುತ್ತಿದ್ದು, ಮುಪ್ಪಿನ ಸಮಯದಲ್ಲಿ ಕಾಡುವ ರೋಗಗಳು ಕಾಡುತ್ತಿದೆ. ಆದರೆ ಮಗ ಹಾಸಿಗೆ ಹಿಡಿದಿರುವುದು ಅವರಿಗೆ ಅನಿವಾರ್ಯವಾಗಿ ಹೋಗಿದೆ.

ಇದೀಗ ವೃದ್ಧೆ ತಾಯಿಗೆ ಕಣ್ಣು ಕಾಣಿಸುತ್ತಿಲ್ಲ. ಗ್ಯಾಸ್ಟಿಕ್‌, ರಕ್ತದ ಒತ್ತಡ, ತಲೆಸುತ್ತು ಮುಂತಾದ ಕಾಯಿಲೆಗಳಿಂದ ವೃದ್ಧೆ ಬಳಲುತಿದ್ದಾರೆ. ನರನಾಡಿಗಳಲ್ಲಿ ಶಕ್ತಿ ಕುಂದಿದ್ದರೂ ಅಡುಗೆ ಜತೆಗೆ ಮಗನ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಬೇಕು. ಮಳೆಗಾಲದ ಸಂಕಷ್ಟದ ಸ್ಥಿತಿಯಲ್ಲಿ ಪಡಲಾಗದ ಕಷ್ಟ ಈ ವೃದ್ಧೆ ಪಡುವಂತಾಗಿದೆ

ಹದಗೆಟ್ಟ ಆರ್ಥಿಕ ಸ್ಥಿತಿ

ಅವಘಡಕ್ಕೆ ಒಳಗಾದ ಬಳಿಕ ಆರೋಗ್ಯ ಸುಧಾರಣೆಗೆ ಸಾಕಷ್ಟು ಚಿಕಿತ್ಸೆ ಮಾಡಲಾಗಿದೆ. ಲಕ್ಷಗಟ್ಟಲೆ ಹಣ ಖರ್ಚು ಮಾಡಲಾಗಿದೆ. ಆದರೆ ಫಲ ನೀಡಿಲ್ಲ. ಇಲಾಖೆ ಒಂದಷ್ಟು ಪರಿಹಾರ ನೀಡಿ ಕೈ ತೊಳೆದುಕೊಂಡಿದೆ.

ಸ್ಥಳೀಯರು, ಸಂಘ ಸಂಸ್ಥೆಗಳು ಕೈಲಾದಷ್ಟು ನೆರವು ನೀಡಿವೆ. ಸರಕಾರ ಇತ್ತೀಚಿನ ದಿನಗಳಿಂದ 1200 ರೂ. ಮಾಸಾಶನ ನೀಡುತ್ತಿದೆ. ಧರ್ಮಸ್ಥಳ ಕ್ಷೇತ್ರದಿಂದ ತಿಂಗಳಿಗೆ 500 ರೂ. ಬರುತ್ತಿದೆ. ಹಾಗಿದ್ದರೂ ಕೃಷ್ಣ ರೈ ಅವರ ದೈನಂದಿನ ಔಷಧಿ ಸೇರಿದಂತೆ ಇತರ ಖರ್ಚಿಗೆ ಹಣ ಸಾಕಾಗುತ್ತಿಲ್ಲ.ಆರೈಕೆ ನಡೆಸುತ್ತಿರುವ ಸುಬ್ಬಕ್ಕರಿಗೂ ದಿನನಿತ್ಯ ಔಷಧಿ ಅಗತ್ಯವಿರುವುದರಿಂದ ಖರ್ಚ ವಿಪರೀತವಾಗಿದೆ.

ಇಬ್ಬರನ್ನೂ ಭಾದಿಸಿದೆ ಜ್ವರ

ಇದೀಗ ಎಲ್ಲೆಡೆ ವ್ಯಾಪಿಸಿಕೊಂಡಿರುವ ಜ್ವರ ಅನಾರೋಗ್ಯ ಪೀಡಿತ ಕೃಷ್ಣ ರೈ ಹಾಗೂ ನೋಡಿಕೊಳ್ಳುತ್ತಿರುವ ತಾಯಿ ಇಬ್ಬರನ್ನೂ ಭಾದಿಸಿದೆ. ಜ್ವರ ಬಾಧೆಯಿಂದ ತತ್ತರಿಸಿರುವ ತಾಯಿ ಮಗ ಸಂಕಷ್ಟದ ದಿನಗಳನ್ನು ಕಳೆಯುತಿದ್ದಾರೆ. ಕುಟುಂಬಕ್ಕೆ ಅಪ್ಪಳಿಸಿದ ಕಾಯಿಲೆಗಳಿಂದ ಮರುಗುತ್ತಿರುವ ಈ ಕುಟುಂಬ ಕಣೀ¡ರಿನಲ್ಲಿ ರೈ ತೊಳೆಯುತ್ತಿದೆ.

ಸಂಕಷ್ಟದಲ್ಲಿರುವ ತಾಯಿ ಮಗನ ಈ ಕುಟುಂಬಕ್ಕೆ ಸಹಾಯ ಹಸ್ತದ ಅವಶ್ಯಕತೆಯಿದೆ. ಆರ್ಥಿಕ ನೆರವು ನೀಡುವವರು ಕೃಷ್ಣ ರೈ, ವಿಜಯ ಬ್ಯಾಂಕ್‌ ಕೊಲ್ಲಮೊಗ್ರು ಶಾಖೆಯ ಖಾತೆ ಸಂಖ್ಯೆ 131101010002384ಗೆ ಜಮೆ ಮಾಡಬಹುದು. ಅಥವಾ ದೂ.ಸಂ.9483446223ನ್ನು ಸಂಪರ್ಕಿಸಬಹುದಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)