ಬ್ರಹ್ಮಾವರ: ಪ್ರೇಮಿಗಳ ಆತ್ಮಹತ್ಯೆ

0
3487

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (2) ಖಂಡಿಸುವೆ (3) ಅಭಿಪ್ರಾಯವಿಲ್ಲ (0)

sucide

ಉಡುಪಿ: ಪ್ರೇಮಪಾಶದಲ್ಲಿ ಸಿಲುಕಿದ್ದ ಯುವಕ ಮತ್ತು ಅಪ್ರಾಪ್ತ ವಯಸ್ಸಿನ ಬಾಲಕಿಯ ಪ್ರೇಮ ಈರ್ವರ ಆತ್ಮಹತ್ಯೆಯಲ್ಲಿ ಅಂತ್ಯಕಂಡಿದೆ. ಉಡುಪಿ ಜಿಲ್ಲೆಯ ಸಾಯಿಬ್ರಕಟ್ಟೆ ಪರಿಸರದ ರಿಕ್ಷಾ ಚಾಲಕ ದಿವಾಕರ (26) ಮತ್ತು ಮಂದರ್ತಿ ಹೈಸ್ಕೂಲ್ ವಿದ್ಯಾರ್ಥಿನಿ ಚೈತ್ರಾ (16) ಆತ್ಮಹತ್ಯೆಗೆ ಶರಣಾದವರು.

4

sucide 2

sucide 3

ಕಳೆದ ಕೆಲ ವರ್ಷಗಳಿಂದ ದಿವಾಕರ್ ಮತ್ತು ಚೈತ್ರ ಪ್ರೇಮಿಸುತ್ತಿದ್ದು ಅದು ಈ ಪರಿಸರದಲ್ಲಿ ಹಲವರಿಗೆ ತಿಳಿದಿತ್ತು. ದಿವಾಕರ್ ಚೈತ್ರಾಳನ್ನು ಆಗಾಗ ಭೇಟಿ ಮಾಡುತ್ತಾ ಹಲವೆಡೆ ಆಕೆಯ ಜೊತೆ ಸುತ್ತಾಡುತ್ತಿದ್ದ. ಈ ನಡುವೆ ಆಕೆ ಇನ್ನೂ ಅಪ್ರಾಪ್ತ ವಯಸ್ಸಿನವಳಾದ ಕಾರಣ ಆಕೆಯ ಜೊತೆ ಸುತ್ತಾಡದಂತೆ ಕೆಲವರು ದಿವಾಕರ್‌ಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ನಿನ್ನೆ ಅಚಾನಕ್ ಆಗಿ ದಿವಾಕರ್ ಮತ್ತು ಚೈತ್ರ ಇಬ್ಬರೂ ಕಾಣೆಯಾಗಿದ್ದರು.

ಇಂದು ಇಬ್ಬರೂ ಸಹ ಜೊತೆಯಾಗಿ ಮರಕ್ಕೆ ಒಂದೇ ಬಳ್ಳಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ರಹ್ಮಾವರ ಸಮೀಪದ ತಮ್ಮ ಮನೆ ಸಮೀಪ ಕಾಜ್ರಳ್ಳಿ ಎಂಬಲ್ಲಿ ಇಬ್ಬರೂ ಸಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ರಿಕ್ಷಾ ಚಾಲಕ ದಿವಾಕರ್ ಈ ಪರಿಸರದಲ್ಲಿ ಉತ್ತಮ ನಡತೆಗೆ ಹೆಸರಾಗಿದ್ದು ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಹೇಗೆ ಬಂದರು ಎಂದು ಜನರಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದಿವಾಕರ್ ಮತ್ತು ಚೈತ್ರಾ ಸಾರ್ವಜನಿಕ ಸ್ಥಳವೊಂದರಲ್ಲಿ ಸುತ್ತುತ್ತಿದ್ದಾಗ ಕೆಲವರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಈ ಆವಮಾನವೇ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿತು ಎನ್ನಲಾಗುತ್ತಿದೆ. ದುಡುಕಿನ ನಿರ್ಧಾರವೊಂದು ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (2) ಖಂಡಿಸುವೆ (3) ಅಭಿಪ್ರಾಯವಿಲ್ಲ (0)