ಕರಾವಳಿ ಕಲ್ಲಂಗಡಿ ಅಧ್ಯಯನಕ್ಕೆ ಕ್ಯಾಲಿಫೊರ್ನಿಯ ಯುವಕ.

0
1879

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

kalangadi 1

ಬ್ಯೆಂದೂರು: ಆಸಕ್ತಿ ಎನ್ನುವುದು ವಿಭಿನ್ನವಾಗಿ ಹಾಗೂ ವಿಶೇಷವಾಗಿರುತ್ತದೆ.ಚಿತ್ರ ವಿಚಿತ್ರ ಹವ್ಯಾಸಗಳ ಜೊತೆ ಬೆಳಸಿಕೊಂಡ ಕಾಯಕ ಮಹೋನ್ನತ ಮಟ್ಟಕ್ಕೆ ಬೆಳೆಸುತ್ತದೆ ಎನ್ನುವುದಕ್ಕೆ ಸಾರ್ಥಕ ಹವ್ಯಾಸಗಳೇ ಸಾಕ್ಷಿ. ಈ ನೆಲೆಯಲ್ಲಿ ಹಣ್ಣುಗಳ ಬಗ್ಗೆ ವಿಶೇಷ ಆಸಕ್ತಿ ಮೂಡಿಸಿಕೊಂಡ ಕ್ಯಾಲಿಪೊರ್ನಿಯದ ಯುವಕನೊಬ್ಬ ಕರಾವಳಿ ಜಿಲ್ಲೆಯ ಕಲ್ಲಂಗಡಿ ಅಧ್ಯಯನಕ್ಕೆ ಆಗಮಿಸುವ ಮೂಲಕ ಗುರುತಿಸಿಕೊಂಡಿದ್ದಾನೆ.

ಹೆಸರು ಸ್ಟೀವನ್ ಮರ್ರೆ. 29 ವರ್ಷದ ಯುವಕನಾಗಿರುವ ಈತ ಮೂಲತ ಕ್ಯಾಲಿಪೊರ್ನಿಯದವನಾಗಿದ್ದಾನೆ.ಚೀನಾ ಯುನಿವರ್ಸಿಟಿಯಲ್ಲಿ ಬ್ಯಾಚುಲರ್ ಆಫ್ ಸೈನ್ಸ್,ಪ್ಲಾಂಟೆಶನ್ಸ್ ಪದವೀಧರನಾಗಿದ್ದಾನೆ.ಕೃಷಿ ಕುಟುಂಬದಲ್ಲೆ ಜನಿಸಿದ ಸ್ಟೀವನ್‌ಗೆ ಹಣ್ಣುಗಳ ಬೆಳೆಯ ಬಗ್ಗೆ ವಿಶೇಷವಾದ ಆಸಕ್ತಿಯಿದೆ.ತನ್ನ ಕುಟುಂಬದ 320 ಎಕರೆ ಜಮೀನಿನಲ್ಲಿ 300 ಬಗೆಯ ಹಣ್ಣುಗಳನ್ನು ಬೆಳೆದಿರುವ ಜೊತೆಗೆ ಸಾಂಪ್ರದಾಯಿಕ ಕೃಷಿಯಿಂದ ಹೈಟೆಕ್ ತಂತ್ರಜ್ಞಾನ ಬಳಸಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾನೆ.ಸಾಮಾಜಿಕ ಜಾಲ ತಾಣಗಳಲ್ಲಿ ಇಂಟರ್ ನ್ಯಾಷನಲ್ ರಾ ಫ್ರೂಟ್ ಆರ್ಗನೈಜೇಶನ್ ಗುಂಪಿನ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾನೆ.

kalangadi 2

kalangadi 3

kalangadi 4

ಅತೀ ಕಿರಿಯ ವಯಸ್ಸಿನಲ್ಲಿ 45 ದೇಶಗಳನ್ನು 9 ತಿಂಗಳಲ್ಲಿ ಸುತ್ತಾಡಿರುವ ಜೊತೆಗೆ ಚೀನಾ,ಥ್ಯಾಲೆಂಡ್,ಮಲೇಷಿಯಾ,ಲಾವಾಸ್,ಮಯಾನ್ಮರ್,ಶ್ರೀಲಂಕಾ,ದುಬ ಮುಂತಾದ ಪ್ರಮುಖ ದೇಶಗಳ ಹಣ್ಣುಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾನೆ.ಭಾರತದ 1500 ಕ್ಕೂ ಅದಿಕ ಪ್ರಭೇದಗಳನ್ನು ಗುರುತಿಸಿ ಸಂಗ್ರಹಿಸಿದ್ದಾನೆ.19ನೇ ವರ್ಷದಲ್ಲಿ ಮ್ಯಾಕ್ಸಿಕೋದಲ್ಲಿರುವ ಕಾರಣ ಅಲ್ಲಿನ ಭಾಷೆಯ ಅರಿವು ಹೊಂದಿದ್ದಾನೆ.ಶಿರೂರು ಸಮೀಪದ ತೂದಳ್ಳಿ ರೆಸಾರ್ಟ್‌ನಲ್ಲಿ ಉದಯವಾಣಿ ಜೊತೆ ಮಾತನಾಡಿರುವ ಜೊತೆಗೆ ಸುತ್ತ ಮುತ್ತಲಿನ ಕಲ್ಲಂಗಡಿ ತೋಟಗಳಿಗೆ ಬೇಟಿ ನೀಡಿದ್ದಾನೆ.ಯುವ ಕೃಷಿಕ ಪುಷ್ಪರಾಜ್ ಶೆಟ್ಟಿಯವರ ಕಲ್ಲಂಗಡಿ ಬೆಳೆ ವೀಕ್ಷಿಸಿರುವ ಜೊತೆಗೆ ಕಿರಿಯ ವಯಸ್ಸಿನಲ್ಲಿ ಕೃಷಿಯ ಬಗ್ಗೆ ಹಾಗೂ ಜಾಗತಿಕ ಮಟ್ಟದ ಅನುಭವ ಹೊಂದಿರುವುದು ಯುವಕರಿಗೆ ಮಾದರಿಯಾಗಿದೆ ಎನ್ನುತ್ತಾರೆ.

ಕರಾವಳಿಯ ಕಾಡುಗಳಲ್ಲಿರುವ ನೂರಾರು ಪ್ರಬೇದ ಹಣ್ಣುಗಳ ಬಗ್ಗೆ ವಿಶೇಷ ಒಲವು ಹೊಂದಿದ್ದು ಇವುಗಳು ಆರೋಗ್ಯಕ್ಕೆ ಉತ್ತಮವಾಗಿರುವ ಲಕ್ಷಣ ಹೊಂದಿವೆ ಎನ್ನುತ್ತಾನೆ.ಭಾರತದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಮರ್ರೆ ಈ ದೇಶದಲ್ಲಿ ನನಗೆ ಸಾವಿರಾರು ಮಂದಿ ಸ್ನೇಹಿತರಿದ್ದಾರೆ.ಇಲ್ಲಿನ ಹಣ್ಣು ತರಕಾರಿ ಭಾರತೀಯ ಶಾಖಾಹಾರಿ ತಿನಿಸುಗಳು ತುಂಬಾ ಇಷ್ಟವಾಗಿದೆ.ರೈತರ ಬೆಳೆಗಳಿಗೆ ಸಮೀಪದಲ್ಲೆ ಮಾರುಕಟ್ಟೆಯಿದ್ದಾಗ ಮಾತ್ರ ತೃಪ್ತಿ ದೊರೆಯುತ್ತದೆ.ಭಾರತದಲ್ಲಿ ಬಹುತೇಕ ಹಣ್ಣುಗಳು ಮಾರಾಟ ವ್ಯವಹಾರ ಮದ್ಯವರ್ತಿಗಳ ಕಪಿಮುಷ್ಟಿಯಲ್ಲಿ ನಲುಗುತ್ತಿದೆ. ಮಾರುಕಟ್ಟೆ ಸಮಸ್ಯೆಗಳನ್ನು ಹೊರತುಪಡಿಸಿದರೆ  ದೇಶದಲ್ಲಿ ಉತ್ತಮ ಅವಕಾಶವಿದೆ.ಇಲ್ಲಿನ ಸಾಂಪ್ರದಾಯಿಕ ಕೃಷಿಯ ಜೊತೆಗೆ ತಂತ್ರಜ್ಞಾನಗಳ ಅಳವಡಿಕೆ ಮಾಡಿಕೊಂಡಾಗ ಅದಿಕ ಲಾಭ ಪಡೆಯಲು ಸಾಧ್ಯವಾಗುತ್ತದೆ ಎನ್ನುವುದು ಇವರ ಅಭಿಪ್ರಾಯವಾಗಿದೆ.

ಅದೇನೆಯಿದ್ದರು ಸಹ ಕರಾವಳಿ ಕಲ್ಲಂಗಡಿ ತೋಟದಲ್ಲಿ ವಿದೇಶಿ ಯುವಕ ಅಧ್ಯಯನಕ್ಕೆ ಆಗಮಿಸುವ ಮೂಲಕ ಹಣ್ಣುಗಳ ಬೆಳೆಗೆ ಇನ್ನಷ್ಟು ಪ್ರೇರಣೆ ದೊರೆತಂತಾಗಿದೆ..

ವರದಿ;ವೆಬ್ಬೇಶ್

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)