ಬಸ್ ಢಿಕ್ಕಿ-ಆಮ್ನಿ ಕಾರು ಚಾಲಕ ಸಾವು.

0
551

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

axident

ಮೂಡಬಿದಿರೆ: ಬೆಳುವಾಯಿ-ಕಾಂತಾವರ ಕ್ರಾಸ್ ಬಳಿ ಖಾಸಗಿ ಬಸ್ಸು-ಆಮ್ನಿ ಕಾರು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಆಮ್ನಿ ಚಾಲಕ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.

ಸಾಣೂರಿನಲ್ಲಿ ಮದುವೆ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ವಾಪಾಸ್ಸು ಬರುತ್ತಿದ್ದ ಅಲಂಗಾರ್‌ನ ಮಂಜುನಾಥ ಸೈಕಲ್ ಶಾಪ್‌ನ ಮಾಲಕ ವೀರಪ್ಪ(45) ಘಟನೆಯಲ್ಲಿ ಮೃತಪಟ್ಟವರು.ಕಾರಿನಲ್ಲಿ ಪತ್ನಿ ರತ್ನಾ,ಪುತ್ರಿ ಮಂಜುಶ್ರೀ ಸಂಬದಿಕರು ಪ್ರಯಾಣಿಸುತ್ತಿದ್ದರು.ಸುಶೀಲಾ ಅವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ.ರತ್ನಾ ಹಾಗೂ ಮಂಜುಶ್ರೀ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.ಕಾಂತಾವರ ಕಡೆಯಿಂದ ಬಕ್ ಸವಾರನೊಬ್ಬ ನೇರ ರಾಷ್ಟೀಯ ಹೆದ್ದಾರಿಗೆ ಬಂದಾಗ ಆತನನ್ನು ಬಚಾವು ಮಾಡಲು ಬಸ್ ಚಾಲಕ ಬಲಬದಿಗೆ ಚಲಾಯಿಸಿದನೆಂದು ಹೇಳಲಾಗಿದೆ.ಎಸ್.ಎಸ್.ಎಲ್.ಸಿ ಪರೀಕ್ಷೆಯ ಕಾರಣದಿಂದ ವೀರಪ್ಪ ಅವರ ಪುತ್ರ ಶೈಲೇಶ್ ಮದುವೆಗೆ ಹೋಗಿರಲಿಲ್ಲ ಎಂದು ತಿಳಿದು ಬಂದಿದೆ.ಕಾರು ಸಜ್ಜು ಗುಜ್ಜಾಗಿದ್ದು ಬಸ್ಸಿನ ಎದುರಿನ ಗಾಜು ಪುಡಿಪುಡಿಯಾಗಿದೆ.

axident.2

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)