ಜಾಗತಿಕ ಮಹಿಳಾ ದಿನಾಚರಣೆ ಸ್ತ್ರೀಶಕ್ತಿಗೆ ಪೂರಕವಾಗಲಿ : ಮೇಡಂ ಪಿಂಟೋ

0
3525

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

7-03-2015-18

ಬೈಂದೂರು: “ಸಮಗ್ರ ಅಭಿವೃದ್ಧಿಗೆ ಹೆಣ್ಮಕ್ಕಳ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕಿಂತ ಪರಿಣಾಮಕಾರಿಯಾದ ಅಸ್ತ್ರವೇ ಇಲ್ಲ…” ವಿಶ್ವಸಂಸ್ಥೆಯ ಮಾಜಿ ಮಹಾ ಕಾರ್ಯದರ್ಶಿ ಕೋಫಿ ಅನ್ನಾನ್ ನೀಡಿದ ಈ ಹೇಳಿಕೆ ಸಮಾಜದಲ್ಲಿ ಮಹಿಳೆಯರು ಎಷ್ಟು ಮಹತ್ವದ ಪಾತ್ರ ವಹಿಸುತ್ತಾರೆ ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ. ಇಂತಹ ಹೇಳಿಕೆಗಳು ಮತ್ತು ಪ್ರಶಂಸೆಗಳು ಮಹಿಳೆಯರ ಪ್ರಗತಿ ಮತ್ತು ಗುರುತಿಸುವಿಕೆಗೆ ಪರಿಣಾಮಕಾರಿ ಪ್ರೇರಣೆ. ಈ ಮೂಲಕ ಮಹಿಳೆಯರ ಸಾಮರ್ಥ್ಯ ಹೆಚ್ಚುತ್ತದೆ.

ಇಂದು , ಅಂತರಾಷ್ಟ್ರೀಯ ಮಹಿಳಾ ದಿನ. ಈ ದಿನ ಪ್ರತಿಯೊಬ್ಬರಿಗೂ ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಮತ್ತು ಅವರ ಮಹೋನ್ನತ ಕೊಡುಗೆಗಳನ್ನು ಸ್ಮರಿಸುವ ಮತ್ತು ಆಚರಿಸುವ ಅವಕಾಶ ದೊರೆತಿದೆ.

20 ವರ್ಷಗಳ ಹಿಂದೆ ಅಂದರೆ 1995 ರಲ್ಲಿ ಬೀಜಿಂಗ್‌ನಲ್ಲಿ ನಡೆದ ಮಹಾನ್ ಐತಿಹಾಸಿಕ ಸಮಾವೇಶದಲ್ಲಿ ಸುಮಾರು 189 ಸರ್ಕಾರಗಳು ಲಿಂಗಸಮಾನತೆಗಾಗಿ ದಾರ್ಶನಿಕ ಮಾರ್ಗದರ್ಶನವನ್ನು ದತ್ತು ಸ್ವೀಕರಿಸಿದವು. ಈ ವರ್ಷ ವಿಶ್ವಸಂಸ್ಥೆ ಮಹಿಳಾ ಸಂಘಟನೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಒಂದು ಅದ್ಭುತವಾದ ಸಿದ್ಧಾಂತದೊಂದಿಗೆ ಆಚರಿಸಲಿದೆ. ಹೌದು, ಆ ಸಿದ್ಧಾಂತವೇ “ಮಹಿಳಾ ಸಬಲೀಕರಣ, ಮಾನವತಾ ಸಬಲೀಕರಣ ಅದರ ಚಿತ್ರ”. ಈ ದಿನ ಹಲವು ಮಹಿಳೆಯರ ಸಾಧನೆಗಳನ್ನು ಆಚರಿಸಲಿದೆ ಮತ್ತು ಅವರಿಗೆ ಎದುರಾಗಿದ್ದ ಸವಾಲುಗಳನ್ನು ಮತ್ತು ಅವರ ಗೌರವಯುತ ಜೀವನ ಹಕ್ಕುಗಳಿಗೆ ಅಡ್ಡಿಯಾದ ಅಂಶ ಅವಶ್ಯಕ ಕ್ರಮಗಳನ್ನು ಉತ್ತೇಜಿಸಲಿದೆ.

ಅಂತರಾಷ್ಟ್ರೀಯ ಮಹಿಳಾ ದಿನ ವಿಶ್ವಸಂಸ್ಥೆಯ ಮಹಿಳಾ ಸಂಘಟನೆ ಈ ಜಗತ್ತಿನಲ್ಲಿ ಪ್ರತಿಯೊಬ್ಬ ಹೆಣ್ಮಗಳು ಜೀವನದ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಸಮಾನ ಹಕ್ಕು, ಸ್ವಾತಂತ್ರ್ಯ ಮತ್ತು ಸವಲತ್ತುಗಳನ್ನು ಹೊಂದಿದ್ದಾರೆ ಎಂಬ ದೃಷ್ಟಿಕೋನವನ್ನು ಪುನಶ್ಚೇತನಗೊಳಿಸಲಿದೆ. ಇದು ಜಾಗತಿಕ ಆಥಿಕತೆ, ಅದೇ ರೀತಿ ಉದ್ಯೋಗ ಮತ್ತು ಉದ್ಯಮ ಎರಡರಲ್ಲೂ ಮಹಿಳೆಯರ ನಾಯಕತ್ವವನ್ನು ಸಮಗ್ರವಾಗಿ ಸಹಜವಾಗಿ ಹೆಚ್ಚಿಸಲಿದೆ.

ಹಲವು ಸಮೀಕ್ಷೆಗಳು ಹೇಳುವ ಪ್ರಕಾರ ಹೆಚ್ಚು ಮಹಿಳಾ ಸಿಬ್ಬಂದಿಗಳನ್ನು ಹೊಂದಿರುವ ಕಂಪೆನಿಗಳು ಅದರ ಪಾಲುದಾರರಿಗೆ ಹೆಚ್ಚಿನ ಪ್ರಮಾಣದ ಲಾಭಾಂಶಗಳನ್ನು ತಂದುಕೊಟ್ಟಿದೆ ಮತ್ತು ಉನ್ನತ ಮಟ್ಟದ ಲಿಂಗ ಸಮಾನತೆ ಹೊಂದಿರುವ ದೇಶಗಳಲ್ಲಿ ಆಥಿಕ ಅಭಿವೃದ್ಧಿ ಉನ್ನತ ಮಟ್ಟದಲ್ಲಿರುತ್ತವೆ ಎಂದು. ಈ ನಿಟ್ಟಿನಲ್ಲಿ ನಿಜವಾಗಿಯೂ ಶಿಕ್ಷಣದ ಪಾತ್ರ ಬಹಳ ಮಹತ್ವ ಪಡೆದಿದೆ. ಹೆಚ್ಚಿನ ಮಹಿಳೆಯರು ಆಥಿಕ ಪ್ರಗತಿ ಮತ್ತು ಅಭಿವೃದ್ಧಿ ಉತ್ತೇಜನದಲ್ಲಿ ನಾಯಕತ್ವ ವಹಿಸಿದ್ದಾರೆ ಎಂದರೆ ಅದಕ್ಕೆ ಶಿಕ್ಷಣವೇ ಕಾರಣ. ಇದು ಮುಂದಿನ ದಶಕದಲ್ಲಿ ಸುಮಾರು ಒಂದು ಬಿಲಿಯನ್ ಮಹಿಳೆಯರನ್ನು ಜಾಗತಿಕ ಆಥಿಕತೆಗೆ ಪ್ರವೇಶಿಸುವಂತೆ ಮಾಡುತ್ತಿದೆ. ಶಿಕ್ಷಣ ಖಂಡಿತವಾಗಿಯೂ ಜಾಗತಿಕ ಉದ್ಯಮ ಮತ್ತು ಆಥಿಕತೆಯಲ್ಲಿ ಅಸಾಧಾರಣ ಬದಲಾವಣೆ ತರಲಿದೆ ಮತ್ತು ರಚನಾತ್ಮಕ ರೂಪಾಂತರ ನೀಡಲಿದೆ. ಇದೇ ವೇಳೆ ನಾವು ತಂತ್ರಜ್ಞಾನದ ವಿಕಸನ ಮತ್ತು ಜಾಗತೀಕರಣದ ಅಭಿವೃದ್ಧಿ ಬಗ್ಗೆ ಮಾತಾನಾಡಿದರೆ ಅದರ ಅಭಿವೃದ್ಧಿ ಮತ್ತು ಪ್ರಗತಿಗೆ ಕೂಡ ಮಹಿಳೆಯರ ಕೊಡುಗೆಗಳು ಸಾಕಷ್ಟಿದೆ.

ಪ್ರಸಕ್ತ ಕಾಲದಲ್ಲಿ ಮಹಿಳೆ ತನ್ನ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು, ರಾಜಕೀಯದಲ್ಲಿ ಪಾಲ್ಗೊಳ್ಳುವುದು, ಶಿಕ್ಷಣ ಪಡೆಯುವುದು ಮತ್ತು ಆದಾಯ ಗಳಿಸುವುದು ಇತ್ಯಾದಿ ಅವಳ ಆಯ್ಕೆಗೆ ಬಿಟ್ಟಿರುವ ವಿಚಾರಗಳಾಗಿವೆ.
ಕಳೆದ ದಶಕಗಳಿಂದ ಸಾಕಷ್ಟು ಪ್ರಗತಿಗಳನ್ನು ಮಾಡಲಾಗಿದ್ದರೂ ಮಹಿಳಾ ಭದ್ರತೆಯ ವಿಚಾರಕ್ಕೆ ಬಂದರೆ ಆಕೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾಳೆ. ಮಹಿಳಾ ದೌರ್ಜನ್ಯ, ಅಭದ್ರತೆ ಮತ್ತು ಮಹಿಳೆ ಮತ್ತು ಪುರುಷರ ನಡುವಿನ ಅಸಮಾನತೆ ಸಾಕಷ್ಟು ಎದ್ದು ಕಾಣುತ್ತಿದೆ. ಇದೀಗ ಪ್ರತಿಯೊಂದು ದೇಶವೂ ಒಟ್ಟಾಗಿ ಈ ಪಥವನ್ನು ಪೂರ್ಣಗೊಳಿಸುವ ಸಮಯ ಬಂದೊದಗಿದೆ. ಇಂದು ಪ್ರತಿಯೊಂದು ದೇಶವೂ ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಹಕ್ಕುಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮಾಡಿಕೊಂಡಿರುವ ಬದ್ಧತೆಯನ್ನು ಪುನರ್ ನವೀಕರಿಸಬೇಕು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವಾದ ಇಂದು ನಾವು ಒಟ್ಟಾಗಿ ಮಹಿಳಾ ಸಬಲೀಕರಣದ ದೃಷ್ಟಿಕೋನವನ್ನು ವಾಸ್ತವಕ್ಕೆ ಪರಿವರ್ತನೆಗೊಳಿಸುವ ಉತ್ತಮ ಜಗತ್ತಿಗಾಗಿ ಒಕ್ಕೊರಲಿನಿಂದ ಕೂಗೋಣ. ನಮ್ಮ ಧ್ವನಿ ಜಗತ್ತನ್ನು ತಟ್ಟುವಂತೆ ಮಾಡೋಣ ಎಂದು ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರವರ್ತಕಿ-ಆಡಳಿತ ನಿರ್ದೇಶಕಿ ಅಚ್ಚ ತುಳು ಕನ್ನಡದ ಮಹಾನ್ ಸಾಧಕಿ ಗ್ರೇಸ್ ಪಿಂಟೋ ಸಮಗ್ರ ಸ್ತ್ರೀಕುಲಕ್ಕೆ ಕರೆಯಿತ್ತಿದ್ದಾರೆ. ಅಂತೆಯೇ ಸರ್ವ ಮಹಿಳೆಯರಿಗೂ ಮೇಡಂ ಪಿಂಟೋ ಮಹಿಳಾ ದಿನಾಚರಣೆಯ ಹೃದಯಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.

ಪಿಂಟೋ ಮೇಡಂ ಮಹಿಳೆಯರಿಗೆ ನೀಡಿದ ಸಂದೇಶಗಳು: ಒಂದು ದೇಶದ ಸಮಗ್ರ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿತ್ತು ಎಂಬುದು ಈಗಾಗಲೇ ಸಾಬೀತಾಗಿದೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯೂ ತನ್ನ ಕುಟುಂಬ ಮಾತ್ರವಲ್ಲದೆ ಇಡೀ ಸಮಾಜದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತಾಳೆ. ಇಡೀ ಸಮಾಜವನ್ನು ಪರಿವರ್ತಿಸುವ ಶಕ್ತಿ ಮಹಿಳೆಗಿದೆ ಎಂದು ನಾನು ನಂಬಿದ್ದೇನೆ.

ಮಹಿಳೆಯರ ದಿನ ಪ್ರತಿಯೊಬ್ಬ ಮಹಿಳೆಯೂ ತಮ್ಮ ಸ್ವಂತ ವ್ಯಕ್ತಿತ್ವವನ್ನು ಸಂತೋಷದಿಂದ ಆಲಿಂಗಿಸಿಕೊಳ್ಳಿ, ಏಕೆಂದರೆ ಅದು ನಿಮಗೆ ನಿಮ್ಮ ಸ್ವಂತ ವ್ಯಕ್ತಿತ್ವವನ್ನು ಕೊಡುತ್ತದೆ. ಮೌಲ್ಯಗಳನ್ನು ನಿಮ್ಮೊಂದಿಗೆ ತುಂಬಿಕೊಳ್ಳಿ. ನಿಮ್ಮ ಧ್ವನಿಯನ್ನು ಬಳಸಿಕೊಂಡು ನಿಮ್ಮ ಹಕ್ಕುಗಳಿಗಾಗಿ ಎದ್ದುನಿಲ್ಲಿ. ನೀವು ಗೆಲ್ಲುವುದಕ್ಕಾಗಿ ಹುಟ್ಟಿದ್ದೀರಿ, ಸೃಷ್ಟಿಕರ್ತ ನಿಮಗೆ ದೈವಿಕ ಗುಣಗಳಾದ ಸಹನೆ, ಸ್ಥಿತಿಸ್ಥಾಪಕತೆ ಮತ್ತು ನಿಷ್ಠೆಯನ್ನು ಕೊಟ್ಟಿದ್ದಾನೆ. ಅವುಗಳನ್ನು ಶಿಖರಗಳಂತೆ ಬೆಳೆಸಬಹುದು. ನಿಮ್ಮ ಕನಸು, ಆತ್ಮಸಾಕ್ಷಿಯನ್ನು ಅನುಸರಿಸಿ, ಯಾವತ್ತೂ ಹಿಂದೆ ಸರಿಯಬೇಡಿ.

“ನೀವೇನಾದರೂ ಸಾಧಿಸಲು ಬಯಸಿದಾಗ ಎಲ್ಲಾ ಬ್ರಹ್ಮಾಂಡದ ಸಂಚುಗಳು ಅದನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ” ಎಂದು ಪೌಲೊ ಕೊಯೆಲೊ ಬಹಳ ಸುಂದರವಾಗಿ ಇದನ್ನು ವಿವರಿಸಿದ್ದಾನೆ. ಇತಿಹಾಸದ ಶ್ರೇಷ್ಟ ಮಹಿಳೆಯರು ಈ ನಿಲುವಿಗೆ ಸಾಕ್ಷಿಯಾಗಿದ್ದಾರೆ. ಇದು ನಿಮಗೆ ನಿಮ್ಮ ಕ್ಷೇತ್ರದಲ್ಲಿ ಪರಿಣತಿ ಹೊಂದಲು ಸ್ಪೂರ್ತಿ, ಪ್ರೇರಣೆ ಮತ್ತು ಉತ್ತೇಜಕವಾಗಬಹುದು. ಭಾರತ ದೇಶದಲ್ಲಿ ಸರ್ಕಾರದ ಜೊತೆಗೆ ಹಲವು ಸಂಘಸಂಸ್ಥೆಗಳು ಮತ್ತು ಗುಂಪುಗಳು ಮಹಿಳೆಯರ ಆರೋಗ್ಯ ಕೇಂದ್ರ, ಶಿಕ್ಷಣ, ಸಮಾನತೆ ಮತ್ತು ಮಹಿಳೆಯರು ತಮ್ಮ ಹಕ್ಕುಗಳನ್ನು ನಿರ್ಭಯವಾಗಿ ಪ್ರಯೋಗಿಸಲು ಸುರಕ್ಷಿತ ವಾತಾವರಣ ಒದಗಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿವೆ. ಅವರ ಈ ಮಹತ್ವದ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯ ಮತ್ತು ಗೌರವನೀಯವಾದುದು ಎಂದಿದ್ದಾರೆ.

ವರದಿ – ನರಸಿಂಹ ನಾಯಕ್

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)