ಬೈಂದೂರು: ಹೋಮೀಯೋಪತಿ ತಜ್ಞ ಡಾ| ರೋಶನ್ ಪಾಯಸ್ – ವಿಶೇಷ ಸಂದರ್ಶನ

10
5073

10-1-2015-15

ಬೈಂದೂರು: ಇಲ್ಲಿನ ಜನಪ್ರಿಯ  ಹೋಮೀಯೋಪತಿ  ತಜ್ಞ ಡಾ| ರೋಶನ್  ಪಾಯಸ್ ಇವರ  ವಿಶೇಷ ಸಂದರ್ಶನ ಕಾರ್ಯಕ್ರಮ ಇತ್ತೀಚೆಗೆ ಬೈಂದೂರ್ ಡಾಟ್ ಕಾಮ್ ನ ಸಲಗೆಗಾರರಾದ ಬಿ.ಜಿ. ಮೋಹನ್ ದಾಸ್ ಹಾಗೂ ಮುಖ್ಯಸ್ಥರಾದ ಕಮಲೇಶ್ ಬಿ.ಜಿ ಮತ್ತು ವರದಿಗಾರ್‍ಅರಾದ ನರಸಿಂಹ ನಾಯಕ್ ಇವರ ನೇತೃತ್ವದಲ್ಲಿ ನಡೆಯಿತು.

ಸಂದರ್ಶನ ಕಾರ್ಯಕ್ರಮದಲ್ಲಿ ಹೋಮಿಯೋಪತಿ ಔಷದ ಬಗ್ಗೆ  ಕೇಳಿದ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವುದರ ಮೂಲಕ ಪೂರ್ಣ ಮಾಹಿತಿ ನೀಡಿದರು.

10-1-2015-11

10-1-2015-12

1. ಹೋಮಿಯೊಪತಿ ವೈದ್ಯ ಪದ್ಧತಿ ಇತರೆ ವೈದ್ಯಪದ್ಧತಿಗಳಿಗಿಂತ ಹೇಗೆ ಭಿನ್ನವಾಗಿದೆ?

ಸಾಮಾನ್ಯವಾಗಿ ಎಲ್ಲಾ ಪದ್ಧತಿಗಳಲ್ಲಿ ರೋಗಕ್ಕೆ ಔಷಧವನ್ನು ಕೊಡುತ್ತಾರೆ. ಆದರೆ ಹೋಮಿಯೊಪತಿಯಲ್ಲಿ ರೋಗಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ.(Treat the Individual Not the Disease) ಹೋಮಿಯೊಪತಿಯಲ್ಲಿ ಔಷಧಿಯ ಅಡ್ಡ ಪರಿಣಾಮಗಳಿರುವುದಿಲ್ಲ ಮತ್ತೆ ಅದನ್ನು ತೆಗೆದುಕೊಳ್ಳುವುದು ಅತ್ಯಂತ ಸುಲಭ ವಿಧಾನವಾಗಿರುತ್ತದೆ. ಅಲ್ಲದೆ ಯಾವುದೇ ಪಥ್ಯದ ಇತಿಮಿತಿಗಳಿರುವುದಿಲ್ಲ ಈ ಎಲ್ಲಾ ಕಾರಣಗಳಿಂದ ಹೋಮಿಯೊಪತಿ ವೈದ್ಯಪದ್ಧತಿಯು ಇತರೆ ವೈದ್ಯ ಪದ್ಧತಿಗಳಿಂದ ಭಿನ್ನವಾಗಿದೆ.

2. ಆಲೊಪತಿ ಔಷಧಿಗಳನ್ನು ಈಗಾಗಲೇ ತೆಗೆದುಕೊಳ್ಳುತ್ತಿರುವವರಿಗೆ ಹೋಮಿಯೊಪತಿ ಜೌಷಧ ಪರಿಣಾಮ ಬೀರುತ್ತದೆಯೇ?
ಖಂಡಿತವಾಗಿಯೂ ಉತ್ತಮ ಪರಿಣಾಮಕಾರಿಯಾಗಿದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಆಲೊಪತಿ ಔಷಧಗಳ ಜೊತೆ ಜೊತೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕೆಲವೊಂದು ಆಲೊಪತಿ ಔಷಧಿಗಳು ಜೀವನ ಅವಶ್ಯಕ ಮತ್ತು ಇಜiಛಿಣ ಆಗಿರುತ್ತದೆ. ಇಂತಹ ಔಷಧಗಳನ್ನು ತಕ್ಷಣ ತ್ಯಜಿಸಲು ಸಾಧ್ಯವಿರುವುದಿಲ್ಲ ಅವುಗಳನ್ನು ಸಾಮಾನ್ಯವಾಗಿ ಅದರ ಪ್ರಮಾಣವನ್ನು ಹಂತ ಹಂತವಾಗಿ ಕಡಿತಗೊಳಿಸುತ್ತಾ ಅದನ್ನು ತ್ಯಜಿಸಬೇಕಾಗುತ್ತದೆ.

3. ಹೋಮಿಯೊಪತಿ ವೈದ್ಯಪದ್ಧತಿಯ ಮೂಲ ಸಿದ್ಧಾಂತ ಯಾವುದು?
Similia similibus curenter ಅಂದರೆ ಯಾವ ಮೂಲ ವಸ್ತುವನ್ನು ಆರೋಗ್ಯವಂತ ಮನುಷ್ಯನಿಗೆ ಕೊಟ್ಟಾಗ ಆತನಲ್ಲಿ ಆದ ರೋಗಲಕ್ಷಣಗಳು ಕಾಣಿಸಿಕೊಂಡು ಅದೇ ಮೂಲವಸ್ತುವನ್ನು ಸತ್ವದ ರೂಪದಲ್ಲಿ (potentisation) ಕೊಟ್ಟಾಗ ರೋಗ ಗುಣವಾಗುತ್ತದೆ. ಇದನ್ನು ಹೋಮಿಯೊಪತಿಯಲ್ಲಿ Miasum theory  ಮತ್ತು Herings law of cure ಬಳಸುತ್ತಾರೆ. Miasm ಅಂದರೆ ಮನುಷ್ಯನ ಸ್ಥಿತಿ ಅಥವಾ deffence. ಸಾಮಾನ್ಯವಾಗಿ ಮನುಷ್ಯನಲ್ಲಿ ಮೂರು ತರದ ಸ್ಥಿತಿಗಳಿರುತ್ತವೆ.

  10-1-2015-14

10-1-2015-16

Physiological (psora)

Constructive deffence (sycotic)

Distructive deffence (cyphylis)

Heringslow of cure  ಅಂದರೆ ರೋಗವು ಹೇಗೆ ಪ್ರಾರಂಭವಾಗುತ್ತದೆ. ಯಾವ ರೀತಿಯಲ್ಲಿ ಮುಂದುವರಿಯುತ್ತದೆ ಅದೇ ರೀತಿ ವಾಪಾಸು ಕೂಡ ಬರುತ್ತದೆ. ಅಂದರೆ ಒಳಗಿನಿಂದ ಹೊರಗೆ ಕೇಂದ್ರದಿಂದ ಪರಿಧಿಯಡೆಗೆ ಹಾಗೂ ಮೇಲಿಂದ ಕೆಳಕ್ಕೆ ಮತ್ತು more important to less important  ಇವೆರಡನ್ನು ಪರಿಗಣಿಸಿ ರೋಗದ ಲಕ್ಷಣಗಳನ್ನು ಗಮನವಿಟ್ಟುಕೊಂಡು ರೋಗಿಯ ಜೀನ್‌ನ ಲಕ್ಷಣಗಳನ್ನು ತಿಳಿದುಕೊಂಡು ಒಂದು ಔಷಧವನ್ನು ಕೊಡುತ್ತಾರೆ. ಅದೇ Genetic constitutional medicine.

4. ಹೋಮಿಯೊಪತಿ ಔಷಧದ ತಯಾರಿಕೆ ಮತ್ತು ಅವುಗಳ ಬಳಕೆ ಕುರಿತು.
ಸಾಮಾನ್ಯವಾಗಿ ಹೋಮಿಯೊಪತಿ ಔಷಧಗಳನ್ನು Pharmacy ಗಳಲ್ಲಿ ತಯಾರು ಮಾಡುತ್ತಾರೆ. ಇದರಲ್ಲಿ ಸಸ್ಯಗಳಿಂದ ಕೆಲವು ಪ್ರಾಣಿಗಳಿಂದ, Minerals  ಅಥವಾ Chemical  ರೋಗಜನ್ಯ ಜೀವಿಗಳಿಂದ, ಮುಂತಾದವುಗಳಿಂದ ತಯಾರಿಸುತ್ತಾರೆ. ಇವುಗಳನ್ನು Potentiation  ಅಂದರೆ ಸತ್ವಗಳಿಕೆ ಕ್ರಿಯೆಗೆ ಒಳಪಡಿಸಿ ಆ ಔಷಧಿಯ ಸತ್ವವನ್ನು ನೀಡಲಾಗುತ್ತದೆ. ಹೋಮಿಯೊಪತಿಯಲ್ಲಿ 3x, 6x, 30c, 200c, 1M, 10M ಮತ್ತು ಅ‌ಒ ಸತ್ವಗಳನ್ನು ಸಾಮಾನ್ಯವಾಗಿ ಉಪಯೋಗಿಸುತ್ತಾರೆ. ಹೆಚ್ಚಿನ ಹೋಮಿಯೊಪತಿ ಜೌಷಧಿಗಳು ದ್ರವರೂಪದಲ್ಲಿರುತ್ತದೆ. ಇದನ್ನು ಸಕ್ಕರೆ ಗುಳಿಗೆಗಳ ಮೇಲೆ ಹಾಕಿದಾಗ ಅದು ಸಕ್ಕರೆ ಗುಳಿಗೆಗಳು medicated ಸಕ್ಕರೆ ಗುಳಿಗೆಗಳಾಗಿ ಅಂದರೆ ಹೋಮಿಯೊಪತಿ ಔಷಧದ ಸಕ್ಕರೆ ಗುಳಿಗೆಗಳಾಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ಒಂದೇ ರೀತಿಯಲ್ಲಿ ಗೋಚರಿಸುವ ಸಕ್ಕರೆ ಗುಳಿಗೆಗಳ ಔಷಧಿಯ ಗುಣ ಬೇರೆ ಬೇರೆಯಾಗಿರುತ್ತವೆ. ಕೆಲವೊಂದು ಸಂದರ್ಭದಲ್ಲಿ ದ್ರವರೂಪದಲ್ಲಿಯೇ ಔಷಧಿಗಳನ್ನು ನೀಡಬಹುದು.

5. ಬೈಂದೂರನ್ನು ತಾವು ಆಯ್ದುಕೊಳ್ಳಲು ಕಾರಣವೇನು?
ಬೆಂಗಳೂರಿನ ಸರಕಾರಿ ಹೋಮಿಯೊಪತಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ B.H.M.S. ಪದವಿಯನ್ನು ಮುಗಿಸಿ, ಕೆಲವೊಂದು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೆಲಸ ಮಾಡಿ ಅನುಭವ ಪಡೆದು ಊರಲ್ಲಿ ಸೇವೆ ಸಲ್ಲಿಸುವ ಉದ್ದೇಶದಿಂದ ಮನೆಯ ಸಮೀಪದ ಬೈಂದೂರನ್ನು ಉದ್ಯೋಗಕ್ಕಾಗಿ ಆಯ್ಕೆಮಾಡಿಕೊಂಡೆ. ಇಂದಿಗೆ ಹದಿನೆಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ.

10-1-2015-17

10-1-2015-18

10-1-2015-19

6. ಈ ಭಾಗದ ಜನರು ಹೋಮಿಯೊಪತಿ ಪದ್ಧತಿಯತ್ತ ಆಕರ್ಷಿತರಾಗಿದ್ದಾರೆಯೇ?
ಬೈಂದೂರಿನ ಜನರು ಹೋಮಿಯೊಪತಿ ವೈದ್ಯಕೀಯ ಚಿಕಿತ್ಸೆಯಲ್ಲಿ ಆಕರ್ಷಿತರಾಗಿದ್ದಾರೆ. ಸಾಮಾನ್ಯವಾಗಿ ಬರುವ ಅಸ್ತಮಾ, ಅಲರ್ಜಿ, ಡಯಾಬಿಟಿಸ್, ಬ್ಲಡ್ ಪ್ರೆಶರ್, ಹಾರ್ಮನಿನ ಸಮಸ್ಯೆಗಳು ಮತ್ತು P.C.O.D ಮುಂತಾದವುಗಳು ಮತ್ತು ಕೆಲವೊಂದು ತುರ್ತು ಚಿಕಿತ್ಸೆಗಳಲ್ಲಿ ಕೂಡ ಶೀಘ್ರ ಪರಿಣಾಮ ಮತ್ತು ಯಾವುದೇ ಅಡ್ಡಪರಿಣಾಮವಿಲ್ಲದ ಚಿಕಿತ್ಸೆ ಮತ್ತು ಕಡಿಮೆ ಖರ್ಚಿನಲ್ಲಿ ಇವೆಲ್ಲ ಲಭ್ಯವಾಗಿರುವುದರಿಂದ ಜನರು ಹೋಮಿಯೊಪತಿ ಔಷಧಿಗಳಲ್ಲಿ ಆಕರ್ಷಿತರಾಗಿದ್ದಾರೆ.

7. ಜನಸಾಮಾನ್ಯರಲ್ಲಿ ಹೋಮಿಯೊಪತಿ ವೈದ್ಯಪದ್ಧತಿಯ ಕುರಿತು ಅರಿವು ಹಾಗೂ ಒಲವು ಮೂಡಿಸಲು ಏನು ಮಾಡಬೇಕು?
ಜನಸಾಮಾನ್ಯರಲ್ಲಿ ಹೋಮಿಯೊಪತಿ ಜೌಷಧಿಯ ಬಗ್ಗೆ ಅರಿವು ಒಲವು ಮೂಡಲು ಮೊದಲಿಗೆ ಹೋಮಿಯೊಪತಿ ವೈದ್ಯರ ಸಂಖ್ಯೆ ಹೆಚ್ಚಾಗಬೇಕು. ಹೊಮಿಯೊಪತಿ ವೈದ್ಯರು ಅಂದರೆ ಹೋಮಿಯೊಪತಿ ತತ್ವದ ಪ್ರಕಾರ ಚಿಕಿತ್ಸೆಯನ್ನು ನೀಡುವುದು. ಈ ಚಿಕಿತ್ಸೆಯಿಂದ ಶೀಘ್ರ ಮತ್ತು ಪರಿಣಾಮಕಾರಿ ಮತ್ತು ಯಾವುದೇ ಅಡ್ಡಪರಿಣಾಮವಿಲ್ಲದ ಚಿಕಿತ್ಸೆಯನ್ನು ನೀಡಿದಲ್ಲಿ ಜನರಿಗೆ ಖಂಡಿತವಾಗಿ ಹೊಮಿಯೊಪತಿ ಔಷಧಿಗಳಲ್ಲಿ ಅರಿವು ಮತ್ತು ಒಲವು ಮೂಡುತ್ತದೆ.

8. ಹೋಮಿಯೊಪತಿ ವೈದ್ಯ ಪದ್ಧತಿಯನ್ನು ಉಳಿಸಿ ಬೆಳಸಲು ಸರಕಾರ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕಾಗಿದೆ?
ನಿಜ ಹೇಳಬೇಕಾದರೆ ಸರಕಾರ ಯಾವ ರೀತಿಯ ಕ್ರಮವನ್ನು ಕೈಗೊಂಡಿಲ್ಲ. ಸರಕಾರದ ಕ್ರಮ ಶೂನ್ಯವೆಂದೇ ಹೇಳಬಹುದು. ಸರಕಾರವು ಆಯುಷ್ ಡಿಪಾರ್ಟ್‌ಮೆಂಟ್‌ನ್ನು ಪ್ರಾರಂಭಿಸಿದರೂ ಹೆಚ್ಚಿನ ಅನುದಾನವೆಲ್ಲ ಆಯುರ್ವೇದ ವೈದ್ಯಪದ್ಧತಿಗೇ ಹೋಗುತ್ತದೆ. ಹೊಮಿಯೊಪತಿಗೆ ಏನೂ ಸಿಗುತ್ತಾ ಇಲ್ಲ. ಆದ್ದರಿಂದ ಸರಕಾರವು ಈ ತಾರತಮ್ಯವನ್ನೂ ಹೋಗಲಾಡಿಸಿ ಹೋಮಿಯೊಪತಿಗೆ ಹೆಚ್ಚಿನ ಅನುದಾನವನ್ನು ನೀಡಿ, ಹೆಚ್ಚಿನ ಕಡೆ ಸರಕಾರಿ ಹೋಮಿಯೊಪತಿ ಆಸ್ಪತ್ರೆಗಳನ್ನು ಸ್ಥಾಪಿಸಿ. ಹೊಮಿಯೊಪತಿ ವೈದ್ಯರನ್ನು ನೇಮಿಸಿಕೊಂಡಲ್ಲಿ ಜನಸಾಮಾನ್ಯರಿಗೆ ಸುಲಭವಾಗಿ ಹೊಮಿಯೊಪತಿ ವೈದ್ಯಕೀಯ ಸೇವೆ ಸಿಗುವುದು. ಅಲ್ಲದೆ ಆಕಾಶವಾಣಿ, ದೂರದರ್ಶನಗಳಲ್ಲಿ ಹೋಮಿಯೊಪತಿ ಬಗ್ಗೆ ಕಾರ್ಯಕ್ರಮಗಳನ್ನು ಅಳವಡಿಸಿ, ಹೊಮಿಯೊಪತಿ ಚಿಕಿತ್ಸೆಯ ಅರಿವನ್ನು ಜನರಿಗೆ ನೀಡಬಹುದು.

9. ಹೋಮಿಯೊಪತಿ ವೈದ್ಯ ಪದ್ಧತಿಯು ಹೆಚ್ಚು ಜನಪ್ರಿಯವಾಗಬೇಕಾದರೆ ವೈದ್ಯರುಗಳು ಯಾವ ಕಾರ್ಯತಂತ್ರ ರೂಪಿಸಿಕೊಳ್ಳಬೇಕು?
ಇಂದು ಹೋಮಿಯೊಪತಿ ವೈದ್ಯ ಪದ್ಧತಿಯು ಜನಪ್ರಿಯವಾಗಿದೆ. ಏಕೆಂದರೆ ಅದು ಎಲ್ಲಾ ರೀತಿಯ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಒಳಗೊಂಡಿದೆ. ಆದ್ದರಿಂದ ಇತರ ಪದ್ಧತಿಗಳಿಂದ ಗುಣವಾಗದ ರೋಗಗಳಿಗೆ ಹೊಮಿಯೊಪತಿಯಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಇದರಿಂದ ಹೊಮಿಯೊಪತಿ ಹೆಚ್ಚು ಜನಪ್ರಿಯವಾಗಿದೆ.

10. ಹೋಮಿಯೊಪತಿ ವೈದ್ಯ ಪದ್ಧತಿಯ ಇತಿಮಿತಿಗಳಾವುವು?
ಸಾಮಾನ್ಯವಾಗಿ ICU (ತೀವ್ರ ನಿಗಾ ಘಟಕ) ಅಗತ್ಯವಿರುವ ತುರ್ತು ಸಂದರ್ಭ ಮತ್ತು ಕೆಲವೊಂದು ತುರ್ತು ಪರಿಸ್ಥಿತಿಗಳಲ್ಲಿ ಹೋಮಿಯೋಪತಿ ಜೊತೆಗೆ ಆಸ್ಪತ್ರೆಯ ಅವಶ್ಯಕತೆ ಇರುತ್ತದೆ. ಕೆಲವೊಂದು ಗುಣವಾದ ಖಾಯಿಲೆಗಳಲ್ಲಿ ಶಮನಕಾರಿ (Palliation method) ಮೂಲಕ ಹೋಮಿಯೋಪತಿ ಔಷಧವನ್ನು ನೀಡಬಹುದು. ಇತರ ಎಲ್ಲಾ ಸಂದರ್ಭಗಳಲ್ಲಿ ಹೋಮಿಯೋಪತಿ ಔಷಧಿಗಳು ಪರಿಣಾಮಕಾರಿ.

11. ತಮ್ಮ ವೈದ್ಯಕೀಯ ವಿಧ್ಯಾಭ್ಯಾಸ, ಸೇವೆಯ ವಿವಿಧ ಹಂತಗಳು ಯಾವುವು?
ನನ್ನ ಹುಟ್ಟೂರು ನಾವುಂದ, ಪ್ರಾಥಮಿಕ, ಪ್ರೌಢ, ಪಿಯುಸಿಯು ನಾವುಂದದಲ್ಲಿ ಮುಗಿಸಿ ನಂತರ B.H.M.S   ಪದವಿಯನ್ನು ಬೆಂಗಳೂರಿನ ಸರಕಾರಿ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾನಿಲಯ 1995ರಲ್ಲಿ ಮುಗಿಸಿರುತ್ತೇನೆ. 1996 ರಲ್ಲಿ ಬೈಂದೂರಿನಲ್ಲಿ ಹಾಗೂ 2006ರಲ್ಲಿ ಭಟ್ಕಳದಲ್ಲಿ ಶಾಖೆಯನ್ನು ಪ್ರಾರಂಭಿಸಿದೆ. ಪ್ರಸ್ತುತ 2014ರಲ್ಲಿ ಸುಸಜ್ಜಿತ ಸ್ವಂತ ಕಟ್ಟಡದಲ್ಲಿ ಬೈಂದೂರಿನ ಮನೀಷ್ ಕಾಂಪ್ಲೆಕ್ಸ್, ಮಾರ್ಕೆಟ್ ಬಳಿ ನಡೆಸಿಕೊಂಡು ಬಂದಿರುತ್ತೇನೆ.

12. ಬೈಂದೂರಿನ ಅಭಿವೃದ್ಧಿಯ ಕುರಿತು ತಮ್ಮ ಅನಿಸಿಕೆ.
ಬೈಂದೂರಿನಲ್ಲಿ ಸೇವೆ ಸಲ್ಲಿಸಿ ಹದಿನೆಂಟು ವರ್ಷಗಳಾದವು. ಅಂದಿನಿಂದ ನೋಡುವುದಾದರೆ ಇತರ ಪಟ್ಟಣಗಳಿಗೆ ಹೋಲಿಸಿದರೆ ಬೈಂದೂರಿನ ಅಭಿವೃದ್ಧಿ ಏನಕ್ಕೂ ಸಾಲದು. ಅಂದಿನ ಸಮಸ್ಯೆಗಳಾದ ರಸ್ತೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಸುಸಜ್ಜಿತ ಆಸ್ಪತ್ರೆಗಳ ಕೊರತೆ ಇಂದಿಗೂ ಪರಿಹಾರವಾಗಿಲ್ಲ. ಹಾಗಾಗಿ ಬೈಂದೂರು ಅಭಿವೃದ್ಧಿ ಹೊಂದಬೇಕು. ಆದರೂ ಇತರ ಪಟ್ಟಣಗಳಿಗೆ ಹೋಲಿಸಿದ್ದಲ್ಲಿ ಕಲಾ ಸಾಂಸ್ಕೃತಿಕವಾಗಿ, ಶಿಕ್ಷಣ ಸಂಸ್ಥೆಗಳಲ್ಲಿ, ಜನಸಂಖ್ಯೆಯ ಅಭಿವೃದ್ಧಿಯಲ್ಲಿ ಮುಂತಾದವುಗಳಲ್ಲಿ ಬೈಂದೂರು ಅಭಿವೃದ್ಧಿ ಹೊಂದಿದೆ. ಬೈಂದೂರು ತಾಲೂಕು ಕೇಂದ್ರವಾದಲ್ಲಿ ರಸ್ತೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಸುಸಜ್ಜಿತ ಆಸ್ಪತ್ರೆಗಳ ಕೊರತೆ ಇತ್ಯಾದಿ ಪರಿಹಾರವಾಗಬಹುದು.

13. ಇಂದಿನ ಜೀವನ ವಿಧಾನದ ಕುರಿತು?
ಇಂದು ಆಧುನಿಕತೆಯು ಮುಂದುವರಿದಂತೆ ರೋಗಗಳ ಸಂಖ್ಯೆಯು ಹೆಚ್ಚುತ್ತದೆ. ಇದಕ್ಕೆ ಕಾರಣ ನಮ್ಮ ಜೀವನ ಶೈಲಿ, ಮನಸ್ಸಿನ ಒತ್ತಡ, ಆಹಾರ ಪದ್ಧತಿ ಆದ್ದರಿಂದ ಜನ ಸಾಮಾನ್ಯರು ಇದರ ಬಗ್ಗೆ ಗಮನವಷ್ಟೇ ಅಲ್ಲ ಮಾನಸಿಕ ಆರೋಗ್ಯ, ಸಾಮಾಜಿಕ ಆರೋಗ್ಯ, ನೈತಿಕ ಆರೋಗ್ಯದ ಕೆಡಗೂ ಗಮನಕೊಟ್ಟು ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಶುದ್ಧಗಾಳಿ, ನೀರು, ಆಹಾರ ಜೊತೆಗೆ ವ್ಯಾಯಾಮ, ಪರಿಸರ, ಸಾಮಾಜಿಕ ಅನುಬಂಧ, ನೈತಿಕತೆ ಎಲ್ಲವೂ ಜೊತೆ ಜೊತೆಯಾಗಿ ಇದ್ದಲ್ಲಿ ಖಂಡಿತವಾಗಿ ನಾವು ಆರೋಗ್ಯವಂತರಾಗಿರುತ್ತೇವೆ.

14. ಯಾವೆಲ್ಲ ರೀತಿಯ ರೋಗಗಳಿಗೆ ತಾವು ಚಿಕಿತ್ಸೆಯನ್ನು ನೀಡುತ್ತೀರಿ?
ನನ್ನ ಅನುಭವ ಪ್ರಕಾರ acute disease ಮತ್ತು chronic disease ಗಳು ಇರುತ್ತವೆ.
Acute disease  ಗಳಲ್ಲಿ ನಮ್ಮ ಹೋಮಿಯೋಪತಿ ಔಷಧಿಗಳು ಪರಿಣಾಮಕಾರಿಯಾಗಿವೆ.

Chronic disease  ಗಳಲ್ಲಿ ಎರಡು ವಿಧ
1. ದೀರ್ಘಕಾಲದ ರೋಗಗಳು
2. ದೀರ್ಘಕಾಲದ ರೋಗಗಳಿಂದ ಬರುವ ಉಲ್ಬಣಗೊಂಡ ರೋಗಗಳು. ಇವೆರಡರಲ್ಲೂ ಹೋಮಿಯೋಪತಿ ಔಷಧಿಗಳು ಬಹಳ ಪರಿಣಾಮಕಾರಿಯಾಗಿವೆ. ಸಾಮಾನ್ಯವಾಗಿ ನಾವು ಅಲರ್ಜಿ, ಅಸ್ತಮಾ, ಸೈನಸ್ ಮತ್ತು ಮೈಗ್ರೇನ್ ಬಿ.ಪಿ, ಡಯಾಬಿಟಿಸ್ , ಕಿಡ್ನಿ ಸ್ಟೋನ್ಸ್, ಹೆಂಗಸರ ಮುಟ್ಟಿನ ತೊಂದರೆಗಳು P.C.O.D ಥೈರಾಯಿಡ್ ಮತ್ತು ಹಾರ್ಮೊನಿನ ತೊಂದರೆಗಳು, ಜೀರ್ಣಕ್ರಿಯೆ ಸಮಸ್ಯೆಗಳು, ಹಾಗೂ ಎಲ್ಲಾ ರೀತಿಯ ಸಂಧಿವಾತ, ಬೆನ್ನು ನೋವು, ಚರ್ಮಕಾಯಿಲೆ, ಸೊರಿಯಾಸಿಸ್ ಮಕ್ಕಳ ತೊಂದರೆಗಳು ಅಲ್ಲದೆ ಎಲ್ಲಾ dég ಕಾಯಿಲೆಗಳಾದ ಜ್ವರ, ನೆಗಡಿ, ಕಫ, ವಾಂತಿಬೇಧಿ, ನೋವಿನ ತೊಂದರೆಗಳು ಇತ್ಯಾದಿಗಳಿಗೆ ನಾವು ಪರಿಣಾಮಕಾರಿಯಾದ ಚಿಕಿತ್ಸೆಯನ್ನು ನೀಡುತ್ತೇವೆ.

dinetmedia