ಪಂಚಾಯತ್ ದೂರದೃಷ್ಟಿತ್ವ ಯೋಜನೆಗಳನ್ನು ರೂಪಿಸಬೇಕು.ಕೆ.ಗೋಪಾಲ ಪೂಜಾರಿ.

0
479

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

yadthre

ಬ್ಯೆಂದೂರು: ಪಂಚಾಯತ್‌ಗಳ ಅಭಿವೃದ್ದಿ ಚಿಂತನೆಯಿದ್ದಾಗ ಸರಕಾರದ ಅನುದಾನ ಪಡೆಯಲು ಸಾಧ್ಯ ಜನ ಜೀವನದಲ್ಲಿ ಮತ್ತು ಮೂಲಭೂತ ಸೌಕರ್‍ಯಗಳ ಈಡೇರಿಕೆಗೆ ಪಂಚಾಯತ್‌ನ ದೂರದೃಷ್ಟಿತ್ವದ ಯೋಜನೆ ರೂಪಿಸಿದಾಗ ಮಾತ್ರ ಸಾಧ್ಯ ಎಂದರು.ಅವರು ಬ್ಯೆಂದೂರು ರೋಟರಿ ಭವನದಲ್ಲಿ ಯಡ್ತರೆ ಗ್ರಾ.ಪಂ ವತಿಯಿಂದ 2014-15 ನೇ ಸಾಲಿನ ಪ.ಪಂ ಹಾಗೂ ಪ.ಜಾತಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿ ಮಾತನಾಡಿದರು.

yadthare 2

ಈ ಸಂಧರ್ಭದಲ್ಲಿ ಜಿ.ಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾ.ಪಂ ಸದಸ್ಯ ರಾಜು ಪೂಜಾರಿ, ರಮೇಶ ಗಾಣಿಗ, ಕಲಾವತಿ ಗಾಣಿಗ, ಮುಂತಾದವರು ಉಪಸ್ಥಿತರಿದ್ದರು.ಯಡ್ತರೆ ಗ್ರಾ.ಪಂ ಅಧ್ಯಕ್ಷ ನಾಗರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಭಿವೃದ್ದಿ ಅದಿಕಾರಿ ಶ್ವೇತಾ ಸ್ವಾಗತಿಸಿದರು. ಗ್ರಾ.ಪಂ ಸದಸ್ಯ ಗಣೇಶ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 138 ವಿದ್ಯಾರ್ಥಿಗಳಿಗೆ 2.38 ಲಕ್ಷ ಸಹಾಯಧನ ವಿತರಿಸಲಾಯಿತು.

ವರದಿ: ವೆಬ್ಬೇಶ್

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)