ಜನಪ್ರತಿನಿದಿಗಳ ಅರಣ್ಯ ಬೇಟಿ ಕಾರ್ಯಕ್ರಮ.

0
430

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

aranya

ಬ್ಯೆಂದೂರು:ವಲಯ ಅರಣ್ಯಾದಿಕಾರಿಗಳ ಕಛೇರಿ ಬ್ಯೆಂದೂರು , ಗ್ರಾಮ ಅರಣ್ಯ ಸಮಿತಿ ಇದರ ಆಶ್ರಯದಲ್ಲಿ ಜನಪ್ರತಿನಿದಿಗಳ ಅರಣ್ಯ ಬೇಟಿ ಕಾರ್ಯಕ್ರಮ ಶಿರೂರು ಸರ್ಪನಮನೆ ಸಸ್ಯ ತೋಟ ಹಾಗೂ ಒತ್ತಿನೆಣೆ ಕ್ಷಿತಿಜ ನೇಸರ ಧಾಮದಲ್ಲಿ ನಡೆಯಿತು. ಅರಣ್ಯ ಇಲಾಖೆ ಕಾರ್ಯಕ್ರಮಗಳನ್ನು ವೀಕ್ಷಿಸಿದ ಬ್ಯೆಂದೂರು ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ ಸರಕಾರ ಅರಣ್ಯದ ರಕ್ಷಣೆಗೆ ಹಾಗೂ ಅರಣ್ಯ ಭೂಮಿ ಉಳಿಸಿಕೊಳ್ಳುವ ಸಲುವಾಗಿ ಕಟ್ಟುನಿಟ್ಟಿನ ಯೋಜನೆಗಳನ್ನು ರೂಪಿಸುತ್ತಿದೆ. ಕಾಡಿನ ರಕ್ಷಣೆ ಹಾಗೂ ವನ್ಯ ಸಂಪತ್ತುಗಳ ಪಾಲನೆ-ಪೋಷಣೆ ಪ್ರತಿಯೊಬ್ಬರ ಜವಬ್ದಾರಿಯಾಗಿದೆ. ಆಧುನಿಕತೆಯ ಭರಾಟೆಯಲ್ಲಿ ಅರಣ್ಯ ಸಂಪತ್ತಿನ ರಕ್ಷಣೆ ಪ್ರಯಾಸದಾಯಕವಾಗಿದೆ. ಒತ್ತಿನೆಣೆ ಕ್ಷಿತಿಜ ನೇಸರಧಾಮ ರಸ್ತೆ ನಿರ್ಮಾಣಕ್ಕೆ ಪ್ರವಾಸೊಧ್ಯಮ ಇಲಾಖೆಯಿಂದ ಒಂದು ಕೋಟಿ ಅನುದಾನ ದೊರೆತಿದೆ ಎಂದರು

aranya 2

aryna 3

ಈ ಸಂಧರ್ಭದಲ್ಲಿ ಜಿ.ಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾ.ಪಂ ಸದಸ್ಯ ರಾಜು ಪೂಜಾರಿ, ರಮೇಶ ಗಾಣಿಗ, ಯಡ್ತರೆ ಗ್ರಾ.ಪಂ ಅಧ್ಯಕ್ಷ ನಾಗರಾಜ ಶೆಟ್ಟಿ, ಅರಣ್ಯ ಸಮಿತಿ ಅಧ್ಯಕ್ಷರುಗಳಾದ ಜೈಸನ್, ಮಂಜು ಪೂಜಾರಿ,ವಲಯಾರಣ್ಯಾದಿಕಾರಿ ಕುಲಾಲ್ ಮುಂತಾದವರು ಹಾಜರಿದ್ದರು.

ವರದಿ: ವೆಬ್ಬೇಶ್

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)