ಶಿಕ್ಷಣಾಧಿಕಾರಿಗಳ ಕಛೇರಿ ಕಟ್ಟಡಕ್ಕೆ ಶಂಕುಸ್ಥಾಪನೆ; ಶಿಕ್ಷಕರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಬದಲಾವಣೆ ಸಾಧ್ಯ: ಕೆ.ಗೋಪಾಲ ಪೂಜಾರಿ.

0
458

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

shikshana 1

ಬ್ಯೆಂದೂರು: ಜಾಗತಿಕ ಬೆಳವಣಿಗೆಯಲ್ಲಿ ಪ್ರತಿ ಕ್ಷೇತ್ರದಲ್ಲೂ ಪೈಪೋಟಿ ಸಹಜವಾಗಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಾಲಕರಿಗೆ ಆಂಗ್ಲ ಮಾಧ್ಯಮದ ವ್ಯಾಮೋಹದ ನಡುವೆ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು  ಉಳಿಸಿಕೊಳ್ಳಲು ಶಿಕ್ಷಕರ ಹೊಸ ಚಿಂತನೆಯಿಂದ ಮಾತ್ರ ಸಾಧ್ಯ. ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಬದಲಾವಣೆ ತನ್ನಿ ಎಂದು ಬ್ಯೆಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

ಅವರು ಕ್ಷೇತ್ರ ಶಿಕ್ಷಣಾದಿಕಾರಿಗಳ ಕಛೇರಿ ಇದರ ವತಿಯಿಂದ 49 ಲಕ್ಷ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕ್ಷೇತ್ರ ಶಿಕ್ಷಣಾದಿಕಾರಿಗಳ ಕಛೇರಿ ಕಟ್ಟಡ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಕೇವಲ ಇಲಾಖಾ ಕಾರ್ಯಕ್ರಮಗಳ ಅನುಷ್ಟಾನದಲ್ಲಿ ಶಿಕ್ಷಕರು ಗಮನಹರಿಸಿದರೆ ಹೊಸತನ ಕಂಡುಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ಪಾಲಕರಿಗೆ ಭರವಸೆ ಮೂಡಿಸುವಲ್ಲಿ ಹೊಸ ಹೊಸ ಚಿಂತನೆ ನಡೆಸಿ ತನ್ಮೂಲಕ ಹೊಸ ಬದಲಾವಣೆಗೆ ನಾಂದಿಯಾಗಬೇಕು. ವಂಡ್ಸೆಯಲ್ಲಿ ಪ್ರತ್ಯೇಕ ಶಿಕ್ಷಣಾದಿಕಾರಿಗಳ ಕಛೇರಿ ತೆರೆಯಲಾಗುವುದು.ಬ್ಯೆಂದೂರಿನಲ್ಲಿ ಸುಸಜ್ಜಿತ ಗುರುಮಂದಿರ ಸ್ಥಾಪಿಸಲಾಗುವುದು ಎಂದರು.

shikshan 2

               ಈ ಸಂಧರ್ಭದಲ್ಲಿ ಉಡುಪಿ ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಜಿ.ಪಂ ಸದಸ್ಯ ಬಾಬು ಶೆಟ್ಟಿ, ಸುಪ್ರೀತಾ ದೀಪಕ್ ಕುಮಾರ್ ಶೆಟ್ಟಿ,  ವಂಡ್ಸೆ ಜಿ.ಪಂ ಸದಸ್ಯ ಇಂದಿರಾ ಶೆಟ್ಟಿ, ಮಮತಾ ಆರ್ ಶೆಟ್ಟಿ, ತಾ.ಪಂ.ಸದಸ್ಯರಾದ ರಾಜು ಪೂಜಾರಿ,ರಮೇಶ ಗಾಣಿಗ ,ಸಾವಿತ್ರಿ ಅಳ್ವೆಗದ್ದೆ, ಯಡ್ತರೆ ಗ್ರಾ.ಪಂ ಅಧ್ಯಕ್ಷ ನಾಗರಾಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾದಿಕಾರಿಭಾಸ್ಕರ ಶೆಟ್ಟಿ ಸ್ವಾಗತಿಸಿದರು.ಗಣಪತಿ ಹೋಬಳಿದಾರ್ ,ಸಿ.ಎನ್.ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು.ಸುರೇಶ ಎ.ವಿ. ವಂದಿಸಿದರು.

 

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)