94/c ಸವಲತ್ತು ಎಜೆಂಟರ ಕರಾಮತ್ತು…!; ಐದು ಸೆಂಟ್ಸ್ ಜಾಗಕ್ಕೆ 1 ಲಕ್ಷ……! ಗ್ರಾಮೀಣ ಭಾಗದಲ್ಲಿ ಮುಗ್ದ ಜನರಿಗೆ ನಡೆಯುತ್ತಿದೆ ಸದ್ದಿಲ್ಲದೆ ವಂಚನೆ…

0
825

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (2) ಅಭಿಪ್ರಾಯವಿಲ್ಲ (0)

malpractice

ಬ್ಯೆಂದೂರು: ಸರಕಾರ ಜನಸಾಮಾನ್ಯರ ಸಂಕಷ್ಟಗಳಿಗೆ ಸಂದಿಸಲು ಕೆಲವು ಮಹತ್ವಾಕಾಂಕ್ಷೆ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದರ ಮೂಲ ಉದ್ದೇಶ ಹತ್ತಾರು ವರ್ಷಗಳಿಂದ ಅನುಭವಿಸುವ ಸಮಸ್ಯಗಳು ಜನರನ್ನು ಮುಕ್ತಗೊಳಿಸುವುದಾಗಿದೆ. ಆದರೆ ಇಂತಹ ಯೋಜನೆಗಳು ಕೆಲವು ಎಜೆಂಟ್‌ರುಗಳಿಗೆ ಹಣ ಸಂಪಾದಿಸುವ ಮಾರ್ಗವಾಗುವ ಜೊತೆಗೆ ಸದ್ದಿಲ್ಲದೆ ಜನರನ್ನು ವಂಚಿಸುವ ಘಟನೆ, ಬ್ಯೆಂದೂರು,ಯಡ್ತರೆ ಮುಂತಾದ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದೆ.

ಎನಿದು 94/c: ಈ ಹಿಂದೆ ಗ್ರಾಮೀಣ ಭಾಗದಲ್ಲಿ ಬಹುತೇಕ ಕೃಷಿಕರು ಸರಕಾರಿ ಭೂಮಿಯಲ್ಲಿ ವಾಸಿಸುತ್ತಿದ್ದರು. ಗದ್ದೆ, ಕೃಷಿಭೂಮಿ ಹಾಗೂ ಪಟ್ಟಾಸ್ಥಳದ ಮೇಲ್ಬಾಗದಲ್ಲಿ ಸರಕಾರಿ ಜಾಗವನ್ನು ಕದ್ದು ಮಾಡಿರುತ್ತಾರೆ. 1991-92ರಲ್ಲಿ (ಅರ್ಜಿ ನಮೂನೆ 50)98.99ರಲ್ಲಿ  (ಅರ್ಜಿ ನಮೂನೆ 53) ಯಲ್ಲಿ ಇಂತಹ ಸ್ಥಳಗಳನ್ನು ಮಂಜೂರು ಮಾಡುವ ಕುರಿತಾಗಿ ಅಕ್ರಮ-ಸಕ್ರಮ ಯೋಜನೆ ಜಾರಿಗೆ ತಂದಿತ್ತು. ಇದರಿಂದಾಗಿ ಸಾವಿರಾರು ಎಕರೆ ಕೃಷಿ ಭೂಮಿಯನ್ನು ರೈತರು ಹಾಗೂ ಗ್ರಾಮೀಣ ಜನರು ಪಡೆಯುವಂತಾಯಿತು. ಬಳಿಕ ಈ ಯೋಜನೆಯನ್ನು ಉದ್ದೇಶಿತ ಚಿಂತನೆಗೆ ಬದಲಾಗಿ ಸರಕಾರಿ ಜಮೀನುಗಳನ್ನು ಸ್ವಾದಿನಪಡಿಸುವ ಜೊತೆಗೆ ವ್ಯವಹಾರಿಕ ಚಿಂತನೆಯಾಯಿತು.ಹೀಗಾಗಿ ಪ್ರಸ್ತುತ ಸರಕಾರ ಅಕ್ರಮ-ಸಕ್ರಮ ಮಂಜೂರಾತಿಯನ್ನು ಜಟಿಲಗೊಳಿಸಿದೆ.ಈ ನಡುವೆ ಉಭಯ ಜಿಲ್ಲೆಗಳಲ್ಲಿ ಸಾವಿರಾರು ಜನರು ಸರಕಾರಿ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ.ಇದುವರೆಗೆ ಹಕ್ಕು ಪತ್ರ ದೊರೆಯಲಿಲ್ಲ. ಹೀಗಾಗಿ ಸರಕಾರದ ಯೋಜನೆಗಳನ್ನು ಪಡೆಯಲು ಸಾದ್ಯವಾಗದೇ ಪರಿತಪಿಸುವಂತಾಗಿದೆ. ಮಾತ್ರವಲ್ಲದೆ ಅಕ್ರಮ-ಸಕ್ರಮ ಯೋಜನೆಯಲ್ಲಿ ಇಂತವರಿಗೆ ಮಂಜೂರಾತಿ ದೊರೆಯಲಿಲ್ಲ. ಹೀಗಾಗಿ ಸರಕಾರ 94/c  ಯೋಜನೆ ಜಾರಿಗೆ ತಂದಿದೆ.

ಇದರ ಪ್ರಕಾರ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಸರಕಾರದ ಕನಿಷ್ಟ ಮೌಲ್ಯವನ್ನು ಕಟ್ಟಿಸಿಕೊಂಡು ಗರಿಷ್ಟ 5 ಸೆಂಟ್ಸ್ ಜಾಗವನ್ನು ದಾಖಲೆ ಪರಿಶೀಲಿಸಿ ನೀಡಲಿದೆ.ಕಳೆದ ಆರೆಳು ತಿಂಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ . ಇದೇ ತಿಂಗಳ 25ನೇ ತಾರೀಖು  ಕೊನೆಯ ದಿನಾಂಕವಾಗಿದೆ. ಇದರ ಪ್ರಕಾರ ಕೇವಲ 60 ರೂಪಾಯಿ ಶುಲ್ಕ ಕಟ್ಟುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬಳಿಕ ಅದಿಕಾರಿಗಳು ಸ್ಥಳ ಪರಿಶೀಲಿಸಿದ ನಂತರ ಸೆಂಟ್ಸ್ ಒಂದಕ್ಕೆ 500ರಿಂದ 1000 ರೂಪಾಯಿ ಪಾವತಿಸಿ (ಸರಕಾರ ನಿಗದಿ ಪಡಿಸಿದ ಮೌಲ್ಯ)ಹಕ್ಕು ಪತ್ರ ಪಡೆಯಬಹುದಾಗಿದೆ.

ಆದರೆ ಇದನ್ನೆ ಸದುಪಯೋಗ ಪಡೆದುಕೊಂಡ ಕೆಲವು ಎಜೆಂಟ್‌ರುಗಳು ಈ ಬಗ್ಗೆ ಮಾಹಿತಿ ಇಲ್ಲದ ಗ್ರಾಮೀಣ ಜನರಿಂದ ಅರ್ಜಿಯೊಂದಕ್ಕೆ ಮೂನ್ನೂರರಿಂದ ಐನೂರು ರೂಪಾಯಿ ವಸೂಲಿ ಮಾಡಿದೆ.

ಮಾತ್ರವಲ್ಲದೆ ಹಕ್ಕುಪತ್ರ ನೀಡುವಾಗ ಪ್ರತಿ ಸೆಂಟ್ಸ್‌ಗೆ ತಲಾ 20 ಸಾವಿರದಂತೆ ಐದು ಸೆಂಟ್ಸ್ ಜಾಗಕ್ಕೆ 1 ಲಕ್ಷ ರೂಪಾಯಿ ಬೇಡಿಕೆಯಿಟ್ಟಿರುವುದು ಕೇಳಿಬರುತ್ತಿದೆ. ಇದರಿಂದಾಗಿ ಮುಗ್ದ ಹಳ್ಳಿಯ ಜನರು ಜಾಗದ ಆಸೆಯಲ್ಲಿ ಲಕ್ಷಾಂತರ ರೂಪಾಯಿ ಎಜೆಂಟ್‌ರಿಗೆ ನೀಡುವಂತಾಗಿದೆ.ಬ್ಯೆಂದೂರು ಭಾಗದಲ್ಲಿ ಕೆಲವು ಗ್ರಾ.ಪಂ ಸದಸ್ಯರು ಇಂತಹ ಎಜೆಂಟರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಹುತೇಕ ಕನ್ವರ್ಷನ್, ಹಾಗೂ ತಾಲೂಕು ಕಛೇರಿ ಕಾರ್ಯಗಳನ್ನು ಸರಕಾರ ಸರಳವಾಗಿ ಹಾಗೂ ಮುಕ್ತವಾಗಿ ದೊರೆಯುವಂತಿದ್ದರು ಸಹ ಎಜೆಂಟರು ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದ್ದಾರೆ.

ಬಹುತೇಕ ಗ್ರಾಮೀಣ ಭಾಗದಲ್ಲಿ ತಾಲೂಕು ಕಛೇರಿಗಳಲ್ಲಿ ಎಜೆಂಟರಾಗಿ ಭೂ ವ್ಯವಹಾರ ನಡೆಸುವ ಹಾಗೂ ಗ್ರಾ.ಪಂ ಸದಸ್ಯರು ಅದಿಕಾರ ದುರ್ಬಳಕೆ ಮಾಡಿಕೊಂಡು ವ್ಯವಹಾರ ನಡೆಸುವ ಬಗ್ಗೆ ಅದಿಕಾರಿಗಳು ಕಣ್ಣಿಡಬೇಕಾಗಿದೆ.

94/c ಯೋಜನೆಯಲ್ಲಿ ಜಿಲ್ಲಾಡಳಿತ ಮಾಹಿತಿಯನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಬೇಕು. ಹಾಗೂ ಸಾರ್ವಜನಿಕರು ಸಹ ಯಾವುದೇ ಎಜೆಂಟ್‌ರಗಳನ್ನು ಅವಲಂಬಿಸಬಾರದು ಎನ್ನುವುದು ಅದಿಕಾರಿಗಳ ಕೋರಿಕೆಯಾಗಿದೆ.

ವರದಿ:ವೆಬ್ಬೇಶ್

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (2) ಅಭಿಪ್ರಾಯವಿಲ್ಲ (0)