ಬ್ಯೆಂದೂರು ಶಾಲಾ ವಾಹನ ಮುಗುಚಿಬಿದ್ದ ಘಟನೆ, ವಿದ್ಯಾರ್ಥಿಗಳು ಚೇತರಿಕೆ.

1
643

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

hmms

 ಬ್ಯೆಂದೂರು: ಬ್ಯೆಂದೂರು ಸಮೀಪದ ಒತ್ತಿನೆಣೆ ಬಳಿ ಶಾಲಾ ವಾಹನ ಮುಗುಚಿಬಿದ್ದು ಗಾಯಗೊಂಡಿದ್ದ 25ಕ್ಕೂ ಅದಿಕ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಗುರುವಾರ ಮುಂಜಾನೆ ನಡೆದ ಅಪಘಾತದಿಂದಾಗಿ 25 ವಿದ್ಯಾರ್ಥಿಗಳು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೂವರು ವಿದ್ಯಾರ್ಥಿಗಳು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬಳ ಕೈ ತುಂಡಾಗಿದ್ದು ಮರಳಿ ಜೋಡಿಸುವ ವೈದ್ಯರ ವಿಫಲವಾಗಿದೆ. ಮಣಿಪಾಲದಲ್ಲಿರುವ ಮೂವರು ವಿದ್ಯಾರ್ಥಿಗಳಿಗೆ ಪ್ರಜ್ನೆ ಮರಳಿದೆ.ಚಿಕಿತ್ಸೆಗೆ ಸ್ಪಂಽಸುತ್ತಿದ್ದಾರೆ. ಕುಂದಾಪುರದಲ್ಲಿರುವ ೮ರಿಂದ ೧೦ ವಿದ್ಯಾರ್ಥಿಗಳನ್ನು  ಡಿಸ್ಚಾರ್ಜ್ ಮಾಡಲಾಗುವುದು  ಎಂದು ಪ್ರಾಂಶುಪಾಲ ರಾಮ ತಿಳಿಸಿದ್ದಾರೆ. ಹಾಗೂ ವಿದ್ಯಾರ್ಥಿಗಳ ಚಿಕಿತ್ಸೆಯ ವೆಚ್ಚವನ್ನು ಶಾಲಾ ಆಡಳಿತ ಮಂಡಳಿ ಭರಿಸಲಿದೆ ಎಂದಿದ್ದಾರೆ

hmms 2

 

hmms

 ಶಾಸಕರ ಬೇಟಿ: ಶಾಲಾ ವಾಹನ ಮುಗುಚಿ ಚಿಕಿತ್ಸೆ ಪಡೆಯುತ್ತಿರುವ ಕುಂದಾಪುರ ಆಸ್ಪತ್ರೆಗೆ ಶಾಸಕ ಕೆ.ಗೋಪಾಲ ಪೂಜಾರಿ ಬೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಘಟನೆ ಬಗ್ಗೆ ವಿಷಾದ ವ್ಯೆಕ್ತ ಪಡಿಸಿದ ಸೈಯದ್ ಮೀರಾನ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ ಸಂಸ್ಥಾಪಕ ಸೈಯದ್ ಅಬ್ದುಲ್ ಖಾದರ್ ಬಾಶು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿಧ್ಯಾರ್ಥಿಗಳು ಶೀಘ್ರ ಗುಣಮುಖರಾಗಲಿ.ಹಾಗೂ ಪಾಲಕರಿಗೆ ಅಸ್ಪತ್ರೆ ವೆಚ್ಚ ದ ಅವಶ್ಯಕತೆಗೆ ಸ್ಪಂದಿಸಲಾಗುವುದು.ನೇರವಾಗಿ ಬಿಲ್ ಮೊತ್ತವನ್ನು ಆಸ್ಪತ್ರೆಗೆ ಪಾವತಿಸಲಾಗುವುದು.ಈ ಬಗ್ಗೆ ಟ್ಟಸ್ಟ್‌ನ್ನು ಸಂಪರ್ಕಿಸಬಹುದಾಗಿದೆ ಎಂದಿದ್ದಾರೆ.ಶುಕ್ರವಾರ ಶಿಕ್ಷಣ ಇಲಾಖೆ ಅದಿಕಾರಿಗಳು ಹಾಗೂ ಶಾಲಾ ಆಡಳಿತ ಮಂಡಳಿಯ ವಿಶೇಷ ಸಭೆ ನಡೆಯಿತು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)