ಸೋಷ್ಯಲ್ ನೆಟ್ವರ್ಕ್‌ನಲ್ಲಿ ಹಿಟ್ ಆಯ್ತು ಜಯಲಕ್ಷ್ಮಿ ಹಾಡು!

0
645

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

jayalaxmi

ತಿರುವನಂತಪುರಂ: ಕೆಲವು ದಿನಗಳಿಂದ ವಾಟ್ಸಾಪ್‌ನಲ್ಲಿ ‘ಸತ್ಯಂ ಶಿವಂ ಸುಂದರಂ’ ಹಾಡು ಹಾಡುತ್ತಿರುವ ಪುಟ್ಟ ಬಾಲಕಿಯೊಬ್ಬಳ ವೀಡಿಯೋ ಹರಿದಾಡುತ್ತಿದೆ. ಲತಾ ಮಂಗೇಶ್ಕರ್ ಅವರ ದನಿಯನ್ನೇ ಹೋಲುವ ಸ್ವರ ಮಾಧುರ್ಯ. ಪುಟ್ಟ ಬಾಲಕಿ ತನ್ಮಯಳಾಗಿ ಹಾಡುತ್ತಿರುವುದನ್ನು ಆಲಿಸುತ್ತಿದ್ದರೆ ರೋಮಾಂಚನ. ಆಕೆಯ ಹಾವ ಭಾವ, ಸ್ವರಗಳ ಏರಿಳಿತ ಥೇಟು ಲತಾ ಮಂಗೇಷ್ಕರ್ ಹಾಡಿದಂತೆ!

ಇಷ್ಟೊಂದು ಚೆನ್ನಾಗಿ ಹಾಡಬಲ್ಲ ಈ ಹುಡುಗಿ ಯಾರಿರಬಹುದು? ಆಕೆಯ ಹೆಸರೇನು? ವೀಡಿಯೋ ನೋಡಿದ ನಂತರ ಎಲ್ಲರೂ ಹುಡುಕಿದ್ದೂ ಆ ಬಾಲಕಿಗಾಗಿಯೇ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿರುವ ಈ ವೀಡಿಯೋ ವಾಟ್ಸಾಪ್‌ನಲ್ಲಿ ಮಾತ್ರವಲ್ಲ ಫೇಸ್‌ಬುಕ್, ಟ್ವೀಟರ್‌ನಲ್ಲಿಯೂ ಶೇರ್ ಆಯ್ತು. ಜನರು ಮೆಚ್ಚುಗೆಯ ಸುರಿಮಳೆಗೆರೆದರು.

ಹೀಗಿರುವಾಗ ಈ ಪುಟ್ಟ ಗಾನಕೋಗಿಲೆಯ ಪತ್ತೆ ಹಚ್ಚಲು ಮಾಧ್ಯಮಗಳು ಮುಂದಾದವು. ತಾನು ಹಾಡಿದ ಹಾಡು ಇಷ್ಟೊಂದು ಸಂಚಲನ ಮೂಡಿಸುತ್ತದೆ ಎಂದು ಆಕೆಗೂ ತಿಳಿದಿರಲಿಲ್ಲ. ಕೊನೆಗೂ ಮಾಧ್ಯಮಗಳು ಆ ‘ಗಾನ ಸರಸ್ವತಿ’ಯ ಮಾಹಿತಿಯನ್ನು ಪತ್ತೆ ಹಚ್ಚುವುದರಲ್ಲಿ ಯಶಸ್ವಿಯಾದವು.

‘ಸತ್ಯಂ ಶಿವಂ ಸುಂದರಂ’ಹಾಡಿನ ಮೂಲಕ ಮೋಡಿ ಮಾಡಿದ ಆ ಬಾಲಕಿಯ ಹೆಸರು ಜಯಲಕ್ಷ್ಮಿ, ವಯಸ್ಸು 11. ಕೇರಳದ ಪುಟ್ಟ ಹಳ್ಳಿಯೊಂದರಲ್ಲಿ ವಾಸವಿರುವ ಈಕೆಯ ಹಾಡನ್ನು ಆಕೆಯ ಸಂಗೀತ ಅಧ್ಯಾಪಕರು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದರು.

ಏತನ್ಮಧ್ಯೆ, ಸೋಷ್ಯಲ್ ಮೀಡಿಯಾದಲ್ಲಿ ಈ ವೀಡಿಯೋವನ್ನು ನೋಡಿ ಲತಾ ಮಂಗೇಷ್ಕರ್ ಕೂಡಾ ಮೆಚ್ಚುಗೆ ವ್ಯಕ್ತ ಪಡಿಸಿ ಜಯಲಕ್ಷ್ಮಿಯನ್ನು ಆಶೀರ್ವದಿಸಿದ್ದಾರೆ. ಇನ್ನು ಹಲವಾರು ಗಾಯಕರು ಜಯಲಕ್ಷ್ಮಿಯ ಆಲಾಪನೆಯ ಬಗ್ಗೆ ಮೆಚ್ಚುಗೆ ಸೂಚಿಸಿ ಬೆನ್ನು ತಟ್ಟಿದ್ದಾರೆ. ಈಗಾಗಲೇ ಕೆಲವು ಸಂಗೀತಕಾರರು ಜಯಲಕ್ಷ್ಮಿಯ ಹಾಡು ಕೇಳಿ ಆಫರ್‌ಗಳನ್ನು ನೀಡಿದ್ದಾರೆ.

ಈ ಹಿಂದೆ ಕೇರಳದ ಚಂದ್ರಲೇಖಾ ಎಂಬಾಕೆ ಅಡುಗೆ ಮನೆಯಲ್ಲಿ ನಿಂತು ಗಾಯಕಿ ಕೆ.ಎಸ್ ಚಿತ್ರಾ ಅವರು ಹಾಡಿದ ಹಾಡೊಂದನ್ನು ಹಾಡಿದ್ದು, ಆ ವೀಡಿಯೋ ಕೂಡಾ ಇದೇ ರೀತಿ ಸಂಚಲನ ಮೂಡಿಸಿತ್ತು . ಇದೀಗ ಚಂದ್ರಲೇಖಾ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಸೋಷ್ಯಲ್ ನೆಟ್ವರ್ಕ್‌ ಸೈಟ್ ಗಳು ಈ ಮೂಲಕ ಜಯಲಕ್ಷ್ಮಿಯ ಭವಿಷ್ಯಕ್ಕೆ ಹೊಸ ತಿರುವನ್ನು ನೀಡಿವೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)