ಕನ್ನಡಿಗರು ದುಬೈ ಆಶ್ರಯದಲ್ಲಿ ದುಬಾಯಿಯಲ್ಲಿ ಅದ್ದೂರಿಯ 59ನೇ ಕರ್ನಾಟಕ ರಾಜ್ಯೋತ್ಸವ,

1
817

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

 

Kannadigaru-dubai-Nov-16_2014_039

ಕನ್ನಡಿಗರು ದುಬೈ ಆಶ್ರಯದಲ್ಲಿ 2014 ನವೆಂಬರ್ 14ನೇ ತಾರೀಕು ಶುಕ್ರವಾರ ಸಂಜೆ ದುಬೈ ಜೆಮ್ಸ್ ವೆಲ್ಲಿಂಗ್ಟನ್ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ 59ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಅದ್ದೂರಿಯಾಗಿ ಆಚರಿಸಲಾಯಿತು. ಪ್ರಾರಂಭದಲ್ಲಿ ಕಿಕ್ಕಿರಿದು ತುಂಬಿದ್ದ ಯು.ಎ.ಇ. ಯ ಅಭಿಮಾನಿ ಕನ್ನಡಿಗರು ತಾಯಿನಾಡಿನಿಂದ ಆಗಮಿಸಿದ ಮುಖ್ಯ ಅತಿಥಿಗಳನ್ನು ಹರ್ಷೋದ್ಘಾರದೊಂದಿಗೆ, ಕೇರಳದ ಪಂಚವಾಧ್ಯ ಚಂಡೆ ಮೇಳದೊಂದಿಗೆ ಮೆರವಣಿಗೆಯಲ್ಲಿ ಬರಮಾಡಿಕೊಂಡರು.

ಶ್ರೀಮತಿ ಭಾಗ್ಯ ಸದನ್ ದಾಸ್ ಮತ್ತು ಶ್ರೀಮತಿ ವಿದ್ಯಾ ಶಿವಕುಮಾರ್ ಸರ್ವರಿಗೆ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಾ, ಸ್ವಾಗತಿಸಿದರು.

ಪ್ರಾರ್ಥನೆಯಂದಿಗೆ ಪ್ರಾರಂಭವಾದ ಕಾರ್ಯಕ್ರಮ, ಕನ್ನಡಿಗರು ದುಬಾಯಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಗೌಡರವರು ಗಣ್ಯ ಅತಿಥಿಗಳಾದ ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ಪ್ರಣಯರಾಜ ಡಾ| ಶ್ರೀನಾಥ್, ಮಾತಿನ ಮಲ್ಲಿ ಸುಧಾ ಬರಗೂರು, ಪ್ರಖ್ಯಾತ ಹಿಂದೂಸ್ಥಾನಿ ಗಾಯಕಿ ವಿದುಷಿ ಕಲ್ಪನಾ ಸುಮಂತ್ ಹಾಗೂ ಪ್ರಮುಖ ಪ್ರಾಯೋಜಕರೊಂದಿಗೆ ಯು.ಎ.ಇ. ಮತ್ತು ಭಾರತ ರಾಷ್ಟ್ರ ಗೀತೆ ಹಾಗೂ ಕರ್ನಾಟಕ ರಾಜ್ಯ ಗೀತೆಯೊಂದಿಗೆ ಜ್ಯೋತಿ ಬೆಳಗಿಸುವ ಮೂಲಕ 59ನೇ ಕರ್ನಾಟಕ ರಾಜ್ಯೋತ್ಸವ ಅಧಿಕೃತವಾಗಿ ಉದ್ಘಾಟಿಸಿದರು.

101

ಕೊಲ್ಲಿ ಕನ್ನಡಿಗರ ಮನಸೆಳೆದ ವಿದುಷಿ ಕಲ್ಪನಾ ಸುಮಂತ್ ರವರ ಸಂಗೀತ ಕಛೇರಿ.

ಭಾರತ ಸಂಗೀತ ಲೋಕದ ಪ್ರಖ್ಯಾತಿ ಪಂಡಿತ್ ಮಾರುತಿರಾವ್ ಇನಾಂದಾರ್ ರವರ ಶಿಷ್ಯೆ ವಿದುಷಿ ಕಲ್ಪನಾ ಸುಮಂತ್ ರವರು ತಮ್ಮ ಸುಮಧುರ ಕಂಠಸಿರಿಯಲ್ಲಿ ಹೊರ ಹೊಮ್ಮಿದ ಸಂಗೀತ ಕಛೇರಿಗೆ ಸಾಥ್ ನೀಡಿದವರು ಪಂಡಿತ್ ಹರಿಪ್ರಸಾದ್ ಚೌರಾಸಿಯಾರವರ ಶಿಷ್ಯರಾದ ಪಂಡಿತ್ ಹಿಮಾನ್ಷು ಕೊಳಲು ವಾದನ, ಗುರುಮೂರ್ತಿ ಯವರ ತಬಲಾ, ಮಂಗಳಾ ರವರು ಕೀಬೋರ್ಡ್ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಕನ್ನಡಿಗರು ಎದ್ದು ನಿಂತು ಚಪ್ಪಾಳೆಯ ಮೂಲಕ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು. ಕಲಾವಿದರನ್ನು ಕನ್ನಡಿಗರು ದುಬಾಯಿ ವತಿಯಿಂದ  ಸನ್ಮಾನಿಸಿ ಗೌರವಿಸಲಾಯಿತು.

ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.ಯು.ಎ.ಇ. ಯ ವಿವಿಧ ಸಂಘ ಸಂಸ್ಥೆಗಳ ಮಕ್ಕಳ ತಂಡ, ಭರತನಾಟ್ಯ, ಜನಪದ ನೃತ್ಯ, ಸಿನೇಮಾ ಗೀತೆಗಳ ನೃತ್ಯಗಳನ್ನು ಆಕರ್ಷಕ ನೃತ್ಯದ ಮೂಲಕ ಜನ ಮೆಚ್ಚುಗೆ ಪಡೆದರು. ಎಲ್ಲಾ ಮಕ್ಕಳಿಗೆ ಪ್ರಸಂಶಾ ಪತ್ರವನ್ನು ನೀಡಿ ಅಭಿನಂದಿಸಲಾಯಿತು.

311

ಕನ್ನಡ ಚಲನ ಚಿತ್ರರಂಗದ ಸುವರ್ಣ ಯುಗದ ಗೀತೆಗಳ ದೃಶ್ಯ ಪ್ರದರ್ಶನಕ್ಕೆ ಪ್ರಣಯ ರಾಜ ಡಾ| ಶ್ರೀನಾಥ್ ರವರ ಹೆಜ್ಜೆ….

ಕನ್ನಡ ಚಿತ್ರರಂಗದ ಸಾವಿರದ ಒಂಬೈನೂರ ಎಪ್ಪತ್ತು ಎಂಬ್ಬತರ ದಶಕದ ಸುವರ್ಣ ಯುಗದ ಪ್ರಣಯ ರಾಜ ಶ್ರೀನಾಥ್ ಅಭಿನಯದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ಪ್ರಸಿದ್ದ ಪ್ರೇಮಗೀತೆಗಳ ದೃಶ್ಯದ ತುಣುಕು ಪರದೆಯ ಮೇಲೆ ಮೂಡುತಿರುವಂತೆ ವೇದಿಕೆಯಲ್ಲಿ ಪ್ರಣಯ ರಾಜ ಡಾ| ಶ್ರೀನಾಥ್ ಹೆಜ್ಜೆ ಹಾಕಿದರು. ಕನ್ನಡಿಗರು ದುಬೈ ಕಾರ್ಯಕಾರಿ ಸಮಿತಿಯವರ ವ್ಯವಸ್ಥಿತ ಪೂರ್ವತಯಾರಿಯಲ್ಲಿ ಮೂಡಿಬಂದ ಕಾರ್ಯಕ್ರಮ ಅದ್ಭುತವಾಗಿತ್ತು. ಸುಮಧುರ ಗೀತೆಗೆ ಧ್ವನಿ ಸೇರಿಸಿ ಶಿವಕುಮಾರ್, ಉದಯ ನಂಜಪ್ಪ, ದೀಪಾ ಮನಸೆಳೆದರು.

ಪ್ರಣಯರಾಜ ಡಾ| ಶ್ರೀನಾಥ್ ಮತ್ತು ಶ್ರೀಮತಿ ಗೀತಾ ಶ್ರೀನಾಥ್ ರವರನ್ನು ಕೊಲ್ಲಿ ನಾಡಿನ ಸಮಸ್ಥ ಕನ್ನಡಿಗರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಪ್ರಕ್ರಿಯೆಯನ್ನು ಪ್ರಮುಖ ಪ್ರಾಯೋಜಕರುಗಳಾದ ಎಂಸ್ಕ್ವೇರ್ ಸಂಸ್ಥೆಯ ಶ್ರೀ ಮುಸ್ತಾಫ, ಎಂ.ಟಿ. ಆರ್. ರೆಸ್ಟೋರೆಂಟ್ ಮುಖ್ಯಸ್ಥರಾದ ಗಾಯತ್ರಿ ಹಮಿತ್, ಚಿಲ್ಲಿ ವಿಲ್ಲಿ ಸಂಸ್ಥೆಯ ಶ್ರೀ ಸತೀಶ್ ವೆಂಕಟರಮಣ ಹಾಗೂ ಶ್ರೀ ಮಲ್ಲಿಕಾರ್ಜುನ ಗೌಡ, ಶ್ರೀ ಸದನ್ ದಾಸ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ನಡೆಸಿಕೊಟ್ಟರು.

Kannadigaru-dubai-Nov-16_2014_173

ಮಾತಿನ ಮಲ್ಲಿ ಸುಧಾ ಬರಗೂರು ಹರಿಸಿದ ಹಾಸ್ಯದ ಹೊನಲು.

ಕೋಟ್ಯಾಂತರ ಕನ್ನಡಿಗರ ಮನೆ ಮಾತಾಗಿರುವ ಸುಧಾ ಬರಗೂರು ದೇಶ ವಿದೇಶಗಳಲ್ಲಿ ಹಲವು ಬಾರಿ ಹಾಸ್ಯ ಕಾರ್ಯಕ್ರಮವನ್ನು ನಡೆಸಿ ಈ ಬಾರಿ ದುಬಾಯಿಯಲ್ಲಿ ತಮ್ಮ ವಾಕ್ ಚಾತುರ್ಯದಿಂದ ಅನಿವಾಸಿ ಕನ್ನಡಿಗರ ಮನ ಗೆದ್ದರು. ತಮ್ಮ ಹಾಸ್ಯದ ಮೂಲಕ ದೈನಂದಿನ ಕಾರ್ಯ, ರೀತಿ ನೀತಿಗಳ ಬಗ್ಗೆ, ಭಾಷೆ ಅಭಿಮಾನ, ದುರಾಭಿಮಾನ, ಅಂಕು ಡೊಂಕುಗಳ ಬಗ್ಗೆ ಬೆಳಕು ಚೆಲ್ಲಿದರು. ದಿನನಿತ್ಯದ ಜಂಜಾಟದಲ್ಲಿ ಬಳಲುತಿರುವ ಕೊಲ್ಲಿನಾಡಿನ ಕನ್ನಡಿಗರು ಗಂಟೆಗಟ್ಟಲೆ ಕಾದು ಕುಳಿತು ಮನಸಾರೆ ನಕ್ಕು ನಕ್ಕು, ಚಪ್ಪಾಳೆಯ ಮೂಲಕ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು. ಕನ್ನಡಿಗರು ದುಬಾಯಿ ವತಿಯಿಂದ ಸುಧಾ ಬರಗೂರು ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

1112

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)