ತುಳು ಸಿನಿಮಾ ಪ್ರಶಸ್ತಿ: ಅಸಲ್, ಬೊಳ್ಳಿಗೆ ಪ್ರಶಸ್ತಿ ಸಿಂಹಪಾಲು

0
880

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

(ಕೃಷ್ಣ ಭಟ್ ಅಳದಂಗಡಿ, ಮಂಗಳೂರು)

  • tulufilm-awards1

 ತುಳು ಚಿತ್ರಗಳ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ರೆಡ್ ಎಫ್‌ಎಂ ತುಳು ಸಿನಿಮಾ ಪ್ರಶಸ್ತಿ-2014ರಲ್ಲಿ ‘ಒರಿಯರ್ದೊರಿ ಅಸಲ್’ ಚಿತ್ರ ಶ್ರೇಷ್ಠ ಚಿತ್ರವೂ ಸೇರಿದಂತೆ ಏಳು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. ‘ತೆಲಿಕೆದ ಬೊಳ್ಳಿ’ ತನ್ನ ನಾಯಕ ಅರ್ಜುನ್ ಕಾಪಿಕಾಡ್‌ಗೆ ಶ್ರೇಷ್ಠ ನಟ ಸಹಿತ ಐದು ಪ್ರಶಸ್ತಿಗಳನ್ನು ಗಳಿಸಿತು.

ಶನಿವಾರ ರಾತ್ರಿ ನಗರದ ನೆಹರೂ ಮೈದಾನದಲ್ಲಿ ನಡೆದ ಚೊಚ್ಚಲ ಪ್ರಶಸ್ತಿ ಪ್ರದಾನ ಸಮಾರಂಭ ಬಾಲಿವುಡ್, ಸ್ಯಾಂಡಲ್ ವುಡ್ ಮತ್ತು ತುಳು ಚಿತ್ರರಂಗದ ತಾರೆಯರ ಮೇಳೈಕೆಗೆ ಸಾಕ್ಷಿಯಾಯಿತಲ್ಲದೆ, ಕಿಕ್ಕಿರಿದು ನೆರೆದ ಜನರ ಪಾಲ್ಗೊಳ್ಳುವಿಕೆಯಿಂದ ಹೊಸ ಇತಿಹಾಸವನ್ನು ಸಷ್ಟಿಸಿತು. 93.5 ರೆಡ್‌ಎಫ್‌ಎಂ ಕಲ್ಪನೆಯ ಕಾರ್ಯಕ್ರಮದಲ್ಲಿ ಕೇಳುಗರ ವೋಟಿಂಗ್ ಮತ್ತು ಕಾಸರಗೋಡು ಚಿನ್ನಾ ಹಾಗೂ ವಸಂತ್ ಕದ್ರಿ ಅವರು ಜ್ಯೂರಿಯಾಗಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಒರಿಯರ್ದೊರಿ ಅಸಲ್ 7, ತೆಲಿಕೆದ ಬೊಳ್ಳಿ 5, ಕಂಚಿಲ್ದ ಬಾಲೆ 3, ಬಂಗಾರ‌್ದ ಕುರಲ್ 3, ಕಡಲಮಗೆ 2, ಬರ್ಕೆ ಮತ್ತು ದೇವೆರ್ ತಲಾ 1 ಪ್ರಶಸ್ತಿ ಗೆದ್ದುಕೊಂಡಿವೆ.

ಬಂಗಾರ‌್ದ ಕುರಲ್ ಚಿತ್ರದ ನಾಯಕಿ ಪಾಖೀ ಹೆಗ್ಡೆ ಅವರು ಶ್ರೇಷ್ಠ ನಟಿಯಾಗಿ ಗುರುತಿ ಸಲ್ಪಟ್ಟರೆ, ನವೀನ್ ಡಿ. ಪಡೀಲ್ ಅಸಲ್‌ನ ಭಜನೆ ಬಸಪ್ಪಣ್ಣೆ ಪಾತ್ರಕ್ಕಾಗಿ ಶ್ರೇಷ್ಠ ಹಾಸ್ಯನಟ ಪ್ರಶಸ್ತಿ ಸ್ವೀಕರಿಸಿದರು. ಗೋಪಿನಾಥ್ ಭಟ್ ತೆಲಿಕೆದ ಬೊಳ್ಳಿ ಚಿತ್ರದ ಅಣ್ಣನ ಪಾತ್ರ ನಿರ್ವಹಣೆಗಾಗಿ ಶ್ರೇಷ್ಠ ಖಳನಟ ಪ್ರಶಸ್ತಿ ಪಡೆದರು. ಅಸಲ್ ಚಿತ್ರದ ಅತ್ಯುತ್ತಮ ಸಂಗೀತ ಎ.ಕೆ. ವಿಜಯ್ ಅವರಿಗೆ ಸಂಗೀತ ನಿರ್ದೇಶಕ ಪ್ರಶಸ್ತಿ ತಂದುಕೊಟ್ಟಿತು.

ಬಾಲಿವುಡ್‌ನ ಸಾಹಸ ನಿರ್ದೇಶಕ ರಾಮ್ ಶೆಟ್ಟಿ ಬಂಗಾರ‌್ದ ಕುರಲ್ ಚಿತ್ರದ ಅತ್ಯುತ್ತಮ ಚಿತ್ರಕಥೆಗಾಗಿ ಪ್ರಶಸ್ತಿ ಪಡೆದರೆ, ಬರ್ಜೆ ಚಿತ್ರದ ಸಾಹಿತ್ಯಕ್ಕಾಗಿ ವಿ.ಮನೋಹರ್ ಗೌರವ ಪಡೆದರು. ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಕಂಚಿಲ್ದ ಬಾಲೆ ಚಿತ್ರದ ಅಜ್ಜಿಯ ಪಾತ್ರಕ್ಕೆ ಪೋಷಕ ನಟಿ ಪ್ರಶಸ್ತಿ ಪಡೆದರೆ, ಅದೇ ಚಿತ್ರದ ಮೊಮ್ಮಗಳು ಪಾತ್ರ ಮಾಡಿದ ಬೇಬಿ ಚೈತ್ರಾಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ದಕ್ಕಿತು.

ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ ಗೆದ್ದರೆ, ಕಡಲಮಗೆ ಚಿತ್ರದ ಕಲಾ ನಿರ್ದೇಶನ ತಮ್ಮ ಲಕ್ಷ್ಮಣರಿಗೆ ಪ್ರಶಸ್ತಿ ತಂದುಕೊಟ್ಟಿತು. ಅತ್ಯುತ್ತಮ ಚಿತ್ರ ನಿರ್ದೇಶಕ ಪ್ರಶಸ್ತಿ ಅಸಲ್ ನಿರ್ದೇಶಕ ಹ.ಸೂ. ರಾಜಶೇಖರ್ ಪಾಲಾಯಿತು.

ತುಳು ಚಿತ್ರರಂಗದ ಧ್ರುವತಾರೆ, 10ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿ ನಟಿಸುವ ಮೂಲಕ ಅಪೂರ್ವ ಹೆಜ್ಜೆ ಗುರುತುಗಳನ್ನು ಸಷ್ಟಿಸಿದ ಕೆ.ಎನ್. ಟೇಲರ್ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಷ್ಟ್ರಪ್ರಶಸ್ತಿ ವಿಜೇತ ಗಗ್ಗರ ಚಿತ್ರದ ನಿರ್ದೇಶಕ ಶಿವಧ್ವಜ್ ಶೆಟ್ಟಿ, ಬಂಗಾರ್ ಪಟ್ಲೇರ್ ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೋ, ಕೋಟಿ ಚೆನ್ನಯ ಚಿತ್ರದ ಧನರಾಜ್-ಆನಂದ್ ಪಿ. ರಾಜು, ನಿರೆಲ್ ಚಿತ್ರದ ನಿರ್ಮಾಪಕ ಶೋಧನ್ ಪ್ರಸಾದ್, ಹಿರಿಯ ಕಲಾವಿದೆ ಸರೋಜಿನಿ ಶೆಟ್ಟಿ, ತುಳು ಸಾಹಿತಿ ಸೀತಾರಾಂ ಕುಲಾಲ್ ಹಾಗೂ ಪ್ರದೀಪ್ ಕಟಪಾಟಿ ಅವರಿಗೆ ಸ್ಪೆಷಲ್ ರಿಕಗ್ನಿಷನ್ ಅವಾರ್ಡ್ ನೀಡಲಾಯಿತು.

tulufilm-awards2
ತಾರೆಯರ ಸಮ್ಮುಖದಲ್ಲಿ ರಂಗೇರಿದ ರಾತ್ರಿ: ತುಳು ಚಿತ್ರೇತಿಹಾಸದ ಮೊದಲ ಪ್ರಶಸ್ತಿ ಪ್ರದಾನ ಸಮಾರಂಭ ಬಾಲಿವುಡ್‌ನ ನಟ, ನಿರ್ಮಾಪಕ ಸುನಿಲ್ ಶೆಟ್ಟಿ ಸೇರಿದಂತೆ ಚಿತ್ರತಾರೆಯರ ಸಮ್ಮುಖದಲ್ಲಿ ರಂಗೇರಿತು. ಸಚಿವ ಯು.ಟಿ. ಖಾದರ್, ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಎಸ್‌ಪಿ ಶರಣಪ್ಪ, ಹಿರಿಯ ರಂಗಕರ್ಮಿ, ನಿರ್ದೇಶಕ ಸದಾನಂದ ಸುವರ್ಣ, ಕೊಲ್ಲೂರು ದೇವಳದ ಕಷ್ಣಪ್ರಸಾದ್ ಅಡ್ಯಂತಾಯ, ಡಿಕ್ಸ್ ಸಂಸ್ಥೆಯ ದೇವಾನಂದ ಶೆಟ್ಟಿ, ರೆಡ್ ಎಫ್‌ಎಂನ ಮುಖ್ಯಸ್ಥ ಬಿ.ಸುರೇಂದ್ರ ಸೇರಿದಂತೆ ಹಲವು ಉದ್ಯಮಿಗಳು, ಸಾಹಿತಿಗಳು, ಕಲಾರಾಧಕರು ಭಾಗವಹಿಸಿದ್ದು ವಿಶೇಷವಾಗಿತ್ತು.

ಮೂಕಾಂಬಿಕಾ ಚೆಂಡೆ ಬಳಗ, ಉಡುಪಿಯ ಭಾರ್ಗವಿ ತಂಡದ ರಿಂಗ್‌ನೊಳಗಿನ ಶಿವ ತಾಂಡವ, ಗುರುಪುರದ ಸಿಟಿಗೈಸ್ ತಂಡದ ಯಕ್ಷಗಾನ, ಕಥಕ್ಕಳಿ, ನತ್ಯ ಸಹಿತ ಪ್ರದರ್ಶನ ಗಮನ ಸೆಳೆಯಿತು. ನಟಿ ಅಕ್ಷತಾ ಮಾರ್ಲ ಟೀಮ್, ಅವಿನಾಶ್ ಶೆಟ್ಟಿ ಬಳಗ, ನಾಗರಾಜ್ ಅಂಬರ್ ಟೀಮ್‌ನ ಪ್ರದರ್ಶನಗಳು ರೋಮಾಂಚನ ಮೂಡಿಸಿದವು. ‘ಕ’ ತಂಡದ ತೋಂತನಕ ಮಣಾಕ.. ಓಂ ನಮೋ ವಿನಾಯಕ ಹಾಡು ಕುಣಿಯವಂತೆ ಮಾಡಿತು. ಕುದ್ರೋಳಿ ಗಣೇಶ್ ಜಾದೂ ಮೂಲಕ ಮೋಡಿ ಮಾಡಿದರು. ಕಾರ್ಯಕ್ರಮದಲ್ಲಿ ಬೀರೆ ದೇವುಪೂಂಜೆ ಚಿತ್ರದ ಹಾಡುಗಳ ಸೀಡಿ, ಚಿಲ್ಲಿವಿಲ್ಲಿ ಎನರ್ಜಿ ಡ್ರಿಂಕ್‌ಗಳನ್ನು ಬಿಡುಗಡೆ ಮಾಡಲಾಯಿತು.

ರೆಡ್ ಎಫ್‌ಎಂ ಆರ್‌ಜೆಗಳಾದ ಪ್ರಸನ್ನ, ಮಧು, ಅನುರಾಗ್, ಚೈತ್ರಾ, ದೀಪಕ್, ಶಿಲ್ಪಾ ಮಾತಿನ ಮೋಡಿಯಿಂದ ಗಮನ ಸೆಳೆದರು. ತುಳು ರಂಗಭೂಮಿ, ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ಅಭಿಮಾನಿಗಳು ಕುತೂಹಲದಿಂದ ಗಮನಿಸಿದರು.

ಕೆ.ಎನ್. ಟೇಲರ್ ಯಾರು ಗೊತ್ತಾ?: ತುಳು ಚಿತ್ರಲೋಕದ ಧ್ರುವತಾರೆ ಎಂದೇ ಗುರುತಿಸಲಾದ ಕೆ.ಎನ್. ಟೇಲರ್ ಜೀವಮಾನದ ಸಾಧನೆ ಪ್ರಶಸ್ತಿ ಸ್ವೀಕರಿಸುವ ವೇಳೆ ತುಂಬ ಇಂಟ್ರೆಸ್ಟಿಂಗ್ ಆದ ಕಥೆ ಹೇಳಿದರು: ಇತ್ತೀಚೆಗೆ ನನ್ನೊಬ್ಬ ಗೆಳೆಯ ನನ್ನನ್ನು ಒಂದು ಮದುವೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಸಿಕ್ಕಿದ ಅವನ ಪರಿಚಿತನೊಬ್ಬನಿಗೆ ನನ್ನನ್ನು ಪರಿಚಯಿಸಿದ. ಮೇರ್ ಕೆ.ಎನ್. ಟೇಲರ್ ಪಂದ್. ಆಗ ಅವನು, ಟೈಲರಾ? ಲೇಡಿಸಾ-ಜೆಂಟ್ಸ್ ಅಂತ ಕೇಳಿದ. ನಾನು ಜೆಂಟ್ಸ್ ಅಂದೆ. ‘ಓ ಹೌದಾ.. ಪ್ಯಾಂಟ್ ಶರ್ಟ್ ಹೊಲೀತೀರಾ? ಎಲ್ಲಿ ನಿಮ್ಮ ಅಂಗಡಿ’ ಅಂತ ಕೇಳಿದ. ನಾನು ಕಾರ್ ಸ್ಟ್ರೀಟ್ ಅಂದೆ. ಕೂಡಲೇ ಯುವಕ ಹೇಳಿದ: ಓ ಅದಾ.. ಮೊನ್ನೆ ತಾನೇ ಎರಡು ಪ್ಯಾಂಟ್ ಶರ್ಟ್ ಹೊಲಿಸಿದ್ದೇನೆ ನಿಮ್ಮತ್ರ ಅಂದ! ಬೆಳಕಿಲ್ಲದ, ವಾಹನಗಳಿಲ್ಲದ ಕಾಲದಲ್ಲಿ ಊರಿಂದೂರು ಅಲೆಯುತ್ತಾ ನಾಟಕ ಮಾಡುತ್ತಿದ್ದ ಪರಿಶ್ರಮಿ ಕಲಾವಿದ, ನಿರ್ದೇಶಕ ತನ್ನನ್ನೇ ತಾನೇ ವ್ಯಂಗ್ಯ ಮಾಡಿಕೊಂಡು ಸಮಾಜವನ್ನು ಅಣಕಿಸಿದರು.

ರೆಡ್ ಎಫ್‌ಎಂ ತುಳು ಫಿಲ್ಮ್‌ಅವಾರ್ಡ್ಸ್ 2014: ಅತ್ಯುತ್ತಮ ಚಿತ್ರಒರಿಯರ್ದೊರಿ ಅಸಲ್ ಅತ್ಯುತ್ತಮ ನಟಅರ್ಜುನ್ ಕಾಪಿಕಾಡ್ತೆಲಿಕೆದ ಬೊಳ್ಳಿ ಅತ್ಯುತ್ತಮ ನಟಿಪಾಖೀ ಹೆಗ್ಡೆಬಂಗಾರ‌್ದ ಕುರಲ್ ಸಂಗೀತ ನಿರ್ದೇಶಕಎ.ಕೆ. ವಿಜಯ್ಒರಿಯರ್ದೊರಿ ಅಸಲ್ ಹಿನ್ನೆಲೆ ಗಾಯಕಉದಿತ್ ನಾರಾಯಣ್ಒರಿಯರ್ದೊರಿ ಅಸಲ್ ಹಿನ್ನೆಲೆ ಗಾಯಕಿಸಂಗೀತಾ ಬಾಲಚಂದ್ರಕಡಲ ಮಗೆ ಶ್ರೇಷ್ಠ ಖಳ ಪಾತ್ರಗೋಪಿನಾಥ್ ಭಟ್ ತೆಲಿಕೆದ ಬೊಳ್ಳಿ ಶ್ರೇಷ್ಠ ಹಾಸ್ಯ ಪಾತ್ರನವೀನ್ ಡಿ. ಪಡೀಲ್ಒರಿಯರ್ದೊರಿ ಅಸಲ್

ಅತ್ಯುತ್ತಮ ಸಾಹಿತ್ಯ ವಿ. ಮನೋಹರ್ಬರ್ಕೆ ಪೋಷಕ ನಟಡಿ.ಎಸ್. ಬೋಳೂರುತೆಲಿಕೆದ ಬೊಳ್ಳಿ ಪೋಷಕ ನಟಿಶಕುಂತಲಾ ಶೆಟ್ಟಿಕಂಚಿಲ್ದ ಬಾಲೆ ಬಾಲಕಲಾವಿದೆಬೇಬಿ ಚೈತ್ರಾಕಂಚಿಲ್ದ ಬಾಲೆ ಶ್ರೇಷ್ಠ ನಿರ್ದೇಶಕಹ.ಸೂ. ರಾಜಶೇಖರ್ಒರಿಯರ್ದೊರಿ ಅಸಲ್ ನೃತ್ಯ ನಿರ್ದೇಶನಮದನ್-ಹರಿಣಿತೆಲಿಕೆದ ಬೊಳ್ಳಿ ಅತ್ಯುತ್ತಮ ಸಂಕಲನಶ್ರೀನಿವಾಸ ಪ್ರಭುಒರಿಯರ್ದೊರಿ ಅಸಲ್ ಉತ್ತಮ ಛಾಯಾಗ್ರಹಣಪಿ.ಎಲ್. ರವಿಕಂಚಿಲ್ದ ಬಾಲೆ ಹಿನ್ನೆಲೆ ಸಂಗೀತಸತೀಶ್ ಬಾಬುಒರಿಯರ್ದೊರಿ ಅಸಲ್ ಕಲಾ ನಿರ್ದೇಶನತಮ್ಮ ಲಕ್ಷ್ಮಣಕಡಲ ಮಗೆ ಅತ್ಯುತ್ತಮ ಸಾಹಸಹರೀಶ್ ಶೆಟ್ಟಿಬಂಗಾರ‌್ದ ಕುರಲ್. ಅತ್ಯುತ್ತಮ ಸಂಭಾಷಣೆದೇವದಾಸ್ ಕಾಪಿಕಾಡ್ತೆಲಿಕೆದ ಬೊಳ್ಳಿ ಉತ್ತಮ ಚಿತ್ರಕಥೆರಾಮ್ ಶೆಟ್ಟಿಬಂಗಾರ‌್ದ ಕುರಲ್ ಉತ್ತಮ ಕಥೆಸುಧಾಕರ ಬನ್ನಂಜೆದೇವೆರ್.

Awards List

Lifetime Achievement Award – K N Tailor
Best Film – Oriyordori Asal
Best Actor (Male) – Arjun Kapikad for Thelikada Bolli
Best Actor (Female) – Pakhi Hegde for Bangarda Kural
Best Director – H S Rajshekar for Oriyardori Asal
Best Actor in a Comic Role – Navin D Padil for Oriyardori Asal
Best Male Playback Singer – Udit Narayan for Oriyardori Asal
Best Female Playback Singer – Sangeeta Balachandra for Kadala Mage
Best Music Director – A K Vijay for Oriyardori Asal
Best Choreography – Madan Harini – Telikeda Bolli
Best Actor in a Negative Role – Gopinath Bhat for Telikeda Bolli
Best Supporting Actor – B S Boloor
Best Supporting Actress – Shakuntala Shetty for Kanchilda Bale
Best Child Artiste Award – Baby Chitra for Kanchilda Bale
Best Lyricist – V Manohar for Barke
Best Editor – Srinivas Babu for Oriyardori Asal
Best Cinema Developer Award – P L Ravi for Kanchilda Bale
Best Background Score – Sathish Babu for Oriyardori Asal
Best Art Direction – Tamma Lakshman for Kadala Mage
Best Action – Harish Shetty for Bangarda Kural
Best Dialogue – Devdas Kapikad for Telikeda Bolli
Best Screenplay – Ram Shetty for Bangarda Kural
Best Story – Sudhakar Bannanje

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)