ಮಂಗಳೂರಿನಲ್ಲಿ ಮದಿಮೆದ ಗೌಜಿ…!

0
873

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

Madime_Film_Release_10

ಮಂಗಳೂರು : ಬಾಲಕೃಷ್ಣ ಫಿಲ್ಮ್ಸ್ ನಿರ್ಮಾಣದ, ತುಳು ಚಿತ್ರರಂಗದಲ್ಲಿ ನಿರೀಕ್ಷೆ ಹಾಗೂ ಕುತೂಹಲ ಮೂಡಿಸಿದ ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ ನಿರ್ಮಾಣ ಮತ್ತು ವಿಜಯ್‌ಕುಮಾರ್‌ ಕೊಡಿಯಾಲ್‌ಬೈಲ್‌ ನಿರ್ದೇಶನದ ‘ಮದಿಮೆ’ ತುಳು ಸಿನೆಮಾ ಗುರುವಾರ ಮಂಗಳೂರಿನಾದ್ಯಂತ ತೆರೆ ಕಂಡಿದೆ.
ಮೊದಲ ದಿನವಾದ ಗುರುವಾರ ಮಂಗಳೂರಿನ ಸುಚಿತ್ರಾ, ಬಿಗ್‌ಸಿನೆಮಾ, ಸಿನೆಪೊಲಿಸ್‌ ಹಾಗೂ ಪಿವಿಆರ್‌ನಲ್ಲಿ ಚಿತ್ರಕ್ಕೆ ಉತ್ತಮ ಸ್ಪಂದನೆ ದೊರಕಿದ್ದು, ಚಿತ್ರಮಂದಿರದಲ್ಲಿ ‘ಮದಿಮೆ’ದ ಗೌಜಿ ಜೋರಾಗಿತ್ತು.

ಸುಚಿತ್ರ ಚಿತ್ರಮಂದಿರದಲ್ಲಿ ನಡೆದ ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮೇಯರ್‌ ಮಹಾಬಲ ಮಾರ್ಲ, ಜನರ ಪ್ರೀತಿಯಿಂದ ತುಳು ರಂಗಭೂಮಿ, ಸಿನಿಮಾ ಬೆಳೆಯುತ್ತಿದೆ. ಇದೀಗ ತುಳುವಿಗೆ ಮಹತ್ವದ ಕೊಡುಗೆ ಎಂಬಂತೆ ‘ಮದಿಮೆ’ ಸಿನೆಮಾ ಬಿಡುಗಡೆಯಾಗಿದೆ ಎಂದರು.

ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮಾತನಾಡಿ, ಹಿಂದೆ ಬಹಳಷ್ಟು ಕಷ್ಟಪಟ್ಟು ತುಳು ಸಿನೆಮಾ ಮಾಡಲಾಗುತ್ತಿತ್ತು. ವರ್ಷಕ್ಕೆ ಒಂದೆರಡು ಸಿನೆಮಾಗಳು ಮಾತ್ರ ಬರುತ್ತಿತ್ತು. ಆದರೆ, ಈಗ ಹಾಗಲ್ಲ. ಹಿಂದಿನ ಚಿತ್ರರಂಗದ ಶ್ರಮ ಹಾಗೂ ತ್ಯಾಗದಿಂದ ಪ್ರಸ್ತುತ ವರ್ಷಕ್ಕೆ 3-4 ತುಳು ಚಿತ್ರಗಳು ಕಾಣುವಂತಾಗಿದೆ ಎಂದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಮಾತನಾಡಿ, ತುಳು ಭಾಷೆ ಮೇಲಿನ ಪ್ರೀತಿ ಮತ್ತು ಆಧುನಿಕ ತಂತ್ರಜ್ಞಾನ ಬಳಕೆಯಿಂದ ಹಲವು ಸಿನಿಮಾಗಳು ಬಿಡುಗಡೆಯಾಗಿರುವುದು ಆಶಾದಾಯಕ ಎಂದರು.

ಡಾ| ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿ, 25 ವರ್ಷಗಳಿಂದ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ರಂಗಭೂಮಿಯಲ್ಲಿ ಅತ್ಯುತ್ತಮ ಪ್ರಯೋಗಳನ್ನು ಮಾಡಿದ್ದು, ‘ಒರಿಯರ್ದೊರಿ ಅಸಲ್‌’ ಸಿನಿಮಾದಲ್ಲಿ ಯಶಸ್ಸು ಕಂಡು, ಇದೀಗ ‘ಮದಿಮೆ’ ಮಾಡಿದ್ದು, ಶುಭವಾಗಲಿ ಎಂದರು.

ನಿರ್ಮಾಪಕ ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ, ಚಿತ್ರದ ನಾಯಕ ಲಿಖೀತ್‌ ಶೆಟ್ಟಿ, ನಟಿ ರಮ್ಯಾ ಬಾರ್ನೆ, ನಟರಾದ ಸಂತೋಷ್‌ ಶೆಟ್ಟಿ, ಉಮೇಶ್‌ ಮಿಜಾರ್‌, ನವ್ಯಾ, ಉಷಾ ಭಂಡಾರಿ, ಸಂತೋಷ್‌ ಶೆಟ್ಟಿ, ಚೇತನ್‌ ರೈ ಮಾಣಿ, ರಾಘವೇಂದ್ರ ರೈ, ಸಂಗೀತ ನಿರ್ದೇಶಕ ಎ.ಕೆ. ವಿಜಯ್‌ ಮೊದಲಾದವರು ಉಪಸ್ಥಿತರಿದ್ದರು.

ಹಿರಿಯ ಕಲಾವಿದ ವಿ.ಜಿ. ಪಾಲ್‌ ಸ್ವಾಗತಿಸಿದರು. ಚಿತ್ರದ ನಿರ್ದೇಶಕ ವಿಜಯ್‌ಕುಮಾರ್‌ ಕೊಡಿಯಾಲ್‌ಬೈಲ್‌ ವಂದಿಸಿದರು.

Madime_Film_Release_5 honorkill Madime_Film_Release_1 Madime_Film_Release_2

‘ಮದಿಮೆ’ದ ಇಲ್ಲ್…!

ಸುಚಿತ್ರ ಚಿತ್ರಮಂದಿರದಲ್ಲಿ ಗುರುವಾರ ‘ಮದುವೆ’ ಮನೆಯ ಸಂಭ್ರಮವಿತ್ತು. ‘ಮದಿಮೆ’ ನೋಡಲು ಬರುವವರಿಗೆ ಕೊಂಬು ವಾದ್ಯಗಳ ಜತೆಗೆ ಸ್ವಾಗತ ಕೋರಲಾಗಿತ್ತು.

ಚಿತ್ರ ಮಂದಿರದ ಒಳಪ್ರವೇಶಿಸುತ್ತಿದ್ದಂತೆ ಮಹಿಳೆಯರು ಪನ್ನೀರಿನ ಮೂಲಕ ಸ್ವಾಗತ ಕೋರಿದರು. ಜತೆಗೆ ಕೆಂಪು ಗುಲಾಬಿ ನೀಡಿ ಬರಮಾಡಿಕೊಂಡರು. ಚಿತ್ರಮಂದಿರದ ಸುತ್ತ ಮದುವೆ ಮನೆಯಲ್ಲಿರುವ ತಳಿರು ತೋರಣ ಗಮನ ಸೆಳೆಯುತ್ತಿತ್ತು.

~ ಉದಯವಾಣಿ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)