ಬಾಬಾಗಳ ಬಂಡವಾಳ!

0
758

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

babas

ಭಾರತದಲ್ಲಿ ಬಾಬಾಗಳು ಸದಾ ಸುದ್ದಿಯಲ್ಲಿರುವುದು ಹೊಸತೇನಲ್ಲ. ಕೆಲವರು ಭದ್ರತಾ ವ್ಯವಸ್ಥೆಗೆ ಸವಾಲೊಡ್ಡಿ, ಇನ್ನೂ ಕೆಲವರು ತಮಗೆ ಭದ್ರತೆ ಇಲ್ಲ ಎಂದೂ, ಮತ್ತೆ ಕೆಲವು ಬಾಬಾಗಳು ಬದುಕಿನಲ್ಲಿ ಬಣ್ಣ ತುಂಬಿಸಲು ಹೋಗಿ ಸುದ್ದಿ ಮಾಡುತ್ತಾರೆ. ಅಂತಹ ಬಾಬಾಗಳ ಬಂಡವಾಳವನ್ನು ಇಲ್ಲಿ ನೀಡಲಾಗಿದೆ.

ಸಂತ ರಾಂಪಾಲ್‌ಜಿ ಮಹಾರಾಜ- ಭದ್ರತೆಗೆ ಸವಾಲಾದ ಬಾಬಾ

ಪೂರ್ಣ ಹೆಸರು- ರಾಂಪಾಲ್ ಸಿಂಗ್ ಜತಿನ್
ಬಾಬಾ ಆಗುವ ಮುನ್ನ- ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ. ಹರ್ಯಾಣ ಸರ್ಕಾರದ ನೀರಾವರಿ ಇಲಾಖೆಯಲ್ಲಿ 18 ವರ್ಷಗಳ ಕಾಲ ಜೂನಿಯರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು.
ಸ್ಥಳ- ಸತ್ಲೋಕ್ ಆಶ್ರಮ, ಕರೊಂಥಾ, ರೋಹ್ತಕ್
ಬೆಂಬಲಿಗರು- ಲಕ್ಷಕ್ಕೂ ಅಧಿಕ
ಕಾನೂನನ್ನು ಎದುರು ಹಾಕಿಕೊಂಡದ್ದು- 2006ರ ಜುಲೈನಲ್ಲಿ ರಾಂಪಾಲ್ ಆಶ್ರಮದಲ್ಲಿ ನಡೆದ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದ. 2014ರ ನ.18, 19ರಂದು, ರಾಮ್‌ಪಾಲ್ ನಡೆಸಿದ ಅಟ್ಟಹಾಸಕ್ಕೆ 6 ಮಂದಿ ಮೃತಪಟ್ಟಿದ್ದಾರೆ. 19ರ ರಾತ್ರಿ ರಾಂಪಾಲ್ ಬಂಧನ.

ಚಂದ್ರಸ್ವಾಮಿ – ದುಡ್ಡುನುಂಗುವ ಬಾಬಾ

ಪೂರ್ಣ ಹೆಸರು- ನೇಮಿ ಚಂದ್
ಬಾಬಾ ಆಗುವ ಮುನ್ನ- ರಾಜಾಸ್ಥಾನದ ಬೆಹರೊಡ್‌ನ ಬಡ್ಡಿ ವ್ಯಾಪಾರಿಯ ಪುತ್ರ. ಚಿಕ್ಕ ವಯಸ್ಸಿನಲ್ಲಿ ಮನೆ ಬಿಟ್ಟು ಉಪಾಧ್ಯಾರ್ ಆಮರ್ ಮುನಿ ಮತ್ತು ಗೋಪಿನಾಥ್ ಕವಿರಾಜ್ ಅವರ ಶಿಷ್ಯರಾದರು. ಅಂದಿನ ಸಚಿವರಾದ ನರಸಿಂಹ ರಾವ್ ಆಪ್ತ.
ಸ್ಥಳ- ಹೈದ್ರರಾಬಾದ್, ದೆಹಲಿ
ಬೆಂಬಲಿಗರು- ಬ್ರೂನೈ ಸುಲ್ತಾನ್, ಬಹರೈನ್ ಶೇಖ್ ಇಸಾ ಬಿನ್ ಸಲ್ಮಾನ್ ಅಲ್ ಖಲೀಫಾ, ನಟಿ ಎಲಿಝಬೆತ್ ಟೇಲರ್, ಉದ್ಯಮಿ ಅದ್ನಾನ್ ಖಶ್ಮೋಗಿ.

ಗುರ್ಮೀತ್ ರಾಮ್ ರಹೀಮ್ ಇನ್ಸಾನ್ – ರಾಕ್ ಸ್ಟಾರ್ ಬಾಬಾ

ಪೂರ್ಣ ಹೆಸರು- ಗುರ್ಮೀತ್ ರಾಮ್ ರಹೀಮ್ ಸಿಂಗ್
ಬಾಬಾ ಆಗುವ ಮುನ್ನ- ರಾಜಸ್ಥಾನದ ಗಂಗಾನಗರ ಜಿಲ್ಲೆಯ ಜಮೀನ್ದಾರರ ಕುಟುಂಬದಲ್ಲಿ ಜನನ, ಖಲಿಸ್ತಾನ್ ಲಿಬರೇಷನ್ ಫೋರ್ಸ್‌ನ ಉಗ್ರವಾದಿ ಗುರ್ಜಂತ್ ಸಿಂಗ್ ರಾಜಸ್ಥಾನಿಯ ಆಪ್ತ.
ಸ್ಥಳ- ಡೆರಾ ಸಚ್ಚಾ ಸೌದಾ ಆಶ್ರಮ, ಸಿರ್ಸಾ
ಬೆಂಬಲಿಗರು- 5 ಕೋಟಿ
ಕಾನೂನನ್ನು ಎದುರು ಹಾಕಿಕೊಂಡದ್ದು- 1 ಅತ್ಯಾಚಾರ ಮತ್ತು 2 ಕೊಲೆ ಪ್ರಕರಣಗಳು ದಾಖಲಾಗಿವೆ. ಸಿರ್ಸಾ ಮೂಲದ ಪತ್ರಕರ್ತ, ಮ್ಯಾನೇಜರ್ ಒಬ್ಬರನ್ನು ಕೊಲೆ ಮಾಡಿದ ಆರೋಪದಡಿ.

ಅಸಾರಾಂ ಬಾಪು- ಕಂಬಿ ಹಿಂದಿರುವ ಬಾಬಾ

ಪೂರ್ಣ ಹೆಸರು- ಅಸುಮಲ್ ತೌಮಲ್ ಹರ್ಪಲಾನಿ
ಬಾಬಾ ಆಗುವ ಮುನ್ನ- 1970ರಲ್ಲಿ ಅಹಮದಾಬಾದ್‌ನಲ್ಲಿ ಸೈಕಲ್ ಮೆಕ್ಯಾನಿಲಕ್ ಆಗಿದ್ದರು.
ಸ್ಥಳ- ಅಸಾರಾಂ ಬಾಪು, ಆಶ್ರಮ, ಅಹಮದಾಬಾದ್
ಬೆಂಬಲಿಗರು- 2 ಕೋಟಿ
ಕಾನೂನನ್ನು ಎದುರು ಹಾಕಿಕೊಂಡದ್ದು- ಜೋಧ್‌ಪುರ ಆಶ್ರಮದಲ್ಲಿ 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಂಧನಕ್ಕೆ ಒಳಗಾಗಿದ್ದಾರೆ.

ಸ್ವಾಮಿ ನಿತ್ಯಾನಂದ- ಸೆಕ್ಸ್‌ಸ್ಕ್ಯಾಂಡಲ್ ಬಾಬಾ

ಪೂರ್ಣ ಹೆಸರು- ರಾಜಶೇಖರನ್
ಬಾಬಾ ಆಗುವ ಮುನ್ನ- ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ. 1995ರಲ್ಲಿ ಚೆನ್ನೈನ ರಾಮಕೃಷ್ಣ ಮಠ ಸೇರಿದರು.
ಸ್ಥಳ- ನಿತ್ಯಾನಂದ ಧ್ಯಾನಪೀಠಂ, ಬಿಡದಿ, ಬೆಂಗಳೂರು
ಬೆಂಬಲಿಗರು- 20 ಲಕ್ಷ
ಕಾನೂನನ್ನು ಎದುರು ಹಾಕಿಕೊಂಡದ್ದು- ಮಾಜಿ ಭಕ್ತರಿಂದ ಅತ್ಯಾಚಾರ, ವಂಚನೆ, ಅಸಹಜ ಅಪರಾಧ, ಜೀವ ಬೆದರಿಕೆಗಳ ಆರೋಪ ಎದುರಿಸುತ್ತಿದ್ದಾರೆ.

~ ಕ.ಪ್ರ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)