ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ

0
448

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

1

ಕುಂದಾಪುರ: ನ. 29 ಮತ್ತು 30 ರಂದು ಪ್ರಸಿದ್ಧ ಪುಣ್ಯಕ್ಷೇತ್ರ ಕೊಲ್ಲೂರಿನಲ್ಲಿ ಆಯೋಜಿಸಲಾದ ಕುಂದಾಪುರ ತಾಲೂಕು 14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ, ವಿದ್ವಾಂಸ ಡಾ || ಕನರಾಡಿ ವಾದಿರಾಜ ಭಟ್ಟರನ್ನು ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ವಿಧ್ಯುಕ್ತವಾಗಿ ಆಹ್ವಾನ ಪತ್ರಿಕೆ ನೀಡಿ ಸಮ್ಮೇಳನಕ್ಕೆ ಆಮಂತ್ರಿಸಲಾಯಿತು.

ಸ್ವಾಗತ ಸಮಿತಿಯ ಅಧ್ಯಕ್ಷ ಕೊಲ್ಲೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ ಆಡ್ಯಂತಾಯರು ಪರಿಷತ್ ಪದಾಧಿಕಾರಿಗಳೊಂದಿಗೆ ಶುಕ್ರವಾರ ಮುಂಜಾನೆ ಬಸ್ರೂರು ಮೂಡುಕೇರಿಯ ಭಟ್ಟರ ನಿವಾಸಕ್ಕೆ ತೆರಳಿ ನಿಯೋಜಿತ ಅಧ್ಯಕ್ಷರಿಗೆ ಶಾಲು ಹೊದೆಸಿ ಗೌರವಿಸಿ ಫಲಪುಷ್ಪಗಳೊಂದಿಗೆ ಸಮ್ಮೇಳನ ಆಹ್ವಾನ ಪತ್ರಿಕೆಯನ್ನಿತ್ತು ಅಭಿನಂದಿಸಿ ಆಹ್ವಾನಿಸಿದರು. ನಿವೃತ್ತ ಪ್ರಾಂಶುಪಾಲ ವೇದಮೂತಿ೯ ಬಳ್ಕೂರು ಭಾಸ್ಕರ ಉಡುಪರು ವೇದಮಂತ್ರ ಪಠಿಸಿದರು.

ಈ ಸಂದರ್ಭದಲ್ಲಿ ಸಾಹಿತ್ಯ, ಸಾಹಿತಿ ಮತ್ತು ಸಮ್ಮೇಳನದ ಬಗ್ಗೆ ವಿಶ್ಲೇಷಣೆಯನ್ನಿತ್ತ ಸಮ್ಮೇಳನಾಧ್ಯಕ್ಷ ಡಾ || ಕನರಾಡಿ ವಾದಿರಾಜ ಭಟ್ಟರು ಸಮ್ಮೇಳನಕ್ಕಾಗಮಿಸಿ ಸವಾ೯ಧ್ಯಕ್ಷತೆಯನ್ನು ವಹಿಸುವುದಾಗಿ ತಿಳಿಸಿದರು.

ತಾಲೂಕು ಕ.ಸಾ.ಪ. ಅಧ್ಯಕ್ಷ ಕುಂದಾಪುರ ನಾರಾಯಣ ಖಾವಿ೯, ಕಾರ್ಯದಶಿ೯ ಕೆ.ಜಿ.ವೈದ್ಯ, ತಾಲೂಕು ಚುಟುಕು ಸಾ.ಪ. ಅಧ್ಯಕ್ಷ ಭಾಸ್ಕರ ಕಲೈಕಾರ್, ಬಸ್ರೂರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ಅಂಬುಜಾಕ್ಷಿ ಇನ್ನಿತರರು ಉಪಸ್ಥಿತರಿದ್ದರು.

 

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)