ಕಂಡ್ಲೂರು: ಕಬಡ್ಡಿ ಪಂದ್ಯಾಟದ ವೇಳೆ ಹೊಡೆದಾಟ, ನಾಲ್ವರು ಆಸ್ಪತ್ರೆಗೆ, ಹತ್ತಕ್ಕೂ ಹೆಚ್ಚು ಜನರ ಮೇಲೆ ಕೇಸು ದಾಖಲು, ಬಿಗು ಪೊಲೀಸ್ ಬಂದೋಬಸ್ತ್

0
496

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

crime_logo_gambling

ಕುಂದಾಪುರ: ತಾಲೂಕಿನ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವ ಕಂಡ್ಲೂರಿನಲ್ಲಿ ಇಂದು ಕಬಡ್ಡಿ ಪಂದ್ಯಾಟದ ವೇಳೆ ನಡೆದ ಘರ್ಷಣೆಯಲ್ಲಿ ಎರಡು ತಂಡಗಳ ಒಟ್ಟೂ ನಾಲ್ಕು ಮಂದಿ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಹತ್ತಕ್ಕೂ ಹೆಚ್ಚು ಜನರ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದ್ದು,ಸದ್ಯ ಕಂಡ್ಲೂರಿನಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಿಗಾವಹಿಸಿದ್ದಾರೆ.
ಕಬಡ್ಡಿ ಪಂದ್ಯಾಟದ ವೇಳೆ ನಡೆದ ಘರ್ಷಣೆ ವಿಭಿನ್ನ ಕೋಮಿನ ಯುವಕರ ನಡುವೆ ನಡೆದಿರುವುದರಿಂದ ಹಾಗೂ ಸದ್ರಿ ಪ್ರಕರಣ ಕೋಮು  ಬಣ್ಣ ಪಡೆಯುವ ಲಕ್ಷಣ ಕಾಣಿಸಿಕೊಳ್ಳುತ್ತಿರುವುದರಿಂದ ಯಾರೂ ವದಂತಿಗಳಿಗೆ ಕಿವಿಗೊಡದೆ, ಶಾಂತಿಯನ್ನು ಕಾಪಾಡಿಕೊಂಡು ಹೋಗಬೇಕಾಗಿ ಮುಖಂಡರು ಮನವಿ ಮಾಡಿದ್ದಾರೆ..
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)