ನಾಗೂರು ಯಕ್ಷ ಸಮುಚ್ಚಯ ಉಧ್ಘಾಟನೆ.

1
628

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (55) ಸಮ್ಮತ (10) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

1

ಬ್ಯೆಂದೂರು:ಯಕ್ಷ ಬಳಗ ನಾಗೂರು,ಹೇರಂಜಾಲು ಯಕ್ಷಗಾನ ಪ್ರತಿಷ್ಟಾನ,ದಿ.ಮಾರ್ವಿ ರಾಮಕ್ರಷ್ಣ ಹೆಬ್ಬಾರ್ ಸ್ಮಾರಕಬಯಲು ರಂಗ ಮಂದಿರದ ಯಕ್ಷಸಮುಚ್ಚಯದ ಉಧ್ಘಾಟನೆ ನಾಗೂರಿನಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯೆಂದೂರು ಶಾಸಕ ಕೆ.ಗೋಪಾಲ ಪೂಜಾರಿ ಕರಾವಳಿಯ ಹೆಮ್ಮೆಯ ಯಕ್ಷಗಾನ ಕಲೆಯನ್ನು ಉಳಿಸುವ ಹಾಗೂ ಮುಂದಿನ ತಲೆಮಾರಿಗೆ ಬೆಳೆಸುವ ಕಾರ್ಯ ನಿರಂತರವಾಗಿರಬೇಕು.ಕಲೆಯನ್ನು ಉಳಿಸುವಲ್ಲಿ ಯಕ್ಷ ಬಳಗದ ಕೊಡುಗೆ ಅನನ್ಯವಾಗಿದೆ.ಯಕ್ಷ ಸಮುಚ್ಚಯ ಸಮಾಜಕ್ಕೆ ದೊರೆತ ಕೊಡುಗೆ ಎಂದರು.

ಯಕ್ಷ ಸಮುಚ್ಚಯ ಉಧ್ಘಾಟಿಸಿ ಮಾತನಾಡಿದ ಶ್ರೀಕ್ಸೇತ್ರ  ಕೊಲ್ಲೂರು ಮಾಜಿ ಧರ್ಮದರ್ಶಿ ಸುಕುಮಾರ ಶೆಟ್ಟಿ  ಜಾನಪದ ಕಲೆಗಳ ರಾಜ ಯಕ್ಷಗಾನವಾಗಿದೆ.ದೇವಸ್ಥಾನಗಳು ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಮುಂದಾಗಬೇಕು.ಬದಲಾಗಿ ಸಂಪಾದನೆಯ ಚಿಂತನೆ ಸಲ್ಲದು.ಕಲೆ ವ್ಯವಹಾರಿಕ ಪ್ರಾಮುಖ್ಯತೆ ಪಡೆಯಬಾರದು ಎಂದರು.

ಈ ಸಂಧರ್ಭದಲ್ಲಿ ಕೋಟ ಆಮ್ರತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ ಕುಂದರ್,ಕಿರಿಮಂಜೇಶ್ವರ ಗ್ರಾ.ಪಂ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ,ಸದಾಶಿವ ಶ್ಯಾನುಭಾಗ್,ಮಂಜುನಾಥ ಭಟ್,ಭಾಲಕ್ರಷ್ಣ ಶೆಟ್ಟಿ, ಶ್ರೀನಿವಾಸ ದೇವಾಡಿಗ, ಸುಧಾಕರ ,ನಾಗೇಶ ಗಾಣಿಗ, ಮುಕಾಂಬಿಕಾ ವಾರಂಬಳ್ಳಿ,ಡಾ.ಪ್ರದೀಪ, ಯು.ಮಂಜುನಾಥ ಭಟ್ ಉಪ್ರಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಹೇರಂಜಾಲು ಗೋಪಾಲ ಗಾಣಿಗ ಪ್ರಸ್ತಾವಿಕ ಮಾತುಗಳನ್ನಾಡಿದರು.ಈಶ್ವರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.ಸುಬ್ರಹ್ಮಣ್ಯ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (55) ಸಮ್ಮತ (10) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)