ಮರಿಚೀಕೆಯಾಗಿ ಉಳಿದಿದೆ ರತ್ನಾ ಕೊಠಾರಿ ಅಸಹಜ ಸಾವು ಪ್ರಕರಣ…! 4 ತಿಂಗಳು ಕಳೆದರು ಬಹಿರಂಗಗೊಳ್ಳದ ಸತ್ಯಾಂಶ….!

0
529

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (11) ಅಭಿಪ್ರಾಯವಿಲ್ಲ (0)

0611bdre3

ಬ್ಯೆಂದೂರು: ಕೆಲವು ಪ್ರಕರಣಗಳೇ ಹಾಗೇ ಒಮ್ಮೆಲೆ ಭಾರಿ ಅಘಾತ ಉಂಟು ಮಾಡುತ್ತದೆ. ವ್ಯಾಪಕ ಚರ್ಚೆ ನಡೆಯುತ್ತದೆ. ಒಂದಿಷ್ಟು ಪ್ರತಿಭಟನೆಯ ಕಾವು ತನ್ನಿಂತಾನೆ ತಟಸ್ಥವಾಗಿ ಬಿಡುತ್ತದೆ. ಇಂತಹ ಘಟನೆಗೆ ಉದಾರಣೆಯಾಗಿರುವುದು ಶಿರೂರು ರತ್ನಾ ಕೊಠಾರಿ ಅಸಹಜ ಸಾವಿನ ಪ್ರಕರಣವಾಗಿದೆ.

ಜುಲೈ 9ರಂದು ಶಿರೂರು ಪ.ಪೂ ಕಾಲೇಜಿನಿಂದ ತರಗತಿ ಮುಗಿಸಿ ಹಿಂದಿರುಗುತ್ತಿರುವ ವೇಳೆ ಸಾವಂತಗುಡ್ಡೆ ಎಂಬಲ್ಲಿ ವಿದ್ಯಾರ್ಥಿನಿ ರತ್ನಾ ಕೊಠಾರಿ ನಾಪತ್ತೆಯಾಗಿದ್ದಳು. ಕಡು ಬಡ ಕುಟುಂಬದ ಮುಗ್ದ ವಿದ್ಯಾರ್ಥಿನಿಯ ನಾಪತ್ತೆ ಪ್ರಕರಣ ಇಡೀ ಊರನ್ನು ದಿಗ್ಬ್ರಮೆಗೊಳಿಸಿತ್ತು. ಸ್ಥಳೀಯ ಮುಂದಾಳುಗಳು, ಸಾರ್ವಜನಿಕರು ಸೇರಿ ಎರಡು ದಿವಸ ನಿರಂತರ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ದೊರೆಯಲಿಲ್ಲ. ಇದಾದ ಬಳಿಕ ಜುಲೈ ೧೨ರಂದು ಸಾವಂತ ಗುಡ್ಡೆಯ ದುರ್ಗಮ ಕಾಲುದಾರಿಯ ಪೊದೆಯ ಬಳಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.

ಜಿಲ್ಲೆಯಾದ್ಯಂತ ವ್ಯಾಪಕ ಪ್ರತಿಭಟನೆ: ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿನಿಯೊಬ್ಬಳ  ಅಸಹಜ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಸಾವಿನ ನಿಖರ ಕಾರಣ ತಿಳಿಯಬೇಕು.ಮತ್ತು ಮೇಲ್ನೋಟಕ್ಕೆ ಸಹಜ ಸಾವು ನಡೆದಿಲ್ಲ .ಹೀಗಾಗಿ ಕಾಣದ ಕೈಗಳ ಕೈವಾಡ ವಿದೆಯಂದು ಆಗ್ರಹಿಸಿ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು,ವಿದ್ಯಾರ್ಥಿಗಳು ಜಿಲ್ಲೆಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆಸಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆರಕ್ಷಕ ಇಲಾಖೆ ಜಿಲ್ಲಾ ಪೋಲಿಸ್ ವರಿಷ್ಠಾಽಕಾರಿಗಳ ಮಾರ್ಗದರ್ಶನದಲ್ಲಿ ಮೂರು ಪ್ರತ್ಯೇಕ ತಂಡಗಳನ್ನು ರಚಿಸಿ ತನಿಖೆ ಪ್ರಾರಂಭಗೊಳಿಸಿತ್ತು. ಪ್ರಾಥಮಿಕ ಹಂತದಲ್ಲಿ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುವ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಆದರೆ ವಿದ್ಯಾರ್ಥಿನಿಯ ಶವ ದೊರೆತಿರುವ ಸ್ಥಿತಿಯನ್ನು ಪರಿಶೀಲಿಸಿದಾಗ ಇದೊಂದು ಅಸಹಜ ಸಾವು ಎನ್ನುವುದು ಸಷ್ಟವಾಗಿತ್ತು. ಹೀಗಾಗಿ ನಿರಂತರ ಎರಡು ತಿಂಗಳು ಶಿರೂರು ವ್ಯಾಪ್ತಿಯಲ್ಲಿ ನೂರಾರು ಜನರನ್ನು ವಿಚಾರಣೆಗೊಳಪಡಿಸಲಾಯಿತು. ವಿವಿಧ ಹಂತದಲ್ಲಿ ಶೋಧನೆಗೆ ತೊಡಗಿದರು ಸಹ ಫಲಿತಾಂಶ ಮಾತ್ರ ಶೂನ್ಯವಾಗಿತ್ತು.

ಬಹಿರಂಗಗೊಳ್ಳದ ಪೂರ್ಣ ವರದಿ: ಪ್ರಕರಣದ ಸತ್ಯಾ ಸತ್ಯತೆಯನ್ನು ಪರಿಶೀಲಿಸಿ ಸ್ಪಷ್ಟ ಕಾರಣವನ್ನು ಬಹಿರಂಗಗೊಳಿಸಬೇಕು ಎಂದು ಮಹಿಳಾ ಸಂಘಟನೆಯವರು ಸೇರಿದಂತೆ ಎಲ್ಲಾ ಪ್ರತಿಭಟನೆಗಾರರು ಇಲಾಖೆಗೆ ಒತ್ತಾಯಿಸಿದ್ದರರು. ಮರಣೋತ್ತರ ಪರೀಕ್ಷೆ ಹಾಗೂ ಹೆಚ್ಚುವರಿ ಪರೀಕ್ಷೆಗೊಳಪಡಿಸಿದ ದೇಹದ ಭಾಗಗಳ ವರದಿ ದೊರಯದೇ ಪೂರ್ಣ ವಿವರ ನೀಡಲು ಸಾಧ್ಯವಿಲ್ಲ ಎನ್ನುವ ಆರಕ್ಷಕರ ಮಾತಿಗೆ ಮನ್ನಣೆ ನೀಡಿ ನಾಲ್ಲು ತಿಂಗಳು ಕಳೆದರೂ ಇನ್ನೂ ರತ್ನಾ ಕೊಠಾರಿ ಸಾವಿನ ನಿಖರ ಕಾರಣ ದೊರೆಯಲಿಲ್ಲ. ಈ ಬಗ್ಗೆ ಪತ್ರಿಕೆಯೊಂದಿಗೆ ಪ್ರತಿಕ್ರಯಿಸಿದ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಽಕಾರಿ ರಾಜೇಂದ್ರ ಪ್ರಸಾದ ಈಗಾಗಲೇ ಬಹುತೇಕ ವರದಿ ಕೈ ಸೇರಿದೆ. ಕೂದಲು ಪರೀಕ್ಷೆಯ ವರದಿ ಅಂತಿಮವಾಗಿ ದೊರೆತಿಲ್ಲ. ಈಗಾಗಲೇ ಎಲ್ಲಾ ಮಾಹಿತಿ ಕಲೆ ಹಾಕಿದ್ದು ಅತ್ಯಾಚಾರ ಕೊಲೆ, ಅಸಹಜ ಸಾವು ನಡೆದಿಲ್ಲ ಎನ್ನುವ ಲಕ್ಷಣಗಳಿವೆ ಎನ್ನುತ್ತಾರೆ.

ಇನ್ನೊಂದು ಮೂಲದ ಪ್ರಕಾರ ರತ್ನಾ ಕೊಠಾರಿ ಸಾವು ಸಹಜವಾಗಿದ್ದು ಈಗಿರುವ ಎಲ್ಲಾ ವರದಿಗಳಲ್ಲೂ ಇದೆ ಮಾಹಿತಿ ದೊರೆಯುತ್ತಿದೆ.ಹೆಜ್ಜೇನು ದಾಳಿಯಿಂದಲೂ ಇಂತಹ ಘಟನೆ ನಡೆಯಬಹುದು ಎನ್ನುವ ಮಾತು ಕೇಳಿಬರುತ್ತಿದೆ.

ಆಶ್ಚರ್ಯವೆಂದರೆ ರತ್ನಾ ಕೊಠಾರಿ ಪ್ರಕರಣ ನಡೆದ ಬಳಿಕ ಪೈಪೋಟಿಗಿಳಿಯುವಂತೆ ರಾಜಕೀಯ ಮುಖಂಡರು ಮೃತ ವಿದ್ಯಾರ್ಥಿನಿ ಮನೆಗೆ ಬೇಟಿ ನೀಡಿದರು. ಸರಕಾರ ೩ ಲಕ್ಷ ಪರಿಹಾರ ನೀಡುವ ಭರವಸೆ ದೊರೆತರು ಸಹ ಇಲಾಖೆಯ ವರದಿ ಅಂತಿಮಗೊಳ್ಳದಿರುವುದರಿಂದ ಹಿನ್ನಡೆ ಕಂಡಿದೆ.

ಬಾರೀ ಪ್ರಚಾರ ಕಂಡು ಕೊಂಡಿರುವ ರತ್ನಾ ಕೊಠಾರಿ ಪ್ರಕರಣದ ಹೋರಾಟ ಕುಂದಾಪುರ ಕಾಲೇಜು ವಿದ್ಯಾರ್ಥಿನಿ ಸುಪ್ರೀತಾ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಇದ್ದಕ್ಕಿದ್ದಂತೆ ತಟಸ್ಥವಾಗಿರುವುದು ಆಶ್ಚರ್ಯ ತಂದಿದೆ. ಬಹುತೇಕ ಪ್ರಕರಣಗಳು ನಡೆಯುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳು ಸೇರಿದಂತೆ ವ್ಯಾಪಕ ಪ್ರಚಾರ ಕಂಡುಕೊಳ್ಳುತ್ತದೆ. ಈಗಾಗಲೇ ಸೌಜನ್ಯ ಕೊಲೆ ಪ್ರಕರಣ, ಪ್ರಥ್ಣಿ ಆತ್ಮಹತ್ಯೆ,ರತ್ನಾ ಕೊಠಾರಿ, ಸುಪ್ರೀತಾ ಪೂಜಾರಿ ಪ್ರಕರಣಗಳು ಸ್ಪಷ್ಟತೆ ದೊರೆಯುವ ಮುನ್ನ ತೀರ್ಥಹಳ್ಳಿ ನಂದಿತಾ ಪೂಜಾರಿ ಸಾವು ಮತ್ತೆ ಸುದ್ದಿಯಾಗ ತೊಡಗಿದೆ. ಈ ಹೋರಾಟದ ಭರದಲ್ಲಿ ಹಳೆಯ ಪ್ರಕರಣಗಳು ಹಳ್ಳ ಹಿಡಿಯುವ ಮುನ್ನ ಪ್ರಜ್ಞಾವಂತ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ. ರತ್ನಾ ಕೊಠಾರಿ ಸಾವಿನ ಸತ್ಯಾಂಶ ಹೊರಬೀಳಬೇಕಾಗಿದೆ.ಗ್ರಾಮೀಣ ಭಾಗದ ಪ್ರಕರಣದಲ್ಲಿ ಇಲಾಖೆ ಪಾರದರ್ಶಕತೆ ಕಂಡುಕೊಳ್ಳಬೇಕಾಗಿದೆ.

ವರದಿ: ವೆಬ್ಬೇಶ್

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (11) ಅಭಿಪ್ರಾಯವಿಲ್ಲ (0)