ವಿಮಾನಕ್ಕೆ ಎಮ್ಮೆ ಡಿಕ್ಕಿ: ಭಾರೀ ಸುರಕ್ಷತಾ ವೈಫ‌ಲ್ಯ

0
845

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಸೂರತ್‌/ನವದೆಹಲಿ: ಗುಜರಾತ್‌ನ ಸೂರತ್‌ನಿಂದ ದಿಲ್ಲಿಗೆ ಹೊರಟಿದ್ದ ಸ್ಪೈಸ್‌ಜೆಟ್‌ ವಿಮಾನಕ್ಕೆ ರನ್‌ವೇಯಲ್ಲಿ ಅಡ್ಡ ಬಂದ ಎಮ್ಮೆ ಡಿಕ್ಕಿ ಹೊಡೆದ ಪ್ರಕರಣವು ದೇಶದಲ್ಲಿನ ವಿಮಾನಯಾನ ವಲಯದಲ್ಲಿನ ಅವ್ಯವಸ್ಥೆಯನ್ನು ಮತ್ತೂಮ್ಮೆ ಸಾಬೀತುಪಡಿಸಿದೆ.

ಘಟನೆಯ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಕೇಂದ್ರ ವಿಮಾನಯಾನ ಸಚಿವ ಅಶೋಕ ಗಜಪತಿರಾಜು, ಇನ್ನೆಂದೂ ಇಂಥ ಘಟನೆ ಮರುಕಳಿಸಬಾರದು ಎಂದು ವಿಮಾನ ನಿಲ್ದಾಣಗಳ ಸಿಬ್ಬಂದಿಗೆ ಸೂಚಿಸಿದ್ದಾರೆ ಮತ್ತು ಸೂರತ್‌ ಏರ್‌ಪೋರ್ಟ್‌ನ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಆದೇಶಿಸಿದ್ದಾರೆ.

ಗುರುವಾರ ರಾತ್ರಿ ಸ್ಪೈಸ್‌ಜೆಟ್‌ ವಿಮಾನ ಟೇಕಾಫ್ ಆಗಲು ಸಿದ್ಧವಾಗುತ್ತಿದ್ದಂತೆಯೇ ಬಿಡಾಡಿ ಎಮ್ಮೆ ಅಡ್ಡ ಬಂದು ಡಿಕ್ಕಿ ಹೊಡೆದಿತ್ತು. ಇದರಿಂದ ವಿಮಾನದ ಬದಿಗೆ ಭಾರಿ ಹಾನಿಯಾಗಿತ್ತು. ರೆಕ್ಕೆಗೆ ಸಿಲುಕಿದ ಎಮ್ಮೆ ಸ್ಥಳದಲ್ಲೇ ಅಸುನೀಗಿತ್ತು. ಆದರೆ ಪೈಲಟ್‌ ವಿಮಾನ ಮೇಲಕ್ಕೇರಿಸದೇ ಕೂಡಲೇ ನಿಲ್ಲಿಸಿದ್ದರಿಂದ 148 ಪ್ರಯಾಣಿಕರ ಪ್ರಾಣ ಉಳಿದಿತ್ತು. ಘಟನೆಯಿಂದ ಆಕ್ರೋಶಗೊಂಡಿರುವ ಸ್ಪೈಸ್‌ಜೆಟ್‌, ಸೂರತ್‌ಗೆ ತನ್ನ ವಿಮಾನಯಾನವನ್ನೇ ರದ್ದುಗೊಳಿಸಿದೆ.

ಈ ಹಿಂದೆ 2009ರಲ್ಲಿ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ವಿಮಾನಕ್ಕೆ ನಾಗಪುರದಲ್ಲಿ ಹಂದಿ ದಿಕ್ಕಿ ಹೊಡೆದಿತ್ತು. 2010ರಲ್ಲಿ ಮುಂಬೈನಲ್ಲಿ ನಾಯಿ ರನ್‌ವೇಗೆ ನುಗ್ಗಿದ್ದರಿಂದ ಅರ್ಧತಾಸು ವಿಮಾನ ಸಂಚಾರವೇ ಬಂದಾಗಿತ್ತು.

2014_11$largeimg207_Nov_2014_223313803

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)