ಯಕ್ಷಗಾನ ತಾಳಮದ್ದಳೆ ಜ್ಞಾನಯಜ್ಞ – ಡಾ. ಎಂ. ಪ್ರಭಾಕರ ಜೋಷಿ

0
453

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

7-11-2014-17

ನಾಗೂರು : ಯಕ್ಷಗಾನ ತಾಳಮದ್ದಲೆ ಪುರಾಣಗಳು ಪ್ರತಿಪಾದಿಸುವ ತತ್ವಾದರ್ಶಗಳನ್ನು ತೆರೆದಿಡುತ್ತದೆ. ಪುರಾಣಗಳ ಮರು ಅವಲೋಕನ ಮತ್ತು ಮರುಸೃಷ್ಟಿಯ ಮೂಲಕ ಅವುಗಳಲ್ಲಿ ಸಮಕಾಲೀನ ಸನ್ನಿವೇಶಗಳಿಗೆ ಮತ್ತು ಬದುಕಿಗೆ ಅನ್ವಯವಾಗುವ ವಿಚಾರಗಳನ್ನು ಹೊರಗೆಡಹುತ್ತದೆ; ಪ್ರಸ್ತುತವೆನಿಸುವ ಸಂದೇಶಗಳನ್ನು ನೀಡುತ್ತದೆ. ಆದುದರಿಂದ ಅದು ನಿಜ ಅರ್ಥದಲ್ಲಿ ಒಂದು ಜ್ಞಾನಯಜ್ಞ ಎಂದು ನಿವೃತ್ತ ಪ್ರಾಂಶುಪಾಲ, ಖ್ಯಾತ ತಾಳಮದ್ದಲೆ ಅರ್ಥದಾರಿ ಡಾ. ಎಂ. ಪ್ರಭಾಕರ ಜೋಷಿ ಹೇಳಿದರು.

ಕಿರಿಮಂಜೇಶ್ವರ ನಾಗೂರು ಸುತ್ತಲಿನ ನಾಗರಿಕರ ಸಹಯೋಗದೊಂದಿಗೆ ಧಾರೇಶ್ವರ ಯಕ್ಷಬಳಗ ಚಾರಿಟಬಲ್ ಟ್ರಸ್ಟ್ ನಾಗೂರು ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದ ಪ್ರಾಚಾರ್ಯ ಮಾರ್ವಿ ನಾರ್ಣಪ್ಪ ಉಪ್ಪೂರ ಭಾಗವತರ ಸ್ಮರಣ ವೇದಿಕೆಯಲ್ಲಿ ಆಯೋಜಿಸಿರುವ ತಾಳಮದ್ದಲೆ ಸಪ್ತಾಹವನ್ನು ಗುರುವಾರ ಅವರು ಉದ್ಘಾಟಿಸಿ ಮಾತನಾಡಿದರು.

ಉದ್ಘಾಟನೆಯೊಂದಿಗೆ ನಾರ್ಣಪ್ಪ ಉಪ್ಪೂರರ ಸಂಸ್ಮರಣಾ ಭಾಷಣ ಮಾಡಿದ ಅವರು ಉಪ್ಪೂರರನ್ನು ಅವಧೂತ ಕಲಾವಿದ ಎಂದು ಬಣ್ಣಿಸಿದರು. ಯಕ್ಷಗಾನಕ್ಕೆ ಹೊಸ ರೂಪ ನೀಡುವ ಮೂಲಕ ಅದರ ಉತ್ಕರ್ಷಕ್ಕೆ ಕಾರಣರಾದರು ಎಂದು ನುಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ, ಪ್ರಸಂಗಕರ್ತ, ಉಪ್ಪೂರರ ಮಗ ದಿನೇಶ ಉಪ್ಪೂರ ಮುಖ್ಯ ಅಭ್ಯಾಗತರಾಗಿದ್ದರು.
ಟ್ರಸ್ಟ್‌ನ ಸಂಚಾಲಕ ಸುಬ್ರಹ್ಮಣ್ಯ ಧಾರೇಶ್ವರ ಸ್ವಾಗತಿಸಿ, ಆರಂಭಿಕ ನುಡಿಗಳನ್ನಾಡಿದರು. ರತನ್ ಬಿಜೂರು ವಂದಿಸಿದರು. ಎಂ. ಗೋವಿಂದ ನಿರೂಪಿಸಿದರು.

ಉದ್ಘಾಟನೆಯ ಬಳಿಕ ಕಲಾವಿದರಾದ ಕೆ. ಪಿ. ಹೆಗ್ಡೆ, ರಾಘವೇಂದ್ರ ಮಯ್ಯ, ಎನ್. ಜಿ. ಹೆಗ್ಡೆ, ಶಿವಾನಂದ ಕೋಟ, ಕಾರ್ತಿಕೇಯ ಧಾರೇಶ್ವರ, ಡಾ. ಎಂ. ಪ್ರಭಾಕರ ಜೋಷಿ, ಅಶೋಕ ಭಟ್ ಉಜಿರೆ, ಆರ್ಗೋಡು ಮೋಹನದಾಸ ಶೆಣೈ, ಎಸ್. ವೈಕುಂಠ ಹೇರ್ಳೆ, ವಾದಿರಾಜ ಕಲ್ಲೂರಾಯ ಅವರಿಂದ ಕೃಷ್ಣಸಂಧಾನ ಪ್ರಸಂಗದ ತಾಳಮದ್ದಲೆ ನಡೆಯಿತು.

ವರದಿ – ಜನಾರ್ಧನ್ ಎಸ್.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)