ನಂದಿತಾ ಮನೆಗೆ ಸಚಿವೆ ಉಮಾಶ್ರೀ ಭೇಟಿ: ಮೃತ ಬಾಲಕಿಗೆ ನ್ಯಾಯ ಸಿಗುವಂತಾಗಬೇಕು

0
911

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

minister-umashree

ತೀರ್ಥಹಳ್ಳಿ, : ಮಹಿಳಾ ಮತ್ತು ಶಿಶು ಕಲ್ಯಾಣ ಸಚಿವೆ ಉಮಾಶ್ರೀ ತೀರ್ಥಹಳ್ಳಿ ಪಟ್ಟಣದ ಬಾಳೇಬೈಲಿನ ಮೃತ ಬಾಲಕಿ ನಂದಿತಾಳ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಅವರು ನಂದಿತಾಳ ತಂದೆ ಕೃಷ್ಣಮೂರ್ತಿ, ಅವರ ಪತ್ನಿ ಹಾಗೂ ಬಂಧುಗಳನ್ನು ಸಂತೈಸಿ, ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಉಮಾಶ್ರೀ, ಈ ಪ್ರಕರಣದಲ್ಲಿ ಬಾಲಕಿಗೆ ನ್ಯಾಯ ಸಿಗುವಂತಾಗಬೇಕು. ಈ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗುವಂತಾಗಬೇಕು ಎಂದರು.

ಇದಕ್ಕೂ ಮುನ್ನ ಉಮಾಶ್ರೀಯವರು ಪಟ್ಟಣದ ಪ್ರಮುಖ ದೇವಾಲಯವಾದ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

ಮೃತ ಬಾಲಕಿಗೆ ನ್ಯಾಯ ಸಿಗುವಂತಾಗಬೇಕು: ಸಚಿವೆ ಉಮಾಶ್ರೀ

ತೀರ್ಥಹಳ್ಳಿ, ನ.6: ಬಾಲಕಿ ಸಾವಿನ ಪ್ರಕರಣವನ್ನು ಸರಕಾರ ಸಿ‌ಒಡಿಗೆ ಒಪ್ಪಿಸಿದ್ದು ಸತ್ಯ ಶೋಧನೆಯ ನಿಟ್ಟಿನಲ್ಲಿ ಈ ತನಿಖೆಯಾಗುತ್ತಿದೆ. ಆರೋಪಿ ಯಾವ ಧರ್ಮದವನಾಗಲಿ, ಜಾತಿಯವನಾಗಲಿ ಮುಖ್ಯವಲ್ಲ. ಬಾಲಕಿಗೆ ನ್ಯಾಯ ಸಿಗುವಂತಾಗಬೇಕು ಎಂದು ಮಕ್ಕಳ ಹಾಗೂ ಶಿಶು ಕಲ್ಯಾಣ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಯಾವುದೇ ಪ್ರಕರಣ ನಡೆದಾಗ ಅದನ್ನು ರಾಜಕೀಯ ನಿಟ್ಟಿನಲ್ಲಿ ನೋಡಬಾರದು. ರಾಜಕೀಯ ಬಂದಾಗ ಸತ್ಯ ಮರೆಮಾಚುತ್ತದೆ. ಈ ಸರಕಾರ ಸತ್ಯದ ಪರವಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಜನತೆಗೆ ಸತ್ಯ ತಿಳಿಯಬೇಕೆಂದು ಸಿ‌ಒಡಿ ತನಿಖೆಗೆ ಒಪ್ಪಿಸಿದ್ದಾರೆ. ಸರಕಾರ ಎಂದೂ ಸಹ ಯಾರ ಪರವಾಗಿ ಕಾರ್ಯನಿರ್ವಹಿಸುವುದಿಲ್ಲ. ಸತ್ಯದ ಪರ ಸರಕಾರ ಸದಾ ಇರುತ್ತದೆ ಎಂದರು.

ಈಗಾಗಲೇ ರಾಜ್ಯದಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲಿನ ಲೈಂಗಿನ ದೌರ್ಜನ್ಯದ ಪ್ರಶ್ನೆಗೆ ಉತ್ತರಿಸಿದ ಅವರು ಪೋಕ್ಸೋ ಕಾಯ್ದೆಯನ್ನು ಈಗಾಗಲೇ ಜಾರಿಗೊಳಿಸಿದ್ದು ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗುತ್ತದೆ ಎಂದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)