ಲಡಾಕ್ ಯಾತ್ರಾ ಲಹರಿಗಳು….1

0
1581

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ladak 1

ಬದುಕೆನ್ನುವುದು ಹಾಗೇ… ಹೊಸತನದ ಹುಡುಕಾಟದಲ್ಲಿ, ಕಾಡುವ ಕನಸಿನ ಬೆನ್ನೇರಿ ತೊಡಗುವ ಅನ್ವೇಷಣೆ, ತಿಳಿದುಕೊಳ್ಳುವ ಹಂಬಲ, ವೃದ್ಧಿಸಿ ಕೊಳ್ಳಬೇಕಾದ ಜ್ಝಾನ ಇವೆಲ್ಲದರ ಜಂಟಿಯಾಗಿಯೇ ಹಿರಿಯರು ಹೇಳಿರುವುದು ದೇಶಸುತ್ತಬೇಕು, ಕೋಶ ಓದಬೇಕು ಎಂದು. ಸದಾ ಕಾಲಿಗೆ ಚಕ್ರ ಕಟ್ಟಿಕೊಂಡಿರುವ ನನಗೆ ಪ್ರಯಾಣ ಹೊಸತೇನಲ್ಲ, ಪ್ರವಾಸ ಆಕಸ್ಮಿಕವಲ್ಲ.

 

ladak 3

ಮಾಧ್ಯಮ ಕ್ಷೇತ್ರ ವೆಂದಾಕ್ಷಣ ಪ್ರತಿದಿನ ಹೊಸತನದ ಶೋಧನೆಯ ಕಾತುರ ಕಾಡುತ್ತಲೇ ಇರುತ್ತದೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ನೈಸರ್ಗಿಕ ಸೌಂದರ್ಯದ ಜೊತೆಗೆ ಧಾರ್ಮಿಕ ಹಿನ್ನೆಲೆಯ ಪ್ರವಾಸಿ ಸ್ಥಳಗಳನ್ನೇ ಹೊಂದಿರುವ ಕೀರ್ತಿ ಭಾರತದ್ದಾಗಿದೆ. ಅದರಲ್ಲೂ ಉತ್ತರ ಭಾರತದ ಅದ್ಬುತ ಕ್ಷೇತ್ರಗಳಲ್ಲಿಯೂ ನಯನ ಮನೋಹರವಾಗಿದೆ. ಅಂತಹ ಹಿರಿಮೆಯ ಹಿನ್ನೆಲೆಯ ಜೊತೆಗೆ ಋಷಿ ಮುನಿಗಳು, ತಪೋಭೂಮಿ ಎಂದು ಕರೆಯುವ ಹಿಮಾಲಯ, ಜಮ್ಮು – ಕಾಶ್ಮೀರ ರಾಜ್ಯದ ಹಿಮಾಲಯದ ತಪ್ಪಲಿನಲ್ಲಿರುವ ಲಡಾಕ್ – ತೀಹ್ ಗೆ ಹತ್ತು ದಿನಗಳ ಪ್ರವಾಸ ಕೈಗೊಂಡ ನಮ್ಮ ತಂಡ ಜೂನ್ 8 ರಂದು ಮುಂಜಾನೆ ಬೈಂದೂರಿನಿಂದ ಹೊರಟಿತ್ತು. ಹುಬ್ಬಳ್ಳಿಯಿಂದ ಸಂಜೆ 3 ಗಂಟೆಗೆ ನಮ್ಮ ರೈಲ್ವೆ ಪ್ರಯಾಣ ಪ್ರಾರಂಭ.

ladak 4

ಈ ಹಿಂದೆ ಏಳು ರಾಜ್ಯಗಳನ್ನು ರೈಲ್ವೆ ಮಾರ್ಗದ ಮೂಲಕ ಪ್ರಯಾಣಿಸಿದ ನಮಗೆ ದೆಹಲಿಯವರೆಗೆ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಬೇಕಾಗಿತ್ತು. ಎರಡು ತಿಂಗಳ ಹಿಂದೆ ಟಿಕೆಟ್ ಕಾದಿರಿಸಿದ್ದರು ಸಹ ಅಧಿಕೃತವಾಗಿ ಟಿಕೇಟ್ ದೊರೆತಿಲ್ಲದೆ ನಮಗೆ ಹುಬ್ಬಳ್ಳಿಯಿಂದ ಪ್ರಾರಂಭವಾಗಿ ಹಿಂತಿರುಗುವ ತನಕ ರೈಲ್ವೆ ಇಲಾಖೆಯ ಕರಾಳ ಅಧ್ಯಾಯಗಳ ಬಗ್ಗೆ, ಹಗಲು ದರೋಡೆಯ ಬಗ್ಗೆ ಸ್ಪಷ್ಟ ಅನುಭವ ನೀಡಿತ್ತು. ಟಿ. ಟಿ. ಕೃಪಾಕಟಾಕ್ಷದಿಂದ ರೈಲ್ವೆಯಲ್ಲಿ ಮೀಸಲು ಟಿಕೇಟ್ ದೊರೆತರು ಸಹ ಪ್ರಯಾಣಿಕರ ಗೋಳು ಪ್ರಕಾಶಿಸುತ್ತಿರುವ ಭಾರತದ ನೈಜ ಚಿತ್ರಣ ಮೂಡಿಸಿದಂತಾಗಿತ್ತು. ಎರಡು ದಿನದ ಉಗಿಬಂಡಿ ಯಾತ್ರೆ ಹೊಸ ಅನುಭವಗಳಿಗೆ ಸಾಕ್ಷಿಯಾಗಿತ್ತು. ಅಗಲುವಿಕೆ ಆಗಮಿಸಿ, ನಿರೀಕ್ಷೆ, ಬೀಳ್ಕೊಡುಗೆ ಹೀಗೆ ನಿತ್ಯ ಜೀವನದ ಹತ್ತಾರು ಜಂಜಾಟಗಳ ಭಾವನೆ ಜೊತೆಗೆ ಆತ್ಮೀಯತೆ ಬೆಳೆಸಿದ್ದು, ರೈಲಿನಲ್ಲಿರುವ ಯುವ ಸೈನಿಕರ ಒಡನಾಡ ವರ್ಷವಿಡಿ ದೇಶ ಕಾಯುವ ಕಾಯಕದ ನಡುವೆ ದೊರೆತ ಬಿಡುವಿನಲ್ಲಿ ಊರಿಗೆ ಬಂದು, ಬಳಿಕ ಭಾರದ ಮನಸ್ಸಿನಲ್ಲಿ ಮತ್ತೆ ಕರ್ತವ್ಯಕ್ಕೆ ಹಿಂದಿರುಗುವ ವೀರಸೇನಾನಿಗಳು ತುಂಬಾ ಆಪ್ತತೆಗಳಿಸಿಕೊಂಡರು.

ladak 5

ವೈರುತ್ವದ ಭಾವಾವಿಶೇಷ, ದೇಶದೊಳಗಿನ ಆಂತರಿಕ ವಿದ್ಯಮಾನ, ಭಯೋತ್ಪಾದನೆ ಇವೆಲ್ಲವನ್ನೇ ಮೆಟ್ಟಿನಿಲ್ಲಬೇಕಾದ ಸೈನಿಕ ಯಾವ ಹೊತ್ತಿನಲ್ಲಿ ಎಲ್ಲ ಕರ್ತವ್ಯ ಪಾಲಿಸುತ್ತಾನೆ, ಯಾರ ಕಾಡತೂಸು ವಿಪತ್ತಿಗೆ ಎದೆಗವುಚುತ್ತದೆ ಎನ್ನುವುದೇ ತಿಳಿಯದ ವೀರಕಾಯಕ. ಮನೆಯವರು ಕಟ್ಟಿಕೊಟ್ಟ ರೊಟ್ಟಿ, ಖಾರಪಟ್ನ, ಉಂಡೆಗಳ ಜೊತೆ ತಾಯಿಯ ಕೈಯಡುಗೆ ಪ್ರಾಯಶ: ಎರಡು ದಿನದ ಪ್ರಯಾಣದಲ್ಲಿ ಮುಗಿದರು ಸಹ ನೆನಪು ಪ್ರತಿಕ್ಷಣವು ಝೇಂಕರಿಸುತ್ತದೆ. ಅದೇ ವಾತ್ಸಲ್ಯ, ಅದೇನೆಯಿದ್ದರು ಸಹ ಕೂಡಿಕೊಂಡು, ಕಾಡಿಕೊಂಡು, ಹರಟೆ, ಹಾಡು, ಹಾಸ್ಯದ ಜೊತೆಗೆ ದೆಹಲಿ ತಲುಪಿದ ನಮಗೆ ಸಾರಸ್ವತ ಭವನದಲ್ಲಿ ಭಾಂಧವ್ಯದ ಆತಿಥ್ಯ, ರೈಲ್ವೆ ನಿಲ್ದಾಣದಲ್ಲೆ ಬರಮಾಡಿಕೊಂಡ ಪೈಗಳು ಒಂದು ದಿನದ ವಿಶ್ರಾಂತಿಯನ್ನು ಅಚ್ಚುಕಟ್ಟಾಗಿ ನೀಡಿದ್ದರು. ಸಂಜೆ ವೇಳೆ ದೆಹಲಿಯ ಲಘುಸುತ್ತಾಟದೊಂದಿಗೆ ಮಾರನೆಯ ದಿನ ಮುಂಜಾನೆ ಮೂರು ಗಂಟೆಗೆ ನಮ್ಮ ಲಡಾಕ್ ಯಾತ್ರೆ ಪ್ರಾರಂಭ.

ladak 6

ಜೆಟ್ ಎರವೇಸ್ ನಲ್ಲಿ ದೆಹಲಿಯಿಂದ ಹೊರಟು ಹಿಮಾಲಯ ಮೇಲ್ಗಡೆ ಹಾರಿದಾಗ ಅವರ್ಣನೀಯ ಆನಂದ. ಕನಸಿನ ಲೋಕದ ಕಲ್ಪನೆಗಳೆಲ್ಲಾ ಸಾಕಾರದ ತೃಪ್ತಿ, ಮುಂಜಾನೆ ಏಳು ಗಂಟೆಗೆ ಲೇಹ್ ಲಡಾಕ್ ನ ವಿಮಾನ ನಿಲ್ದಾಣದಲ್ಲಿ ಇಳಿದಾಗಲೇ ವಾಸ್ತವಕತೆಯ ಅರಿವಾಗಿದ್ದು. ಇಲ್ಲಿಂದ ಕಳೆದ ಎಂಟು ದಿನವು ಒಂದಕ್ಕಿಂತ ಒಂದು ಅದ್ಬುತವಾಗಿದೆ. ಮೈಕೊರೆವ ಚಳಿ ನಮ್ಮನ್ನು ಸ್ವಾಗತಿಸಿದಾಗಲೇ ಗಂಭೀರತೆಯ ಅರಿವಾಗಿದ್ದು, ನಮ್ಮ ಚಾಲಕ ಹೋಟೆಲ್ ಮಂಡಾಲದ 103 ಸಂಖ್ಯೆ ಕೋಣೆಯಲ್ಲಿ ತಲುಪಿಸಿ ಒಂದು ದಿನ ಸಂಪೂರ್ಣ ವಿರಾಮ ತೆಗೆದುಕೊಳ್ಳಲು ಸೂಚಿಸಿದ.

ladak 7

 

 

ladak 8

ಮುಂದುವರಿಯುವುದು………

 

ವರದಿ : ವೆಬ್ಬೇಶ್

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)