ಲಡಾಕ್ ಯಾತ್ರಾ ಲಹರಿಗಳು……2 : ವಿಶ್ವ ಪ್ರವಾಸಿಗರ ಮನಸೂರೆಗೊಂಡ ಲಡಾಕ್ ಸಿಂಧೂ ಉತ್ಸವ

0
1613

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

l. da. 1

ಬೈಂದೂರು : ಪ್ರಪಂಚದಲ್ಲಿ ಹಲವು ಧರ್ಮ, ಹಲವು ಸಂಸ್ಕ್ರತಿಗಳಿಂದ ಶ್ರೀಮಂತ ಪರಂಪರೆಯಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ದೇಶ ಭಾರತ. ನಮ್ಮ ನೆಲದ ಸಾಂಪ್ರಾದಾಯಿಕ ಪದ್ದತಿಗಳನ್ನು ಜಾನಪದ ಆಚರಣೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡಿಸುವುದರಲ್ಲಿ ಪ್ರಮುಖವಾದದ್ದು ಜಮ್ಮು – ಕಾಶ್ಮೀರ ರಾಜ್ಯದ ಲಡಾಕ್ ಜಿಲ್ಲೆಯ ಅಂತರಾಷ್ಟ್ರೀಯ ಸಿಂಧೂ ಉತ್ಸವ.

 

l.da 2

ಬಹುತೇಕವಾಗಿ ಮೇ ತಿಂಗಳಿಂದ ಸೆಪ್ಟೆಂಬರ್ ವರೆಗೆ ಮಾತ್ರ ಲಡಾಕ್ ನಲ್ಲಿ ಪ್ರವಾಸಿಗರು ತೆರಳಬಹುದಾಗಿದೆ. ಜುಲೈ ಅಂತ್ಯದಿಂದ ಹಿಮಪಾತ ಅಧಿಕವಾಗಿರುವುದರಿಂದ ವಿದೇಶಿಯರು ಮಾತ್ರ ಆಗಮಿಸುತ್ತಾರೆ. ಜೂನ್ ತಿಂಗಳಲ್ಲಿ ಅತ್ಯದಿಕ ಸಂಖ್ಯೆಯಲ್ಲಿ ಈ ಭಾಗಕ್ಕೆ ದೇಶ – ವಿದೇಶಗಳಿಂದ ಪ್ರವಾಸಿಗರು ಆಗಮಿಸುವುದರಿಂದ ಜಮ್ಮು- ಕಾಶ್ಮೀರದ ಪ್ರವಾಸೋದ್ಯಮ ಇಲಾಖೆ ಸಿಂಧೂ ನದಿಯ ದಂಡೆಯ ಮೇಲೆ ಮೂರು ದಿನಗಳ ಸಾಂಸ್ಕ್ರತಿಕ ಉತ್ಸವ ನಡೆಸುತ್ತದೆ. ಪ್ರತಿದಿನ ಇಲ್ಲಿನ ಗ್ರಾಮೀಣ ಸಾಂಪ್ರಾದಾಯಿಕ ವಾದ್ಯ ಪರಿಕರ, ವಸ್ತ್ರ ವಿನ್ಯಾಸದ ಜಾನಪದ ನೃತ್ಯ, ಹಾಡುಗಳು ವೈಭವೀಕರಣಗೊಳ್ಳುತ್ತದೆ. ಇಲ್ಲಿನ ಅಧಿಕಾರಿಗಳ ಅಭಿಪ್ರಾಯದ ಪ್ರಕಾರ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿದೆ. 1991 ರಲ್ಲಿ ಹಿಮಾಲಯದ ತಪ್ಪಲಿನಲ್ಲಿ ಸಿಂಧೂ ನದಿಯ ದಂಡೆಯ ಮೇಲೆ ವಿಶೇಷವಾದ ವೇದಿಕೆ ನಿರ್ಮಿಸಲಾಗಿದೆ. ನೈಸರ್ಗಿಕ ಸೌಂದರ್ಯ, ಕೊರೆವ ಚಳಿಯಲ್ಲಿ ಸಾಂಸ್ಕ್ರತಿಕ ನೃತ್ಯಗಳು ಮನಸೂರೆಗೊಂಡಿದೆ.

l.da 4

ಲಹರ್‍ನ ಸಿಂಘೆಡಾನ್ಸ್, ನೈಪಾಡಾನ್ಸ್, ಗಜಲ್ ಡಾನ್ಸ್, ಜಬ್ರೊ, ಡಾಂಡಿಯಾ, ಕರಜಾ, ಚಬಾ, ಲಡಾಕ್ ಜಾನಪದ ನೃತ್ಯಗಳು ಪ್ರಚುತಪಡಿಸಿದ್ದು ಪ್ರತಿ ತಂಡದಲ್ಲಿ 5 ರಿಂದ 7 ಕಲಾವಿದರನ್ನೊಳಗೊಂಡಿದೆ. ಕರಾವಳಿ ಜಿಲ್ಲೆಯ ಮರಾಠಿ ಕುಣಿತ, ಸುಗ್ಗಿ ಕುಣಿತ, ಹೌದಾರಾಯನ ಓಲಗದಂತೆ ವಿಭಿನ್ನವಾಗಿದೆ. ವಿಶೇಷ ವಾದ್ಯ, ತಲೆಮೇಲೆ ಆಕರ್ಷಕ ಟೋಪಿಗಳು, ಸೈನಿಕ ವೇಷಭೂಷಣ, ಪ್ರತಿ ನೃತ್ಯವನ್ನು ಸಹ ಕಲಾವಿದರೆ ಹಾಡಿ ನರ್ತಿಸುತ್ತಿತ್ತು. ನೂರಾರು ಕಿ. ಮೀ. ದೂರದ ಹಳ್ಳಿಗಳಿಂದ ಬಂದಿರುವ ಕಲಾವಿದರಾಗಿದ್ದಾರೆ. ಸಿಂಧೂ ಗಾಟ್ ಎಂದು ಕರೆಯುವ ಈ ಪ್ರದೇಶದಲ್ಲಿ ವಿಶೇಷ ಅತಿಥಿಯಾಗಿ ಉತ್ತರಾಂಚಲಾ ಪ್ರವಾಸೋಧ್ಯಮ ಸಚಿವೆ ಶ್ರೀಮತಿ ಅಮ್ರಿತಾ ರಾವತ್ ಆಗಮಿಸಿದ್ದು ಲಡಾಕ್ ಪ್ರವಾಸೋಧ್ಯಮ ಸಚಿವ, ಹಾಗೂ ಮುಖ್ಯಸ್ಥರಿಗ್ ಜನ್ ಸ್ಪಗ್ಲರ್, ನಸೀರ್ ಅಸ್ಲಾಮ್ ವಾನಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

l.da 5

ಪ್ರತಿ ರಾಜ್ಯವು ಸಹ ಪ್ರವಾಸಿಗರನ್ನು ಆಕರ್ಷಿಸಲು ಈ ರೀತಿಯ ಉತ್ಸವಗಳನ್ನು ಹಮ್ಮಿಕೊಳ್ಳುವುದು ಸಾಮಾನ್ಯವಾದರೂ ಸಹ ಹಿಮಾಲಯದ ನೈಸರ್ಗಿಕ ಸೌಂದರ್ಯ ಮತ್ತು ಕಾಶ್ಮೀರದ ಸಾಂಪ್ರಾದಾಯಿಕ ಜನಪದ ಕಲೆಗಳು ವಿಶೇಷ ಮುದ ನೀಡಿದ್ದವು. ಮಂಜುಗಡ್ಡೆಯ ಪೆಟ್ಟಿಗೆಯೊಳಗಿರುವಂತೆ ಅನುಭವ. ಮೊದಲದಿನ ಕಡ್ಡಾಯವಾಗಿ ವಿಶ್ರಾಂತಿ ತೆಗೆದುಕೊಳ್ಳಿ ಎಂದರು. ಸಹ ಲೆಕ್ಕಿಸದೆ ಸುತ್ತಾಡಿದ ನಮಗೆ ಮಾರನೆಯ ದಿನ ನಿತ್ರಾಣವಾದಗಲೇ ಪರಿಸ್ಥಿತಿ ಅರಿವಾದದ್ದು. ಎರಡನೇ ದಿವಸ ಸ್ಥಳೀಯ ಪ್ರವಾಸಗಳ ಸುತ್ತಾಟ. ಮೊದಲ ಬಾರಿ ವಿಹಂಗಮ ಗುಡ್ಡಸಾಲುಗಳ ಸೌಂದರ್ಯವನ್ನು ಕಣ್ಣಿಗೆ ತುಂಬಿಕೊಂಡರೂ ಸಾಲದು ಎನ್ನುವ ಭಾವನೆ. ಕೊರೆವ ಚಳಿಗೆ ನೀಡುವ ಲಡಾಕ್ ಚಹಾ, ಮಜ್ಜಿಗೆ ಕಡೆಯುವಂತಹ ಪಾತ್ರದಲ್ಲಿ ಬಿಸಿ ನೀರನ್ನು ಹಾಕಿ ತೇಪ್ಯ ಅಡುಗೆ ಸೋಡಾ ಮತ್ತು ಉಪ್ಪನ್ನು ಕಡೆದು ಯಾಕ್ ಬೆಣ್ಣೆ ಬೆರೆಸಿ ಕೊಡುತ್ತಾರೆ. ಹಾಲ್ ಆಫ್ ಫೇಮ್ ಎನ್ನುವ ಸೈನಿಕ ಯುದ್ಧ ವಸ್ತು ಸಂಗ್ರಹಾಲಯವನ್ನು ಪಾಕಿಸ್ಥಾನಿಗಳಿಂದ ವಶಪಡಿಸಿಕೊಂಡ ಪತ್ರ, ಪುಸ್ತಕ, ಯುದ್ಧದ ದೃಶ್ಯ, ಅಪರೇಷನ್ ವಿಷಯ ಕ್ಷಣ, 37 ವಿವಿಧ ಪದಕ, ಮಹಾವೀರ ಚಕ್ರ ಪಡೆದ ವೀರ ಸೇನಾನಿಗಳ 13 ಲಾವಚಿತ್ರ, 1947ರ ಯುದ್ಧ ಸ್ಮಾರಕ, ಟೈಗರಹಿತ, ರಭಾಬರ್ ಹೈಟ್ರ ಚಿತ್ರಗಳನ್ನೊಳಗೊಂಡಿದೆ. ಸಮಸ್ತ ಸೇನೆಯ ಆಹಾರ, ಹೋರಾಟ, ದಿನಚರಿಗಳನ್ನು ಪರಿಚಯಿಸುವ ಅದ್ಬುತ ವಸ್ತು ಸಂಗ್ರಹಾಲಯದ ಬಳಿಕ ಕಾಳಿಮಾತಾ ದೇವಾಲಯ ವೀಕ್ಷಿಸಿ ಸಂಜೆ ಸಿಂಧೂ ಉತ್ಸವದ ಸಂಭ್ರಮವನ್ನು ಸವಿಯಿತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)