ಲಡಾಕ್ ಲಹರಿಗಳು – 3 : ವಿಶಿಷ್ಟತೆಯ ನಂಬಿಕೆಗಳಿರುವ ಕಾಶ್ಮೀರಿ ಮೋನಾಸ್ಟ್ರಿರಿಗಳು

0
1840

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

la 1

ಸಿಂಧೂ ಉತ್ಸವದ ಬಳಿಕ ಸಂಗಮ ಎನ್ನುವ ಝಂಸ್ಕರ್ ಮತ್ತು ಸಿಂಧೂ ನದಿಗಳು ಒಗ್ಗೂಡುವ ಪ್ರದೇಶ. ರ್‍ಯಾಪ್ಟಿಂಗ್ ಆಸಕ್ತರಿಗೆ ಹೊಸಹುಮ್ಮಸ್ಸು ತರುವ ಸಂಗಮ ಸಿಂಧೂ, ಝಂಸ್ಕಾರ್ ನದಿಗಳು ಪಾಕಿಸ್ಥಾನದತ್ತ ಹರಿಯುತ್ತದೆ. ನಂತರ ನಮ್ಮ ವೀಕ್ಷಣೆಗೆ ದೊರೆತದೇ ಬುದ್ದ ಮೋನಾಸ್ಟ್ರಿರಿಗಳು. ಇವರ ಪ್ರಕಾರ ದೇವತೆಗಳು 4 ಸ್ಥರದಲ್ಲಿರುತ್ತಾರೆ. ಅತ್ಯಂತ ಮೇಲ್ಪ್ತರದ ದೇವರು ದೇವತೆಗಳ ಕಣ್ಣಿಗೆ ಕಾಣ ಸಿಗುತ್ತಾರೆ. 2ನೇ ಸ್ತರದ ದೇವತೆಗಳು ಪುಣ್ಯ ಪುರುಷರಿಗೆ ಕಾಣ ಸಿಗುತ್ತಾರೆ. 3ನೇಯವರು ಸಾಮಾನ್ಯ ದೇವತೆಗಳ, 4ನೇಯವರು ಮನುಷ್ಯರ ನಡುವೆ ಕಣ್ಣಿಗೆ ಕಾಣಿಸದೆ ಭೂತಗಳಾಗಿವೆ. ಡಿಸ್ಕೀಟ್ ಎಂಬ ಊರಿನಲ್ಲಿರುವ ಮೋನಾಸ್ಟ್ರಿ ( ಬುದ್ದನ ಮಠ ) ಇದರ ಸುತ್ತಲೂ ಪ್ರಾರ್ಥನಾ ಪತಾಕೆಗಳನ್ನು ಎತ್ತರದಲ್ಲಿ ಕಟ್ಟಿರುತ್ತಾರೆ. ಬಟ್ಟೆಯಲ್ಲಿ ಕಲ್ಯಾಣ ಮಂತ್ರಗಳಿರುತ್ತದೆ. ಅದನ್ನು ಪವಿತ್ರ ವಸ್ತು ಎಂಬ ನಂಬಿಕೆಯಿಂದ ಅವುಗಳ ಮೂಲಕ ಬೀಸುವ ಗಾಳಿ ಪರಿಸರವನ್ನು ಪರಿಶುದ್ದಗೊಳಿಸುತ್ತದೆ ಎನ್ನುವ ನಂಬಿಕೆ. ಹೀಗಾಗಿ ಪ್ರತಿ ಮೋನಾಸ್ಟ್ರಿಯ ಸುತ್ತಲೂ ಪತಾಕೆಗಳನ್ನು ಕಟ್ಟಿರುತ್ತಾರೆ.

la 2

ಬುದ್ದನ ಮಠದ ಸಮೀಪವಿರುವ ಸ್ತೂಪಗಳನ್ನು ಚೋರ್ತೆನ್ ಎನ್ನುತ್ತಾರೆ. ಹಿರಿಯ ಗುರುಗಳು ಸತ್ತಿರುವ ಅವಶೇಷಗಳಾಗಿವೆ. ಪ್ರತಿ ಬುದ್ದ ದೇವಾಲಯದ ಎದುರುಗಡೆ ಸ್ವಾಗತ ಕಮಾನಿನಲ್ಲಿ ಎರಡು ಜಿಂಕೆ ಮಧ್ಯ ಭಾಗದಲ್ಲಿ ಚಕ್ರ ವಿರುತ್ತದೆ. ಬುದ್ದನಿಗೆ ಬುದ್ದ ಗಯಾದಲ್ಲಿ ಜ್ಝಾನೋದಯವಾದ ಬಳಿಕ ಮೊಟ್ಟಮೊದಲ ಪ್ರವಚನ ಕೊಟ್ಟದ್ದು ವಾರಣಾಸಿಯಿಂದ 11 ಕಿ. ಮೀ. ದೂರವಿರುವ ಸಾರನಾಥದ ಒಂದು ಜಿಂಕೆಯ ವನದಲ್ಲಿ. ಚಕ್ರ ಸ್ಥಗಿತವಾದ ಧರ್ಮದ ಚಕ್ರವನ್ನು ಮತ್ತೆ ಚಾಲನೆಗಳಿಸಿದೆ. ಪಾಳಿ ಭಾಷೆಯಲ್ಲಿ ದಮ್ಮ ಚಕ್ಕ ಪವತ್ತನ ಎನ್ನುತ್ತಾರೆ. ಹೀಗಾಗಿ ಪ್ರತಿ ದೇವಸ್ಥಾನಗಳಲ್ಲೂ ಜಿಂಕೆಯ ನಡುವೆ ಚಕ್ರಗಳಿರುತ್ತದೆ. ಬುದ್ದ ದೇವಸ್ಥಾನದ ಅಕ್ಕ ಪಕ್ಕದಲ್ಲಿ ಪ್ರಾಚೀನ ನಾಗರೀಕತೆಗಳ ಅದ್ಬುತ ಧ್ಯಾನದ ಕಲ್ಪನೆಗಳಿವೆ.

la 3

ಶಾಂತಿ ಸ್ತೂಪದಲ್ಲಿ ಧ್ಯಾನಕ್ಕೆ ಪ್ರಮುಖ ಆಧ್ಯತೆ. ಜಪಾನೀಸ್ ಶೈಲಿಯಲ್ಲಿದ್ದು ವಿಶ್ವಶಾಂತಿ ನೆಲೆಸಲಿ ಎನ್ನುವ ಉದ್ದೇಶ ಹೊಂದಿದೆ. ಸ್ತೂಪದ ಸುತ್ತಲೂ ಬುದ್ದನ ಜನನ, ದ್ಯಾನಾವಸ್ಥೆ, ಮಾರನ ಉಪಟಳ, ಮೊದಲ ಪ್ರವಚನ, ಮಹಾಪರಿ ನಿಬ್ಬಾಣ ಮುಂತಾದವುಗಳ ಕೆತ್ತನೆಗಳಿವೆ. ಬಹುತೇಕವಾಗಿ ಕಾಶ್ಮೀರದಲ್ಲಿರುವ ಧಾರ್ಮಿಕ ಕೇಂದ್ರಗಳು ಎತ್ತರದ ಗುಡ್ಡಗಳಲ್ಲಿ ಪ್ರತಿಷ್ಟಿತಲ್ಪಟ್ಟಿರುವುದು ವಿಶೇಷವಾಗಿದೆ. ಪ್ರತಿ ಧಾರ್ಮಿಕ ಕೇಂದ್ರದಲ್ಲೂ ಕಾಣಿಕೆಗಳನ್ನು ನೀಡಬಹುದಾಗಿದೆ. ಗುರುದ್ವಾರದಲ್ಲಿ ತಲೆಗೆ ಕೇಸರಿ ಬಟ್ಟೆ ಕಟ್ಟಿಕೊಂಡು ಪ್ರವೇಶ ಮಾಡಬೇಕಾಗಿರುವುದು ಕಡ್ಡಾಯವಾಗಿದೆ. ಹೀಗಾಗಿ ಕಾಶ್ಮೀರದ ಧಾರ್ಮಿಕ ನಂಬಿಕೆಗಳು ವಿಶಿಷ್ಟತೆಯಿಂದ ಗುರುತಿಸಲ್ಪಡುತ್ತದೆ.

la 4

la 5

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)