ಮೂಕಾಂಬಿಕಾ ರೋಡ್ ಬೈಂದೂರು ರೈಲು ನಿಲ್ದಾಣಕ್ಕೆ ಇನ್ನೊಂದು ರೈಲಿಗೆ ನಿಲುಗಡೆ ಘೋಷಣೆ

0
1553

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

rai

ಬೈಂದೂರು : ದಿನೇ ದಿನೇ ಯಾತ್ರಾರ್ತಿಗಳಿಂದ ತುಂಬಿ ತುಳುಕುತ್ತಿರುವ ಬೈಂದೂರಿನ ಪ್ರಸಿದ್ದ ಮುಕಾಂಬಿಕಾ ರೋಡ್ ಬೈಂದೂರು ರೈಲು ನಿಲ್ದಾಣಕ್ಕೆ ಯಾತ್ರಾರ್ತಿಗಳ ಅನುಕೂಲಕ್ಕಾಗಿ ರೈಲು ಸಂಖ್ಯೆ 19259/19260 ಭಾವನಗರ್ ಕುಚುವೆಲಿ Express ರೈಲು ಗಾಡಿಗೆ ಜುಲೈ 16 ರಿಂದ ನಿಲುಗಡೆ ನೀಡಿ ಕೇಂದ್ರ ರೈಲ್ವೆ ನಿಗಮ ಆದೇಶ ಹೊರಡಿಸಿದೆ.

ರೈಲು ಸಂಖ್ಯೆ 19259, ಕುಚುವೆಲಿ – ಭಾವನಗರ್ ಪ್ರತೀ ಶುಕ್ರವಾರ ಬೆಳಿಗ್ಗೆ 7.38 ಕ್ಕೆ ಬೈಂದೂರು ನಿಲ್ದಾಣಕ್ಕೆ ತಲುಪಲಿದ್ದು ಮುಂಬೈ ಕಡೆಗೆ ಪ್ರಯಾಣಿಸಲಿದೆ. ಮತ್ತು ರೈಲು ಸಂಖ್ಯೆ 19260 , ಪ್ರತೀ ಸೋಮವಾರ ಮಧ್ಯಾಹ್ನ 12.48 ಕ್ಕೆ ನಿಲ್ದಾಣಕ್ಕೆ ಆಗಮಿಸಿ ಕೇರಳದ ಕಡೆಗೆ ಪ್ರಯಾಣಿಸಲಿದೆ. ಇದರಿಂದ ಈ ನಿಲ್ದಾಣಕ್ಕೆ ವಾರದ ಎರಡು ದಿನಗಳಲ್ಲಿ ಕೇರಳ ದಿಂದ ಬರಲು ಮತ್ತು ಕೇರಳ ಕಡೆ ಪ್ರಯಾಣಿಸಲು ಯಾತ್ರಾರ್ತಿಗಳಿಗೆ ಇದ್ದ ಹಗಲು ರೈಲುಗಳ ಕೊರತೆಯನ್ನು ನೀಗಿಸಿದಂತಾಗಿದೆ.

ಈಗ ವಾರದ ಒಂದು ದಿನ ನಿಲುಗಡೆ ಇಲ್ಲದ ರೈಲು ಸಂಖ್ಯೆ 12977/12978 ಮರುಸಾಗರ್ Express ರೈಲುಗಾಡಿಗೆ ನಿಲುಗಡೆ ನೀಡಲು ಮನವಿ ಮಾಡಿದ್ದು ಯಾವುದೇ ಕ್ಷಣದಲ್ಲಿ ಇದರ ನಿಲುಗಡೆ ಆದೇಶ ಕೇಂದ್ರ ರೈಲ್ವೆ ನಿಗಮದಿಂದ ನಿರೀಕ್ಷಿಸಬಹುದೆಂದು ಇಲ್ಲಿನ ಮುಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಶ್ರೀ ಕೆ.ವೆಂಕಟೇಶ ಕಿಣಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)