ಪವಿತ್ರ ಶಿಲುಬೆಯ ದೇವಾಲಯ, ಬೈಂದೂರು

0
950

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

6-02-2013-11

ದೇವಾಲಯದ ಚರಿತ್ರೆ:

ಉಡುಪಿ ಜಿಲ್ಲೆಯ ಉತ್ತರದ ತುದಿಯಲ್ಲಿರುವ ಪ್ರಕೃತಿ ಸೊಭಗಿನಿಂದ ಕೂಡಿದ ಪ್ರದೇಶವಾದ ಬೈಂದೂರಿನಲ್ಲಿ ಸುಮುದ್ರ ಕಿನಾರೆಯಿಂದ ಕೆಲವೇ ಅಂತರದಲ್ಲಿ ಚಾರಿತ್ರಿಕ ಗುಡ್ಡದ ಕೆಳಗಡೆ ಇತಿಹಾಸ ಪ್ರಸಿದ್ಧ ಪವಿತ್ರ ಶಿಲುಬೆಯ ದೇವಾಲಯ (ಹೋಲಿ ಕ್ರಾಸ್ ಚರ್ಚ್) ಬೈಂದೂರಿನ ಕ್ರೈಸ್ತ ಸಮಾಜದ ಭಕ್ತಾದಿಗಳ ಕೇಂದ್ರ ಬಿಂದುವಾಗಿದೆ. ಈ ದೇವಾಲಯವು ಉಡುಪಿ ಧರ್ಮಪ್ರಾಂತ್ಯಕ್ಕೆ ಸೇರಿದ ದೇವಾಲಯವಾಗಿದೆ. ದೇವಾಲಯಕ್ಕೆ 150 ವರ್ಷಗಳ ಇತಿಹಾಸವಿದ್ದು, ಈ ಮೊದಲು ಗಂಗೊಳ್ಳಿ ಚರ್ಚ್ ಮಾತೃ ದೇವಾಲಯವಾಗಿದೆ. ಪುರಾತನ ಕಾಲದ ಚರಿತ್ರೆಯ ಕೆಲವು ದಾಖಲೆಯ ಪ್ರಕಾರ ಟಿಪ್ಪು ಸುಲ್ತಾನನ ರಾಜ್ಯಡಳಿತದ ಅವಧಿಯಲ್ಲಿ ಇಲ್ಲಿ ಕ್ರೈಸ್ತರ ದೇವಾಲಯ ಇದ್ದು ಕ್ರಿ.ಶ. 1783ರಲ್ಲಿ ಈ ದೇವಾಲಯದ ನಿರ್ನಾಮವಾಗಿದೆ ಎಂದು ಚರಿತ್ರೆ ಹೇಳುತ್ತದೆ. ಸುಮಾರು 150 ವರುಷಗಳ ಹಿಂದೆ ಸಮುದ್ರ ಮಾರ್ಗವಾಗಿ ವ್ಯಾಪಾರ-ವಹಿವಾಟುಗಳನ್ನು ನಡೆಸುವ ಗೋವಾದ ಕ್ರೈಸ್ತ ಜನರು ಇಲ್ಲಿನ ಚಾರಿತ್ರಿಕ ಗುಡ್ಡದ ಮೇಲೆ ಕ್ರೈಸ್ತ ಧರ್ಮದ ಧಾರ್ಮಿಕ ಸಂಕೇತ ಮರದ ಶಿಲುಬೆಯನ್ನು ಎತ್ತಿದರು ಮತ್ತು ಈ ಗುಡ್ಡದ ಸುತ್ತ-ಮುತ್ತಲಿನ ಪ್ರದೇಶದಲ್ಲಿ ನೆಲಸಿದರೆಂದು ಮತ್ತೆ ಕೆಲವೊಂದು ಮೂಲದ ಪ್ರಕಾರ ಕಾರವಾರ, ಶಿವಮೊಗ್ಗ, ಮೈಸೂರು ಹಾಗೂ ಉಡುಪಿ ಕಡೆಯಿಂದ ವಲಸೆ ಬಂದ ಕೆಲವು ಕ್ರೈಸ್ತರು ಅರಂಭದಲ್ಲಿ ಕುಂದಾಪುರ, ಗಂಗೊಳ್ಳಿ ಪ್ರದೇಶದಲ್ಲಿ ನೆಲಸಿದರು ಅನಂತರ ಬೈಂದೂರಿನ ಗುಡ್ಡದ ಸುತ್ತ-ಮುತ್ತಲಿನ ಪ್ರದೇಶದಲ್ಲಿ ನೆಲಸಿದರು ಅಂತ ಕೆಲವು ಹಿರಿಯರ ಹೇಳಿಕೆಯಾಗದೆ.

ಅನಂತರ 1850ರಲ್ಲಿ ಇಲ್ಲಿ ಒಂದು ಮಿಶನರಿ ಠಾಣೆ ಆರಂಭವಾಗಿ 1894ರಲ್ಲಿ ಈ ಠಾಣೆ ಪವಿತ್ರ ಶಿಲುಬೆಯ ದೇವಾಲಯಗಾಗಿ ಆಗಿ ಮಾರ್ಪಟ್ಟಿತು, ಈ ದೇವಾಲಯದ ಆಡಳಿತ ಮತ್ತು ಧಾರ್ಮಿಕ ವಿಧಿ-ವಿಧಾನಗಳು ಹಾಗೂ ಜನರಿಗೆ ಬೇಕಾದ ಧಾರ್ಮಿಕ, ಅಧ್ಯಾತ್ಮೀಕ ಮತ್ತು ಸಾಮಾಜಿಕ ಸೌಕರ್ಯಗಳನ್ನು ಗಂಗೊಳ್ಳಿ ಚರ್ಚಿನ ಧರ್ಮಗುರುಗಳು ನೆರೇವಸುತ್ತಿದ್ದರು. ಅನಂತರ ಮಾರ್ಚ್ 11, 1928ರಂದು ಆಗಿನ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವ| ರೆ| ಫಾ| ವಾಲೇರಿಯನ್ ಜೆ. ಡಿ?ಸೋಜಾರವರು ಈ ದೇವಾಲಯವನ್ನು ಸ್ವತಂತ್ರ ದೇವಾಲಯವಾಗಿಸಿ, ದೇವಾಲಯಕ್ಕೆ ತನ್ನದೆ ಆದ ಆಡಳಿತ ಹಾಗೂ ಗಂಗೊಳ್ಳಿ ಚರ್ಚಿನಲ್ಲಿ ಅತ್ಯುನ್ನತ ಸೆವೆ ಸಲ್ಲಿಸಿದ ಆಂದಿನ ಧರ್ಮಗುರುಗಳಾದ ರೆ| ಫಾ| ಅಲೆಕ್ಸ್ ಪಿ. ಡಿ?ಸೋಜಾ ಮೊದಲ ಅಧಿಕೃತ ಆಡಳಿತ ಗುರುಗಳಾಗಿ ಅಧಿಕಾರ ವಹಿಸಿಕೊಂಡರು, ಇಲ್ಲಿಂದ ಈ ದೇವಾಲಯಕ್ಕೆ ವರ್ಗಾವಣೆಗೊಂಡು ಬಂದ ಹಲವು ಧರ್ಮಗುರುಗಳಿಂದ ಹಂತ-ಹಂತವಾಗಿ ದೇವಾಲಯಕ್ಕೆ ಮತ್ತು ಜನರಿಗೆ ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ವಿಷಯಗಳಲ್ಲಿ ಅಗಾಧ ಪ್ರಮಾಣದ ಸೇವೆ ಸೌಲಭ್ಯಗಳಿಂದ ಉತ್ತಮ ಬದಲಾವಣೆಗಳಾಗಿವೆ. 1997ರಲ್ಲಿ ಈ ದೇವಾಲಯ ಜೀರ್ಣೊದ್ಧಾರಗೊಂಡು ಮೇ 28, 1998ರಂದು ಹೊಸ ವಿನ್ಯಾಸದಲ್ಲಿ ಈಗಿನ ದೇವಾಲಯದ ಕಟ್ಟಡ ನಿರ್ಮಾಣಗೊಂಡಿತು.

ಪವಿತ್ರ ಶಿಲುಬೆಯ ಗುಡ್ಡ:

6-02-2013-12

ಕ್ರೈಸ್ತರ ಧಾರ್ಮಿಕ ಸಂಕೇತ ಪವಿತ್ರ ಶಿಲುಬೆಯಾಗಿದ್ದು, ದೇವರು ತನ್ನ ಒಬ್ಬನೇ ಮಗನಾದ ಯೇಸುಕ್ರಿಸ್ತನನ್ನು ಭೂಲೋಕಕ್ಕೆ ಮನುಷ್ಯನಾಗಿ ಕಳುಹಿಸಿದರು, ಯೇಸುಕ್ರಿಸ್ತನು ಭೂಲೋಕದಲ್ಲಿ ವಾಸಿಸುವ ಜನರ ಪಾಪವನ್ನು ದೂರ ಮಾಡಿ ಜಗತ್ತನ್ನು ಪಾಪದ ಕೂಪದಿಂದ ಶುದ್ದಗೊಳಿಸಲು ದೇವರ ಶುಭವಾರ್ತೆ ಹಾಗೂ ಸತ್ಯವಾಕ್ಯವನ್ನು ಹಂಚಿದರು, ಆದರೆ ಯೇಸುವಿನ ಶುಭ ಸಂದೇಶ ಸತ್ಯವಾದರು, ಅದನ್ನು ಗೊತ್ತಿದ್ದು ಸುಳ್ಳು ಅಂತ ಕಥೆ ಕಟ್ಟಿ ಯೇಸುವಿನ ವಿರೋಧಿಗಳು ದೇವನಿಂದನೆಯಡಿ ಆಗಿನ ಕಾಲದ ಎಲ್ಲಕ್ಕಿಂತ ಘೋರ ಹಾಗೂ ಲಜ್ಜೆಯ ಶಿಕ್ಷೆ ಅಂದರೆ ಶಿಲುಬೆಯ ಮರಣಕ್ಕೆ ಗುರಿಪಡಿಸುವುದು ಅಂದಿನ ಕಾಲದಲ್ಲಿ ರೂಢಿಯಲ್ಲಿರುವ ನಿಯಮವಾಗಿತ್ತು. ಅದೇ ಶಿಕ್ಷೇಯನ್ನೆ ಯೇಸುವಿಗೆ ಗುರಿಪಡಿಸಿ ಶುಭ ಶುಕ್ರವಾರದಂದು ಜಗತ್ತಿಗೆ ಸತ್ಯವನ್ನೇ ಸಾರಿದ ಯೇಸುಕ್ರಿಸ್ತನಿಗೆ ಶಿಲುಬೆಯ ಮರಣವನ್ನು ನೀಡಿದರು. ಆದರೆ ಯೇಸುವಿನ ಶಿಲುಬೆಯ ಮರಣದಿಂದ ಈ ಪವಿತ್ರ ಶಿಲುಬೆಗೆ ಹೊಸ ರೂಪವೇ ಪಡೆದು, ಈ ಪವಿತ್ರ ಶಿಲುಬೆ ಕ್ರೈಸ್ತರಿಗೆ ಪ್ರಿತೀಯ, ಅಭಿಮಾನದ, ಗೌರವದ ಸಂಕೇತವಾಗಿದೆ, ಆಧ್ಯಾತ್ಮೀಕ ವಿಭಾಗದಲ್ಲಿ ಹೊರ ಸಂಕೇತವಾಗಿ ಕ್ರಸ್ತರು ಬಳಸುತ್ತಾರೆ ಮತ್ತು ಪೂಜ್ಯಾಭಾವಾನಾತ್ಮಕವಾಗಿ, ಭಕ್ತಿಪೂರ್ವಕವಾಗಿ ಶಿಲುಬೆಯ ಸಂಕೇತವನ್ನು ಆರಾಧಿಸುತ್ತಾರೆ.

ಹೀಗೆ ಇವತ್ತು ಜಗತ್ತಿನಲ್ಲಿ ಪವಿತ್ರ ಶಿಲುಬೆಗೆ ಸಮರ್ಪಿಸಿದ ಚರ್ಚ್ ಮತ್ತು ಪುಣ್ಯ ಕ್ಷೇತ್ರಗಳು ಹಲವಾರು ಕಡೆ ಇವೆ. ಇಂತಹ ಒಂದು ಪುಣ್ಯ ಕ್ಶೇತ್ರಕ್ಕೆ ನೀವು ಭೇಟಿ ಮಾಡುವುದಾದರೆ ಬೈಂದೂರು ಪವಿತ್ರ ಶಿಲುಬೆಯ ದೇವಾಲಯಕ್ಕೆ ಸಮೀಪದಲ್ಲೆ ಚರ್ಚ್ ಗುಡ್ಡವಿದ್ದು ಈ ಗುಡ್ಡವನ್ನು ಪವಿತ್ರ ಶಿಲುಬೆಯ ಗುಡ್ಡವೆಂದು ಕರೆಯುತ್ತಾರೆ, ಈ ಪವಿತ್ರ ಶಿಲುಬೆಯ ಸ್ಥಳವೇ ಬೈಂದೂರಿನ ಕ್ರೈಸ್ತ ಜನತೆಯ ಉಗಮ ಸ್ಥಾನವಾಗಿದ್ದು, ಬೈಂದೂರು ಚರ್ಚಿನ ಮೂಲ ಸ್ಥಾನವಾಗಿದೆ. ಜನವರಿ 22, 1935ರಂದು ಅಂದಿನ ಧರ್ಮಗುರುಗಳಾದ ರೆ| ಫಾ| ಲಿಯೊ ಪಿ. ಡಿಸೋಜಾರವರು ಮೊದಲಿದ್ದ ಮರದ ಶಿಲುಬೆಯ ಬದಲಾಗಿ ಕಲ್ಲಿನ ಶಿಲುಬೆಯನ್ನು ಕಟ್ಟಿಸಿದರು. ಅನಂತರ ಪೂಜಾ-ವಿಧಿ ವಿಧಾನಗಳಿಗೆ ನೆರಳಾಗಿಸಲು ಅಂದಿನ ಗುರುಗಳಾದ ರೆ| ಫಾ| ಮಾಕ್ಸಿಮ್ ಫುರ್ಟಾದೊರವರು ಸ್ಮಾರಕ ಕಟ್ಟಡವನ್ನು ಕಟ್ಟಿಸಿದರು. ತದನಂತರ ಭಕ್ತಾದಿಗಳಿಗಾಗಿ ಯೇಸುವಿನ ಶಿಲುಬೆಯಾತ್ರೆಯ ವಿವಿಧ ಹಂತಗಳನ್ನು ಸೂಚಿಸುವ ಹದಿನಾಲ್ಕು ಚಿತ್ರಪಟಗಳ ದೃಷ್ಯಗಳನ್ನು ಗುಡ್ಡದ ಕೆಳಗಿನಿಂದ ಗುಡ್ಡದ ಪವಿತ್ರ ಶಿಲುಬೆಯ ತನಕ ಕಟ್ಟಿಸಿ ಹಾಗೂ ಪ್ರತಿಯೊಬ್ಬರಿಗೂ ಪವಿತ್ರ ಶಿಲುಬೆಯ ಬುಡಕ್ಕೆ ತಲುಪಲು ಗುಡ್ಡಕ್ಕೆ ಹೋಗುವ ದಾರಿಯನ್ನು ಮೆಟ್ಟಿಲುಗಳ ಬದಲು ಸುಗಮ ದಾರಿಯಾಗಿ ರಸ್ತೆಯನ್ನು ಮಾಡಿ, ನಡೆಯಲು ಅಶ್ಯಕ್ತರಾಗಿರುವರಿಗೆ ಕೂಡ ಶಿಲುಬೆಯ ಬುಡಕ್ಕೆ ತಲುಪಲು ಅಂದಿನ ಗುರುಗಳಾದ ರೆ| ಫಾ| ಥೋಮಸ್ ಡಿಸೋಜಾರವರು ಅನೂಕೂಲ ಮಾಡಿಸಿಕೊಟ್ಟರು. ಹೀಗೆ ಈ ಪವಿತ್ರ ಶಿಲುಬೆಯ ಗುಡ್ಡ ಇತ್ತೀಚಿನ ವರುಷಗಳಲ್ಲಿ ಪುಣ್ಯ ಕ್ಷೇತ್ರವಾಗಿ ಮಾರ್ಪಡಾಗಿ ಬರುತ್ತಿದೆ.

6-02-2013-13

ದೂರ ದೂರದಿಂದ ಜನರು ಯಾತ್ರಿಕರಾಗಿ ಬಂದು ಪವಿತ್ರ ಶಿಲುಬೆಯಿಂದ ಪುಣ್ಯ ಪಡೆಯಲು ಚರ್ಚ್ ಹಾಗೂ ಪವಿತ್ರ ಗುಡ್ಡಕ್ಕೆ ಭೇಟಿ ನೀಡುತ್ತಾರೆ. ಶುಭ ಶುಕ್ರವಾರದ ಮುಂಚಿನ 40 ದಿನಗಳ ಕಾಲ ಪಾಪ ಪ್ರಾಯಶ್ಚಿತ ಕಾಲದಲ್ಲಿ ಇತರ ಚರ್ಚಿನ ಜನರು ಗುಂಪಾಗಿ ಬಂದು ಶಿಲುಬೆ ಯಾತ್ರೆ ಹಾಗೂ ಆಧ್ಯಾತ್ಮೀಕ ಪ್ರಾರ್ಥನೆಗಳನ್ನು ಕೈಗೊಳ್ಳುತ್ತಾರೆ. ಪರದೇಶದಲ್ಲಿರುವ ಪ್ರತಿಯೊಬ್ಬರು ಊರಿಗೆ ಬಂದಾಗ ಪವಿತ್ರ ಗುಡ್ಡಕ್ಕೆ ಭೇಟಿ ನೀಡಿ ಕೃತಜ್ಞತೆ ಮತ್ತು ಪ್ರಾರ್ಥನೆ ಸಲ್ಲಿಸಿ ಶಿಲುಬೆಯ ಆಶೀರ್ವಾದ ಪಡೆಯುತ್ತಾರೆ. ಹೀಗೆ ಹಲವಾರು ಭಕ್ತಾದಿಗಳು ಈ ಪವಿತ್ರ ಸ್ಥಳಕ್ಕೆ ಬಂದು ಯೇಸು ಕ್ರಿಸ್ತನ ಜನನ, ಮರಣ ಹಾಗೂ ಪುನರುತ್ಥಾನವನ್ನು ಸ್ಮರಿಸಿ ಶಿಲುಬೆಯನ್ನು ಆರಾಧಿಸುತ್ತಾರೆ ಹಾಗೂ ದೇವರ ದೈವಿಕ ಅನುಭವವನ್ನು ಪಡೆಯುತ್ತಾರೆ.

6-02-2013-14

ಚರ್ಚಿನ ಧರ್ಮಗುರುಗಳು ಭಕ್ತಾದಿಗಳ ಹೇಳಿಕೆಗಳನ್ನು ಆಲಿಸಿದ ಪ್ರಕಾರ, ಪವಿತ್ರ ಶಿಲುಬೆಯ ಮುಖಾಂತರ ಬೇಡುವ ತಮ್ಮ ಬೇಡಿಕೆಗಳು ಈಡೇರುತ್ತದೆ ಹಾಗೂ ಕಾಯಿಲೆಗಳು, ಕಷ್ಟ-ದುಃಖಗಳು ದೂರಗೊಂಡು ಮನಸ್ಸಿಗೆ ನೆಮ್ಮದಿ, ಆರೋಗ್ಯ, ಜೀವದಲ್ಲಿ ಸುಖ-ಶಾಂತಿ ಸಿಗುತ್ತದೆ ಎಂದು ಬರುವ ಭಕ್ತಾದಿಗಳ ಧೃಡ ನಂಬಿಕೆಯಾಗಿದೆ, ಹೀಗೆ ಇಲ್ಲಿ ಬರುವ ಯಾತ್ರಿಕರು ತಮಗೆ ಸಿಕ್ಕ ಫಲಕ್ಕೆ ಪ್ರತಿಯಾಗಿ ದೇವರಿಗೆ ಧನ್ಯವಾದ ಸಮರ್ಪಿಸಲಿಕ್ಕೆ ಪುನ್ಹ-ಪುನ್ಹ ಭೇಟಿ ನೀಡುತ್ತಾರೆ. ಈ ಏತ್ತರದ ಪವಿತ್ರ ಶಿಲುಬೆಯ ಗುಡ್ಡದ ಮೆಲೇರಿದರೆ ಪ್ರಶಾಂತ ವಾತವರಣದಲ್ಲಿ ಏಕಾಂತ ಧ್ಯಾನಕ್ಕೆ ಮತ್ತು ಪ್ರಾರ್ಥನಗೆ ಅನುಕೂಲವಾದ ಸ್ಥಳವಾಗಿದೆ. ಇಲ್ಲಿಂದ ಸುತ್ತ ಮುತ್ತಲಿನಲ್ಲಿರುವ ನದಿಗಳು, ತೆಂಗಿನ ಮರಗಳ ಸಾಲು, ಗದ್ದೆ-ಬಯಲುಗಳು, ಬೆಟ್ಟ-ಗುಡ್ಡಗಳ ಕೂಡಿದ ಪಡುಗಲ ತಡಿಯಲ್ಲಿರುವ ಬೈಂದೂರಿನ ಪ್ರಕೃತಿ ಸೌಂದರ್ಯವನ್ನು ಹಾಗೂ ಪಶ್ಚಿಮಕ್ಕೆ ಇರುವ ಪ್ರಸಿದ್ಧ ಬೈಂದೂರು ಬೀಚ್ ಸುಮುದ್ರ ಕಿನಾರೆಯನ್ನು ಏತ್ತರದಿಂದ ವಿಕ್ಷೀಸಿ ಸೌಂದರ್ಯ ಸವಿದು ರಮಣೀಯ ದೃಷ್ಯಗಳನ್ನು ಸೆರೆ ಹಿಡಿಯಬಹುದು. ಹೀಗೆ ಈ ಪರ್ವತದ ತುದಿಯಲ್ಲಿ ಬಂದು ಪವಿತ್ರ ಶಿಲುಬೆಯ ನೆರಳಿನಲ್ಲಿ ವಿಶ್ರಾಂತಿಗೊಂಡು ದೇವರ ದೈವಿಕ ಅನುಭವದಿಂದ ನಿಜವಾದ ತೃಪ್ತಿ ಸಿಗುವುದು ಖಂಡಿತ.

ಇಲ್ಲಿನ ದೇವಾಲಯದಲ್ಲಿ ವರ್ಷವೀಡಿ ಭಾನುವಾರ ಹಾಗೂ ಇತರ ದಿನಗಳಲ್ಲಿ ಪೂಜೆ, ಪ್ರಾರ್ಥನೆ, ಆರಾಧನೆಗಳು ನಡೆಯುತ್ತವೆ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಶೈಕ್ಷಣಿಕ ಹಾಗೂ ಸಾಮಾಜಿಕ ಬದಲಾವಣೆಗೊಂಡಿದೆ, ಚರ್ಚ್ ಆಡಳಿತದಲ್ಲಿ ಹತ್ತಿರದಲ್ಲೇ ಪವಿತ್ರ ಶಿಲುಬೆಯ ಹಿರಿಯ ಪ್ರಾರ್ಥಮಿಕ ಶಾಲೆಯಿದ್ದು ಶಾಲೆಗೆ ಶತಮಾನ ಪೊರೈಸಿದ ಇತಿಹಾಸವಿದ್ದು ಇಗರ್ಜಿ ಶಾಲೆ ಎಂದೇ ಕರೆಯುತ್ತಾರೆ.

ಬೈಂದೂರು ಸುತ್ತ-ಮುತ್ತಲಿನ ಎಲ್ಲಾ ಧರ್ಮದ ಹಲವಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದ ಹೆಗ್ಗಳಿಕೆ ಈ ಶಾಲೆಗೆ ಇದೆ. ಚರ್ಚಿನ ಹಿಂಬದಿಯಲ್ಲಿ ಹೋಲಿ ಕ್ರಾಸ್ ಧರ್ಮ ಭಗಿನೀಯರ ಕಾನ್ವೆಂಟ್ ಇದ್ದು ಇಲ್ಲಿನ ಧರ್ಮ ಭಗಿನಿಯರು ಬಡ ಮಕ್ಕಳಿಗೆ ಸಹಾಯವಾಗಿ ಶಿಕ್ಷಣ, ಊಟ ಮತ್ತು ವಸತಿಯನ್ನ್ಯು ನೀಡಿ ಸಾಮಾಜಿಕ ಸೇವೆಗೆ ತಮ್ಮ ಬಾಳನ್ನು ಮುಡುಪಾಗಿ ಚರ್ಚ್ ಹಾಗೂ ಕಾನ್ವೆಂಟ್ ನಲ್ಲಿ ತಮ್ಮ ನಿಸ್ವಾರ್ಥ ಸೇವೆ ನೀಡುತ್ತಾರೆ.

6-02-2013-15

ಚರ್ಚ್ ನಲ್ಲಿ ಧರ್ಮಗುರುಗಳೊಂದಿಗೆ ಚರ್ಚ್ ಆಡಳಿತ ಮಂಡಳಿ, 11 ವಾಳೆಗಳು, ಸಣ್ಣವರಿಗಾಗಿ, ಯುವಕರಿಗಾಗಿ, ದೊಡ್ಡವರಿಗಾಗಿ ಆಧ್ಯಾತ್ಮೀಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗಾಗಿ ಹಲವಾರು ಸಂಘ-ಸಂಸ್ಥೆಗಳಿದ್ದು ಹಬ್ಬದ ದಿನಗಳಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರಸ್ತುತ ಧರ್ಮಗುರುಗಳಾದ ರೆ| ಫಾ| ಪ್ರಾನ್ಸಿಸ್ ಕರ್ನೆಲಿಯೊರವರು ಕಳೆದ 7 ವರುಷದಿಂದ ದೇವಾಲಯದಲ್ಲಿ ನಿರಂತರವಾಗಿ ಜನರ ಸೇವೆಯಲ್ಲಿ ತೊಡಗಿ ಹಲವಾರು ಅಚ್ಚರಿಯ ಬದಲಾವಣೆಗಳಾಗಿವೆ. 360 ಕುಟುಂಬಗಳನ್ನು ಒಳಗೊಂಡ ವಿಶಾಲ ತೋಟವಾದ ಬೈಂದೂರು ಚರ್ಚಿನ ಕ್ರೈಸ್ತ ಬಾಂಧವರು ಇತರ ಥರ್ಮದಲ್ಲಿರುವ ಸ್ಥಳೀಯರ ನಡುವೆ ಉತ್ತಮ ಸಾಮರಸ್ಯವನ್ನು ಹೊಂದಿದ್ದಾರೆ.

ಕ್ರೈಸ್ತ ಸಮುದಾಯದಲ್ಲಿರುವ ಹಲವು ಮುಖಂಡರು ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕೂಡ ತಮ್ಮ ಕಾರ್ಯವ್ಯಾಪ್ತಿಯನ್ನು ಬಳಸಿಕೊಂಡು ಜನತೆಯ ಸೇವೆಯೆಲ್ಲಿದ್ದಾರೆ. ಹೆಚ್ಚಿನ ಕುಟುಂಬದಲ್ಲಿ ಸದಸ್ಯರು ಜೀವನ ಅಧಾರಕ್ಕಾಗಿ ಹೋರ ರಾಷ್ಟ್ರಗಳಲ್ಲಿ ದುಡಿದು ತಮ್ಮ ಕುಟುಂಬದ ಆರ್ಥಿಕ ಭದ್ರತೆಗೆ ಹಾಗೂ ದೇವಾಲಯದ ಹಲವು ಆರ್ಥಿಕ ಯೋಜನೆಗಳಿಗೂ ನೆರವೂ ನೀಡಿದ್ದಾರೆ. ಶೈಕ್ಷಣಿಕ ಆಧಾರವಾಗಿ ಚರ್ಚಿನಲ್ಲಿರುವ ಬಡ ಕುಟುಂಬದ ಮಕ್ಕಳ ಉನ್ನತ ಮಟ್ಟದ ಶಿಕ್ಷಣಕ್ಕೆ ಸಹಾಯ ವಾಗಿ ದೊಡ್ಡ ಮೊತ್ತದ ಶಿಕ್ಷಣ ನಿಧಿಯನ್ನು ಜನತೆ ಸ್ಥಾಪಿಸಿದ್ದಾರೆ. ಧಾರ್ಮಿಕ ಶಿಕ್ಷಣ ಹಾಗೂ ಶಾಲಾ ಶಿಕ್ಷಣದಲ್ಲಿ ಮಕ್ಕಳು ಉತ್ತಮ ಅಂಕವನ್ನು ಪಡೆದು ಕಲಿಕೆಯಲ್ಲಿ ಮಂಚೂಣಿಯ ಸ್ಥಾನದಲ್ಲಿ ಹಲವಾರು ವಿದ್ಯಾರ್ಥಿಗಳಿದ್ದು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕೂಡ ತೊಡಗಿ ಚರ್ಚಿನಲ್ಲಿರುವ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಹಾಗೂ ಯುವಕರು ಸಕ್ರೀಯವಾಗಿ ಕ್ರಿಯಾಶೀಲರಾಗಿದ್ದಾರೆ.

ಇತ್ತೀಚೆಗೆ ಬೈಂದೂರು ಚರ್ಚಿನ ಚರಿತ್ರೆ, ಪವಿತ್ರ ಶಿಲುಬೆಯ ಗುಡ್ಡದ ಮಹಿಮೆ ಹಾಗೂ ಚರ್ಚಿನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳ ವರದಿ ಹಾಗೂ ಜನರ ಸಾಹಿತ್ಯ ಅಭಿರುಚಿಗಳಿಗೆ ಪ್ರ‍್ರೋತ್ಸಾಹ ನೀಡಲು ಚರ್ಚಿನ ಹೊಸ ಅಂತರ್ಜಾಲವನ್ನು (www.byndoorchizalak.com) ಕೂಡ ಬೆಳಕಿಗೆ ತಂದು ದೇವಾಲಯದ ವಿಶಿಷ್ಟತೆಯನ್ನು ಇತರರಿಗೆ ನೀಡಿ ಬೈಂದೂರು ಚರ್ಚ್ ಹಾಗೂ ಪವಿತ್ರ ಶಿಲುಬೆಯ ಗುಡ್ಡದ ಮಹಿಮೆ ಮತ್ತು ಆಶೀರ್ವಾದ ಇತರರಿಗೆ ತಿಳಿಯಲು ಈ ಅಂತರ್ಜಾಲ ಸಹಕಾರಿಯಾಗಿದೆ.

ದೇವಾಲಯದ ವಿಶೇಷತೆಗಳು:
ಪ್ರತಿವರ್ಷ ಫೆಬ್ರವರಿಯಲ್ಲಿ ಅಂದರೆ ಪಾಪ ಪ್ರಾಯಶ್ಚಿತ ಕಾಲದ (Ash Wednesday) ಮುಂಚಿನ ವಾರದಲ್ಲಿ ಅಂದರೆ ಮಂಗಳವಾರ ಹಾಗೂ ಬುಧವಾರ ಚರ್ಚಿನ ವಾರ್ಷಿಕ ಮಹೋತ್ಸವ ಸಂಭ್ರಮ-ಸಡಗರದಿಂದ ನಡೆಯುತ್ತದೆ.

ಚರ್ಚಿನ ವಾರ್ಷಿಕ ಮಹೋತ್ಸವ ನಡೆದ ಅನಂತರ ಆದಿತ್ಯವಾರ ಸಂಜೆಯ ವೇಳೆ ಪುಣ್ಯ ಕ್ಷೇತ್ರವಾದ ಪವಿತ್ರ ಶಿಲುಬೆಯ ಗುಡ್ಡದ ಮೇಲೆ ದೇವರಿಗೆ ಕೃತಜ್ಞ್ನತೆ ಸಲ್ಲಿಸಲು ಚರ್ಚಿನ ಇಡಿ ಜನತೆಯೊಂದಿಗೆ ಸಂಭ್ರಮದ ದಿವ್ಯ ಬಲಿ ಪೂಜೆ ನಡೆಯುತ್ತದೆ.

ಶುಭ ಶುಕ್ರವಾರದ ಮುಂಚಿನ 40 ದಿನಗಳ ಕಾಲ ಪಾಪ ಪ್ರಾಯಶ್ಚಿತ ಕಾಲದಲ್ಲಿ ಪ್ರತಿ ಶುಕ್ರವಾರ ಸಂಜೆ ಧರ್ಮಗುರುಗಳೊಂದಿಗೆ ಚರ್ಚಿನ ಜನತೆ ಶಿಲುಬೆಯಾತ್ರೆ ಹಾಗೂ ಬಲಿ ಪೂಜೆಯಲ್ಲಿ ಭಾಗವಹಿಸುತ್ತಾರೆ, ಶುಭಶುಕ್ರವಾರದ ಹಿಂದಿನ ಭಾನುವಾರವು ಗರಿಗಳಹಬ್ಬವಾಗಿಯೂ ಅನಂತರ ಶುಭಶುಕ್ರವಾರದ ಪೂಜಾ ಕಲಾಪಗಳು ಯೇಸುವಿನ ಶಿಲುಬೆ ಯಾತ್ರೆಯ ನೈಜ ದೃಷ್ಯಗಳಾಗಿ ಅಂದರೆ ಯೇಸುವಿನ ನಿರ್ಜೀವ ದೇಹವನ್ನು ಹೊತ್ತ ತೊಟ್ಟಿಲು ಹಾಗೂ ಶೋಕ ಮಾತೆ ಮೇರಿಯ ಮೂರ್ತಿಯನ್ನು ಹೊತ್ತು ಜನರು ಚರ್ಚಿನ ಸುತ್ತ ಭಯ-ಭಕ್ತಿ, ಪ್ರಾರ್ಥನೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಾರೆ.

ಮಾತೆ ಮೇರಿಯ ಜನ್ಮದಿನ ಹಾಗೂ ಸಾಂಸ್ಕೃತಿಕ ಹಬ್ಬವಾದ ತೇನೆ ಹಬ್ಬ ಆಚರಣೆಯಾದ ಅನಂತರದ ಆದಿತ್ಯವಾರ ಶಿಲುಬೆಯಲ್ಲಿ ಪ್ರಾಣ ತ್ಯಾಗ ಮಾಡಿದ ಯೇಸುವಿನ ನೀರ್ಜಿವ ದೇಹವನ್ನು ಶಿಲುಬೆಯಿಂದ ಕಳಗಿಳಿಸಿ ಯೇಸುವಿನ ತಾಯಿ ಮೇರಿಯ ಕೈಯಲ್ಲಿ ನೀಡುವಾಗ ಆ ಮಹಾ ತಾಯಿಗಾದ ವೇದನೆಯನ್ನು ನೆನೆದು ಆ ಸಂಧರ್ಭವನ್ನು ಶೋಕಮಾತೆಯ ವೇದನೆಯನ್ನು, ದುಃಖವನ್ನು 7 ದಿನಗಳ ಕಾಲ ಧರ್ಮಗುರುಗಳಿಂದ ಉಪನ್ಯಾಸ ಭೋದನೆಗಳನ್ನು ಕೇಳಿ ಪಾಪ ಪಶ್ಚಾತಾಪಗೊಂಡು ಅನಂತರದ ಆದಿತ್ಯವಾರ ಶೋಕಾ ಮಾತೆಯ ಸಲುವಾಗಿ ಸಂಭ್ರಮದ ದಿವ್ಯ ಬಲಿ ಪೂಜೆ ನಡೆಯುವುದು ಇಲ್ಲಿನ ದೇವಾಲಯದ ವೈಶಿಷ್ಟ್ಯತೆಯಾಗಿದೆ.

ಮೇ ತಿಂಗಳಿನ ಮೊದಲ ಆದಿತ್ಯವಾರ ಸಂಜೆ ಪವಿತ್ರ ಶಿಲುಬೆಯ ಗುಡ್ಡದ ಮೇಲೆ ಕಟ್ಟಿಸಿದ ಸ್ಮಾರಕದ ನೆನಪಿಗಾಗಿ ಬಲಿ ಪೂಜೆ ನಡೆಯುತ್ತದೆ.
ಇದೇ ಬರುವ ಫೆಬ್ರವರಿ 5 ಮತ್ತು 6 ರಂದು ದೇವಾಲಯದ ವಾರ್ಷಿಕ ಮಹೋತ್ಸವವು ಜರುಗಲಿದ್ದು ಹಾಗೂ ಅನಂತರದ ಭಾನುವಾರದಂದು ಸಂಜೆಯ ವೇಳೆ ಪವಿತ್ರ ಶಿಲುಬೆಯ ಗುಡ್ಡದ ಮೇಲೆ ದಿವ್ಯ ಬಲಿ ಪೂಜೆ ನಡೆಯಲಿದೆ, ಹೀಗೆ ಹಲವಾರು ವಿಶಿಷ್ಟತೆಯಿಂದ ಕೂಡಿದ ಬೈಂದೂರಿನ ಪವಿತ್ರ ಶಿಲುಬೆಯ ದೇವಾಲಯದ ಮತ್ತು ಪವಿತ್ರ ಶಿಲುಬೆಯ ಮಹಿಮೆ ಸರ್ವರಿಗೂ ತಿಳಿದು, ಪುಣ್ಯ ಕ್ಶೇತ್ರ ಸಂಪೂರ್ಣ ಪುಣ್ಯ ಕ್ಶೇತ್ರವಾಗಿ ಮಾರ್ಪಡಲಿ ಅಂತ ಹಾರೈಸುತ್ತೇವೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)