ಪ್ರವಾಸಿಗರ ಮನ ಸೆಳೆಯುವ ಹುಯಿಲ್ ಮುಡಿ ಬೀಚ್

0
528

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

7-02-2013-29

ಬೈಂದೂರು : ಪ್ರಕೃತಿಯ ವೈವಿಧ್ಯವೇ ಹಾಗೇ ಕಲಾಕಾರನ ಕಲ್ಪನೆಗೂ ನಿಲುಕದ ಸೌಂದರ್ಯ ನೋಡುತ್ತಲೇ ಪ್ರವಾಸಿಗರನ್ನು ದಿಗ್ಬ್ರಮೆಗೊಳಿಸುವ ಸುಂದರ ತಾಣಗಳು ಬೆಳಕಿಗೆ ಬಾರದೇ ಗೌವ್ಯಪವಾಗಿರುವುದು ನಮ್ಮ ಪ್ರವಾಸೋದ್ಯಮ ಅಭಿವೃದ್ಧಿಯ ಪ್ರಗತಿಯ ವೈಖರಿಯನ್ನು ಬಿಂಬಿಸುತ್ತದೆ.

7-02-2013-30

7-02-2013-32

7-02-2013-34

7-02-2013-35

ಕುಂದಾಪುರ ತಾಲೂಕಿನ ಶಿರೋಭಾಗದ ಶಿರೂರಿನಿಂದ ಎರಡುವರೆ ಕಿಲೋ ಮೀಟರ್ ಸಾಗಿದಾಗ ಸಿಗುವುದು ಸರ್ಪನಕಟ್ಟೆ ಎಂಬ ಪುಟ್ಟ ಊರು ಇಲ್ಲಿಂದ ಪಶ್ಚಿಮಕ್ಕೆ ಮೂರು ಕಿಲೋ ಮೀಟರ್ ಸಾಗಿದಾಗ ಎತ್ತರದ ಗುಡ್ಡ ನಮ್ಮನ್ನು ಎದುರಾಗುತ್ತದೆ. ಗುಡ್ಡ ಎರುತ್ತಲೇ ಅಘಾದ ಜಲಧಾರೆ, ಕಡಲಿನ ಸೌಂದರ್ಯ, ಗುಡ್ಡಗಳ ಸಾಲು, ನೈಜ ಸೌಂದರ್ಯ ನೋಡುವಾಗ ನಮ್ಮನ್ನೇ ನಂಬಲಾಗದಂತಹ ಪರಿಸ್ಥಿತಿಯ ಭಾವನೆ ಮೂಡುತ್ತದೆ. ಆಶ್ಚರ್ಯವೆಂದರೆ ಇಂತಹ ಸುಂದರವಾದ ಹುಯಿಲ್ ಮುಡಿ ಬೀಚ್ ನ ಬಗ್ಗೆ ಪ್ರವಾಸಿಗರಿಗೆ ಮಾಹಿತಿಯೇ ಇಲ್ಲ.

7-02-2013-36

7-02-2013-37

7-02-2013-38

ಬೈಂದೂರು ಡಾಟ್ ಕಾಮ್ ಜಾಗತಿಕ ಮಟ್ಟದಲ್ಲಿ ಬೈಂದೂರು ಪರಿಸರದ ಪ್ರವಾಸಿ ಸ್ಥಳಗಳನ್ನು ಪರಿಚಯಿಸುವ ಉದ್ದೇಶದಿಂದ ಬೀಚ್ ನ ನೈಜತೆಯನ್ನು ನಿಮ್ಮ ಮುಂದಿಟ್ಟಿದೆ. ಶಿರೂರು, ಬೈಂದೂರು, ಭಟ್ಕಳದಲ್ಲಿ ಅಷ್ಟೇನು ಪ್ರಸಿದ್ಧಿ ಕಾಣದಿದ್ದರು ಸಹ ಬೆಂಗಳೂರಿನ ಉದ್ಯಮಿಯೋರ್ವರು ಈ ಪ್ರದೇಶದಲ್ಲಿರುವ ಖಾಸಗಿ ಸ್ಥಳಗಳನ್ನು ಕ್ರಯ ಮಾಡಿಕೊಂಡಿದ್ದಾರೆ. ರೇಸಾರ್ಟ್ ಮಾಡುವ ಉದ್ದೇಶದಿಂದ ಈ ಭಾಗದ ಖಾಸಗಿ ಸ್ಥಳಗಳು ಮಾರಾಟ ಪ್ರಕ್ರಿಯೆ ನಡೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು.

7-02-2013-39

7-02-2013-40

7-02-2013-41

7-02-2013-42

ಒಂದೆಡೆ ಕಡಲು ಇನ್ನೊಂದೆಡೆ ಗುಡ್ಡಗಳ ಸಾಲು ಎಂತವರನ್ನು ಮಂತ್ರ ಮುಗ್ದಗೊಳಿಸುತ್ತದೆ. ಬಹುತೇಕವಾಗಿ ಬೈಂದೂರಿಗೆ ಬರುವ ಹೆಚ್ಚಿನ ಪ್ರವಾಸಿಗರು ಮುರುಡೇಶ್ವರ, ಗೋಕರ್ಣಗಳಿಗೆ ತೆರಳುತ್ತಾರೆ. ಆದರೆ ಬೈಂದೂರು ಸುತ್ತಮುತ್ತಲ ಪ್ರದೇಶದಲ್ಲಿ ಇಂತಹ ನಯನ ಮನೋಹರ್ ಪ್ರದೇಶಗಳಿದ್ದರು ಸಹ ಮಾಹಿತಿ ಕೊರತೆಯಿಂದ ಬೇಟಿ ನೀಡುವ ಮನಸ್ಸು ಮಾಡುತ್ತಿಲ್ಲ. ಇದರಿಂದಾಗಿ ಬೈಂದೂರಿಗೆ ಬರುವ ಆದಾಯವು ತಪ್ಪುತ್ತದೆ. ಹೀಗಾಗಿ ಜನಪ್ರತಿನಿಧಿಗಳು ಇಲಾಖಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಮನಸ್ಸು ಮಾಡಬೇಕಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)