ಬೈಂದೂರು ತಾಲೂಕು ಘೋಷಣೆ : ಮುಗಿಲು ಮುಟ್ಟಿದ ಸಂಭ್ರಮ

0
788

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

31-07-2013-21

ಬೈಂದೂರು : 2013ನೇ ಸಾಲಿನ ಕರ್ನಾಟಕ ಸರಕಾರದ ಬಜೆಟ್ ನಲ್ಲಿ ಬೈಂದೂರು ತಾಲೂಕು ರಚನೆ ಘೋಷಣೆ ಮಾಡುವುದರ ಮೂಲಕ ಕಳೆದ 30 ವರ್ಷದ ಹೋರಾಟಕ್ಕೆ ಜಯದೊರೆತಂತಾಗಿದೆ. 1980ರಿಂದ ತಾಲೂಕು ರಚನೆಗೆ ಹೋರಾಟ ಮಾಡುತ್ತಿದ್ದು ತಾಲೂಕು ರಚನೆ ಮತ್ತು ಅಭಿವೃದ್ಧಿ ಸಮಿತಿ ಮೂಲಕ ಸಾರ್ವಜನಿಕರ ಸಹಕಾರದೊಂದಿಗೆ ತಾಲೂಕು ರಚನೆ ಬಗ್ಗೆ ಹತ್ತಾರು ಬಾರಿ ಮನವಿ ಸಲ್ಲಿಸಲಾಯಿತು. ಇತ್ತೀಚೆಗೆ ಬೈಂದೂರಿಗೆ ಬೇಟಿ ನೀಡಿದ ಸಂದರ್ಭದಲ್ಲಿ ವಿವಿಧ ಮಂತ್ರಿಗಳಿಗೆ ಪ್ರತ್ಯೇಕವಾಗಿ ಸಲ್ಲಿಸಿತ್ತು. ವಿವಿಧ ಆಯೋಗಗಳು ಕೂಡಾ ಬೈಂದೂರು ತಾಲೂಕು ರಚನೆ ಬಗ್ಗೆ ವರದಿ ನೀಡಿದ್ದವು.

by taluku ra 2

by taluku ra 3

ಆದರೂ ಕೂಡಾ ಸರಕಾರದ ವಿವಿಧ ಅಂಕಿಯಾಂಶ ಹಾಗೂ ತಾಂತ್ರಿಕ ಕೊರತೆಯಿಂದಾಗಿ ನೆನೆಗುದಿಗೆ ಸರಿದಿತ್ತು. ಈ ಎಲ್ಲಾ ವಿದ್ಯಮಾನದ ಬಳಿಕ ಸ್ಥಳೀಯ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಡುವ ಜೊತೆಗೆ ತಾಲೂಕು ರಚನೆಯ ಘೋಷಣೆ ಹೊರಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೈಂದೂರಿನಲ್ಲಿ ಸಂಭ್ರಮ ಆಚರಣೆ

by taluku ra 4

by taluku ra 6

ತಾಲೂಕು ರಚನೆ ಘೋಷಣೆಯಾಗುತ್ತಿದ್ದಂತೆ ಬೈಂದೂರು ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಲಾಯಿತು.

1) ಸಚಿವ ಕೋಟ ಶ್ರೀನಿವಾಸ ಪೂಜಾರಿ :

27-12-12-3

ಬೈಂದೂರು ತಾಲೂಕು ರಚನೆ ಬಗ್ಗೆ ಕಳೆದ ಹಲವು ವರ್ಷಗಳಿಂದ ಬೇಡಿಕೆಯಿದ್ದು ಸ್ಥಳೀಯ ಶಾಸಕರ ಸಹಕಾರದಿಂದ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ತಾಲೂಕು ರಚನೆಯ ಅಧೀಕೃತ ಘೋಷಣೆಯಲ್ಲಿ ಯಶಸ್ವಿ ಕಂಡಿದೆ. ಇದು ಬೈಂದೂರು ಸಮಸ್ತ ಜನತೆಯ ಹೋರಾಟಕ್ಕೆ ಸಂದ ಗೌರವ.

2) ಆಶ್ವಾಸನೆ ಈಡೇರಿದೆ : ಶಾಸಕ ಕೆ. ಲಕ್ಷ್ಮೀನಾರಾಯಣ :

9-02-2013-7

ಚುನಾವಣಾ ಸಂದರ್ಭದಲ್ಲಿ ಬೈಂದೂರು ತಾಲೂಕು ರಚನೆ ಮಾಡುವುದಾಗಿ ಭರವಸೆ ನೀಡಿದ್ದು ರಾಜ್ಯ ಸರಕಾರ ಅಧೀಕೃತ ಘೋಷಣೆ ಮಾಡುವುದರ ಮೂಲಕ ಭರವಸೆ ಈಡೇರಿದಂತಾಗಿದೆ.

3 ) ತಾಲೂಕು ರಚನೆಗೆ ಸ್ವಾಗತ : ಗೋಪಾಲ ಪೂಜಾರಿ :

holi-k.-19

ಬೈಂದೂರು ತಾಲೂಕು ರಚನೆಗೆ ಕಳೆದ ಹತ್ತಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು ಈಗಾಗಲೇ ಎಲ್ಲ ಸೌಲತ್ತುಗಳನ್ನು ಹೊಂದಿದೆ. ಈ ಹಂತದಲ್ಲಿ ತಾಲೂಕು ರಚನೆ ಆಗಿದ್ದು ಸ್ವಾಗತಾರ್ಹ.

4 ) ಹೋರಾಟಕ್ಕೆ ಸಂದ ಜಯ : ಜಗನ್ನಾಥ ಶೆಟ್ಟಿ :

1-09-2014-11

ಬೈಂದೂರು ತಾಲೂಕು ರಚನೆ ಹೋರಾಟಕ್ಕೆ 50 ವರ್ಷಗಳ ಹಿನ್ನಲೆ ಇದೆ. ಈ ಹೋರಾಟಕ್ಕೆ ಸಂದ ಜಯವಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)