ಬೈಂದೂರು : ತಾಲೂಕು ಹೋರಾಟದ ಹೆಜ್ಜೆಯ ಮೆಲುಕುಗಳು…..

0
821

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

31-07-2013-21

ಬೈಂದೂರು : ಕೊನೆಗೂ ಬೈಂದೂರು ತಾಲೂಕು ರಚನೆಯಾಗಿ ಘೋಷಣೆಯಾಗಿದೆ. ಈ ಮೂಲಕ ಕಳೆದ ಮೊವತ್ತು ವರ್ಷಗಳ ಹೋರಾಟಕ್ಕೊಂದು ಸಾರ್ಥಕತೆ ದೊರೆತಂತಾಗಿದೆ. ಹೋರಾಟ ಬೈಂದೂರಿಗೆ ಹೊಸತೇನಲ್ಲ. ಬೈಂದೂರಿನ ಒತ್ತಿನೆಣೆಯಲ್ಲಿ ಉಡ್ಡಯನ ಕೇಂದ್ರ ಸ್ಥಾಪಿಸಬೇಕೆನ್ನುವ ಸರಕಾರದ ಇರಾದೆಯ ವಿರುದ್ಧ ಹೋರಾಟ ನಡೆಸಿದ ಅಂದಿನ ಜನತೆ ತನ್ಮೂಲಕ ಉಡ್ಡಯನ ಕೇಂದ್ರವನ್ನು ಬೇರೆ ಕಡೆಗೆ ವರ್ಗಾಯಿಸಿದೆ. ಒಂದು ಹಂತದಲ್ಲಿ ಉಡ್ಡಯನ ಕೇಂದ್ರ ಸ್ಥಾಪನೆಗೊಂಡಿದ್ದರೆ ಬೈಂದೂರಿನ ಅಭಿವೃದ್ಧಿ ಗಗನ ಕುಸುಮವಾಗುತ್ತಿತ್ತು.

ದೂರದೃಷ್ಟಿತ್ವದ ಹೋರಾಟಕ್ಕೆ ಮುನ್ನುಡಿ ಬರೆದ ಬಿ. ಜಿ. ಮೋಹನ್ ದಾಸ್ :

OLYMPUS DIGITAL CAMERA

ಬಹುತೇಕವಾಗಿ ಈ ಹೆಸರು ಇಂದಿನ ಯುವಪೀಳಿಗೆಯವರಿಗೆ ಅಷ್ಟೇನು ತಿಳಿದಿರಲಿಕ್ಕಿಲ್ಲ. ಆದರೆ ಬೈಂದೂರು ವ್ಯಾಪ್ತಿಯ ಹಿರಿಯರಿಗೆ ಬಿ. ಜಿ. ಎಂದೇ ಪ್ರಸಿದ್ಧಿ ಹೊಂದಿರುವ ಇವರ ದೂರದೃಷ್ಟಿತ್ವದ ಫಲವೇ ಬೈಂದೂರು ತಾಲೂಕು ಘೋಷಣೆ. 1981- 82ರಲ್ಲಿ ಕಾಲೇಜು ದಿನದಲ್ಲೇ ಹೋರಾಟಕ್ಕೆ ಮುಂದಿಡಿಯಿಟ್ಟವರು. ಬೈಂದೂರಿನ ಅಭಿವೃದ್ಧಿಯ ಬಗ್ಗೆ ನಿರಂತರ ತುಡಿತ ಹೊಂದಿದ್ದು ಅಪ್ಪಣ್ಣ ಹೆಗ್ಡೆ, ಜಿ. ಆರ್. ಆಚಾರ್ಯ ರಂತಹ ಹಿರಿಯರ ಸಮಾನಾಂತರದಲ್ಲಿ ತಾಲೂಕು ಪ್ರಕ್ರಿಯೆಗೆ ಹೊಸ ಭಾಷ್ಯೆ ಬರೆದ ಹಿರಿಮೆಯಿದೆ. ಮಣಿಪಾಲ್ ನಿಂದ ಬಂದು ಬೈಂದೂರು ತಾಲೂಕು ಆಗಲೇ ಬೇಕು ಎಂಬ ಧ್ಯೇಯಮಂತ್ರ ದಿಂದ ಪ್ರೇರಿತಗೊಂಡು ಬೈಂದೂರಿನ ಪ್ರಪ್ರಥಮ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನ ಸಭೆ ಶಾಸಕ ಚುನಾವಣೆಗೆ ನಿಂತದ್ದು ಅಗಿನ ಯುವಪೀಳಿಗೆಗೆ ಒಂದು ಹೊಸ ಚೇತನ ನೀಡಿತ್ತು. ಈಗ ಗಲ್ಫ್ ರಾಷ್ಟ್ರದಲ್ಲಿ ಅತ್ಯಂತ ಅಚ್ಚುಮೆಚ್ಚಿನ ಗೌರವಯುತ ವ್ಯಕ್ತಿಯಾಗಿ ಗಲ್ಫ್ ಕನ್ನಡಿಗದ ಜೊತೆ ಜಾಗತಿಕ ಕನ್ನಡಿಗರನ್ನು ಒಗ್ಗೂಡಿಸಿದ ಪ್ರವರ್ತಕರು ಬೈಂದೂರು ಡಾಟ್ ಕಾಮ್ ನ ಸಂಸ್ಥಾಪಕರಾಗಿ ತಾಲೂಕು ಹೋರಾಟ ಮತ್ತು ಅಭಿವೃದ್ಧಿಯ ಬಗ್ಗೆ ಅಭಿಯಾನ ಕೈಗೊಂಡಿರುವ ಇಂತಹ ಹಿರಿಯರ ಜೊತೆಗೆ ಸುಬ್ರಾಯ ಶೇರುಗಾರ್ ಪ್ರಸ್ತುತ ತಾಲೂಕು ರಚನೆ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಿರಂತರ ಹೋರಾಟಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

NH 1

ಕೇಂದ್ರ ಮಟ್ಟದಲ್ಲಿ ಹೋರಾಟ ನಡೆಸಿ ರೈಲ್ವೆ ನಿಲ್ದಾಣದ ಯಶಸ್ಸು ಪಡೆದ ಮೂಕಾಂಬಿಕಾ ಯಾತ್ರಿ ಸಂಘ, ತಾಲೂಕು ಹೋರಾಟದ ಮೂಲಕ ಯಶಸ್ಸು ಕಂಡ ಹೋರಾಟ ಸಮಿತಿ ಬೈಂದೂರು ಜನತೆ ಸಾಂಘಿಕ ಮನೋಭಾವನೆಯನ್ನು ಬಿಂಬಿಸುತ್ತದೆ. ಕೆ. ಗೋಪಾಲ ಪೂಜಾರಿಯವರ ಅವಧಿಯ ದೂರದೃಷ್ಟಿತ್ವದ ಅಭಿವೃದ್ಧಿ ಕಾಮಗಾರಿ ಹಾಲಿ ಶಾಸಕ ಕೆ. ಲಕ್ಷ್ಮೀನಾರಾಯಣರ ಅವಿರತ ಪ್ರಯತ್ನ, ಸಂಸದ ಬಿ. ಎನ್. ರಾಘವೇಂದ್ರ, ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಸಹಕಾರ ಬೈಂದೂರು ತಾಲೂಕು ರಚನೆಯ ಹೆಗ್ಗುರುತುಗಳಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ನೀವು ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಬೈಂದೂರಿನ ಅಭಿವೃದ್ಧಿಗೆ ಸಹಕಾರ ನೀಡಿ.

ಪ್ರಸ್ತುತ ಕುಂದಾಪುರ ತಾಲೂಕಿನಲ್ಲಿ 101 ಗ್ರಾಮಗಳು, 51 ಗ್ರಾಮ ಪಂಚಾಯತ್, ಒಂದು ಪುರಸಭೆ 381048 ಎಕರೆ ಭೂ ವಿಸ್ತೀರ್ಣ ಹೊಂದಿದ್ದು 37742 ಜನಸಂಖ್ಯೆಯಿದೆ.

ಸರಕಾರ ತಾಲೂಕು ರಚನೆ ವರದಿಗಾಗಿ ನೇಮಿಸಿದ ಹುಂಡೇಕರ್ ಸಮಿತಿ, ಗದ್ದಿಗೌಡರ ಸಮಿತಿ, ವಾಸುದೇವರಾವ್ ಆಯೋಗಗಳು, ಕುಂದಾಪುರ ತಾಲೂಕಿನ ಉತ್ತರ ಮತ್ತು ದಕ್ಷಿಣ ಭಾಗಗಳೆಂದು ವಿಭಜಿಸಿ ಬೈಂದೂರು ಕೇಂದ್ರಿಕೃತ ತಾಲೂಕು ರಚನೆಗೆ ಶಿಫಾರಸ್ಸು ನೀಡಿತ್ತು. ಈ ಪ್ರಕಾರ ಬೈಂದೂರು ಹೋಬಳಿಯ 26 ಗ್ರಾಮ ಮತ್ತು ವಂದ್ಸೆ ಹೋಬಳಿಯ 30 ಗ್ರಾಮಗಳನ್ನೊಳಗೊಂಡು 233329 ಎಕರೆ ವ್ಯಾಪ್ತಿ ಒಳಪಟ್ಟಿದೆ. ಈ ಬಗ್ಗೆ ಕಳೆದ ಹತ್ತಾರು ವರ್ಷಗಳಿಂದ ಜನಪ್ರತಿನಿಧಿಗಳು ಭರವಸೆ ನೀಡುತ್ತಿದ್ದು ಪ್ರಸಕ್ತ ವರ್ಷ ಘೋಷಣೆಯಾಗುವುದರ ಮೂಲಕ ಶಾಸಕರ ಭರವಸೆ ಈಡೇರಿದಂತಾಗಿದೆ.

NH 2

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)