ಭಾವಿ ಜನಪ್ರತಿನಿಧಿಯವರೆ! ನಮಗೆ ಬೇಕಾಗಿರುವುದು….

0
994

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಭಾವಿ ಜನಪ್ರತಿನಿಧಿಯವರೆ! ನಮಗೆ ಬೇಕಾಗಿರುವುದು….
ರಾಜ್ಯ ರಾಜಕೀಯದಲ್ಲಿ ಹಲವಾರು ಬೇಕಾದ/ಬೇಡವಾದ ಬೆಳವಳಿಗೆಗಳು ಬೆಳೆದು ರಾಜಕೀಯ ನಾಯಕರ ಹಿತಕರವಲ್ಲದ ರಾಜಕೀಯ ನಾಟಕಕ್ಕೆ ಜನರು ಬೇಸತ್ತಿರುವಾಗ,ಮರ‍ಳಿ ರಾಜ್ಯದ ಜನತೆಗೆ ಮತ್ತೊಮ್ಮೆ ಚುನಾವಣೆ ಎದುರಿಸಿ ಉತ್ತಮ ಜನನಾಯಕನನ್ನು ಆರಿಸುವ ಅವಕಾಶವೋ ಆಥಾವ ಯಾಕಪ್ಪ ಇವರಿಗೆ ಮತ ಹಾಕಬೇಕು ಎನ್ನುವ ಜಿಜ್ಞಾಸೆ ಕೂಡ ಬಂದಿರಬಹುದು!

ವಿಧಾನಸಭೆ ಚುನಾವಣೆಗೆ ಘೋಷಣೆ ಆಗಿ, ಆಯಾಯ ಪಕ್ಷಗಳಲ್ಲಿ ಆರಿಸಿ ಬಂದ ಅಭ್ಯರ್ಥಿಗಳು ಚುನಾವಣ ಕಣಕ್ಕೆ ನಿಂತಿದ್ದು ಆಯಿತು, ಮುಂದೆನಾಗುತ್ತದೇಯೋ ಎಂಬಅರಿವು ಕೂಡ ಇಲ್ಲದ ಹೊಸ ಭರವಸೆಗಳ ಪಟ್ಟಿ ಪಕ್ಷದ ಪ್ರಚಾರ ಕೂಡ ಭರದಿಂದ ಸಾಗುತ್ತಿದೆ. ಇನ್ನೇನೋ ಮೇ 5 ಕ್ಕೆ ಚುನಾವಣೆ ನಡೆದು ಒಂದೆರಡು ದಿನಗಳಲ್ಲಿ ಮತಏಣಿಕೆಗಳಿಂದ ವಿಧಾನಸಭೆಯ ಕ್ಷೇತ್ರಕ್ಕೆ ಜನಪ್ರತಿನಿಧಿಯ ಆಯ್ಕೆ ಕೂಡ ಆಗಿ ಜನಪ್ರತಿನಿಧಿಯ ಮತ್ತು ಪಕ್ಷದ ವಿಜಯೋತ್ಸವ ಆಚರಣೆ ಹಾಗೂ ಅಲ್ಲಲ್ಲಿ ಅಭಿನಂದನಾಸಮಾರಂಭಗಳು ಕೂಡ ನಡೆಯಲಿವೆ….ಮುಂದೆ?

ಮುಂದೆ… ಬೈಂದೂರಿನ ಜನತೆ ಬಯಸುವುದೇನು?

ಬೆಳೆಯುತ್ತಿರುವ ಬೈಂದೂರು…, ನಿಜಕ್ಕೂ ಬೈಂದೂರು ಅಭಿವೃದ್ಧಿಗೊಂಡಿದೆಯೋ? ಅಭಿವೃದ್ಧಿ ಆಗ್ತಾ ಇದೇಯೋ? ಎನೂ ಪ್ರಗತಿ ಇಲ್ಲ, ಇನ್ನು ಅಭಿವೃದ್ಧಿ ಹೊಂದಬೇಕಾಗಿದೆ?ಈ ಪ್ರಶ್ನೆಗೆ ಉತ್ತರ ಬೈಂದೂರಿನ ಜನತೆಗೆ ಕೇಳಿದರೆ ಕೊಂಚ ಗಲಿಬಿಲಿಗೊಂಡು ಸ್ವಷ್ಟ ಉತ್ತರ ಸಿಗದೇ ಇರಬಹುದು. ಇಷ್ಟರವರೆಗೆ ಚುನಾಯಿಸಿ ಬಂದ ಜನಪ್ರತಿನಿಧಿಗಳುಚುನಾವಣೆಗೆ ಮುನ್ನ ಪಣತೊಟ್ಟು ಹಾಗೆ-ಹೀಗೆ ಮಾಡ್ತೇವೆ ಅಂತ ಹೇಳಿದ ಭರವಸೆಗಳು ಸಫಲಗೊಳ್ಳುವಲ್ಲಿ ಯಶಸ್ವಿ ಪಡೆದಿದ್ದೇವೆ ಅಂತ ಜನಪ್ರತಿನಿಧಿಗಳ ಅನಿಸಿಕೆಇರಬಹುದು. 80-90ರ ದಶಕದ ಜನಪ್ರತಿನಿಧಿಗಳನ್ನು ಹೋಲಿಸುವಾಗ ಇತ್ತೀಚೇಗೆ ಅರಿಸಿ ಬಂದ ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಬಲು ಬೇಗನೆ ಹತ್ತಿರದಿಂದಸ್ಪಂದಿಸಲು ಸ್ವಲ್ಪ ಆಸಕ್ತಿ ತೋರಿಸಿ, ಕೆಲವೊಂದು ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವೊಂದು ಸಮಸ್ಯೆಗಳು ಪರಿಹಾರ ದೊರಕಿಸುವಲ್ಲಿಜನಪ್ರತಿನಿಧಿಗಳು ಉತ್ತಮ ಶ್ರಮಿಸಿದ್ದಾರೆ. ಆದರೆ, ಬೈಂದೂರು ಕ್ಷೇತ್ರದ ಅಭಿವೃದ್ಧಿ ಮಾತ್ರ ತುಂಬಾ ಹಿಂದುಳಿದಿದೆ, ಕೆಲೊವೊಂದು ಸಮಸ್ಯೆಗಳನ್ನು ನೋಡುವುದಾದರೆ ಆಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉಪಾಯ ಕೂಡ ಜನಪ್ರತಿನಿಧಿ ಆಥಾವ ಜನತೆಗೂ ಕೂಡ ಕ್ಲಿಷ್ಟಕರವಾಗಿ ಮಾರ್ಪಟ್ಟಿವೆ. ಇದಕ್ಕೆ ಉತ್ತಮ ಉದಾಹರಣೆಬೈಂದೂರಿನ ಬಸ್ ನಿಲ್ದಾಣ, ಬೈಂದೂರಿನ ಡಿಗ್ರಿ ಕಾಲೇಜು ಜನರ ಹಾಗೂ ವಿದ್ಯಾರ್ಥಿಗಳ ಅನೂಕೂಲಕ್ಕೆ ತಕ್ಕಂತೆ ಇರದೆ ಎಲ್ಲೇಲ್ಲೊ ಇವೆ, ಅಗತ್ಯ ಸೌಲಭ್ಯಗಳುಇರಬೇಕಾದ ಜಾಗಗಳಲ್ಲಿ ದೂರವಾಣಿ, ವಿದ್ಯುತ್ ಸಂಪರ್ಕ ಇಲಾಖೆಗಳ ಕಟ್ಟಡಗಳಿಗೆ ಸರಕಾರ ಸೌಕರ್ಯ ಒದಗಿಸಿವೆ. ಕೆಲವೊಂದು ರಚನೆಗಳು ಸಮರ್ಪಕ ಸಂಪರ್ಕ-ಸಾನಿಧ್ಯ ವ್ಯವಸ್ಥೆಗಳಿಗೆ ಚಿಂತಿಸದೆ ಏನೂ ಪ್ರಯೋಜನವಾಗದೆ ನಿರುಪಯುಕ್ತವಾಗಿ ಹೆಚ್ಚಿನ ಸಮಸ್ಯೆ ಹುಟ್ಟಿಸಿವೆ.

ಕುಡಿಯುವ ನೀರಿನ ಸಮಸ್ಯೆ: ಸಮುದ್ರ ಮತ್ತು ಉಪ್ಪು ನೀರಿನ ಹೊಳೆ ಭಾಗದ ದಡದಲ್ಲಿರುವ ಕೆಲೊವೊಂದು ಪ್ರದೇಶಗಳಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಹಲವುದಶಕಗಳಿಂದ ಹಾಗೇಯೇ ಇದೆ. ಬೇಸಿಗೆಯಲ್ಲಿ ಆ ಪ್ರದೇಶದ ಜನರು ನೀರಿಗಾಗಿ ಪರದಾಡುವ ದೃಶ್ಯ ಶೋಚನೀಯ, ಜನಪ್ರತಿನಿಧಿಗಳೇ ಮೊದಲು ಕುಡಿಯುವ ನೀರಿನಸಮಸ್ಯೆಗೆ ಸ್ಪಂದಿಸಿ.

ಡಿಗ್ರಿ ಕಾಲೇಜು: ಬೈಂದೂರಿನ ಶಿಕ್ಷಣ ಕ್ಶೇತ್ರಕ್ಕೆ ವಿದ್ಯಾರ್ಥಿಗಳಿಗೆ ಒಲಿದು ಬಂದ ಅದೃಷ್ಟವೋ ಆಥಾವ ದುರಾದೃಷ್ಟವೋ ಯಾರೋ ಮಾಡಿದ ತಪ್ಪಿಗೆ ಗ್ರಾಮೀಣ ಭಾಗದಅಭಿವೃದ್ಧಿ ಆಂತ ಯಾವಗಲೂ ಉಪಾನ್ಯಾಸಕರ ಕೊರತೆಯಿಂದ ಕೂಡಿರುವ ಸಾರಿಗೆ ವ್ಯವಸ್ಥೆ ಇಲ್ಲದ ಸ್ಥಳವಾದ ಈ ಕಾಲೇಜಿಗೆ ಮೈಲಿಗಟ್ಟಲೆ ನಡೆದು ಹೋಗುವ ಪರಿಸ್ಥಿತಿ,ಪ್ರಾಥಮಿಕ ಆಥಾವ ಹೈಸ್ಕೂಲ್ ಮಕ್ಕಳಿಗಿಂತ ಇವರ ಕಥೆ ಕಡೆಯಾಗಿದೆ. ಹೀಗಿರುವಾಗ ಡಿಗ್ರಿ ಪಡೆಯಲು ನಮ್ಮ ವಿದ್ಯಾರ್ಥಿಗಳು ದೂರದ ಶಿಕ್ಷಣ ಸಂಸ್ಥೆಗಳಿಗೆ ಪ್ರಯಾಣದಖರ್ಚು ಮಾಡಿ ಮೊರೆ ಹೋಗಲೇಬೇಕಾದ ಅನಿವಾರ್ಯ.

ಬೈಂದೂರಿನ ಬಸ್ ನಿಲ್ದಾಣ ಮಾರ್ಕೆಟ್, ಅಂಗಡಿ, ಹೋಟೆಲ್, ಆಸ್ಪತ್ರೆ, ಸಾರ್ವಜನಿಕ ಇಲಾಖೆಗಳೂ ಯಾವುದೂ ಬೈಂದೂರು ಬಸ್ ನಿಲ್ದಾಣಕ್ಕೆ ಹತ್ತಿರವಿರದ ಜಾಗವನ್ನುಯಾವ ಅರಿವಿಗ ಶಿಫಾರಸು ಮಾಡಿಸಿದರೋ, ಸಮಸ್ಯೆ ಪರಿಹಾರ ಮಾಡಲು ಅಸಾಧ್ಯವಾದ ಸಮಸ್ಯೆಯಾಗಿ ಪರಿಣಮಿಸಿದೆ.

ತಾಲೂಕು ರಚನೆ: ಇತ್ತೀಚೆಗಷ್ಟೆ ಬೈಂದೂರು ತಾಲೂಕು ಅಂತ ಘೊಷಣೆಯಾಗಿದೆ, ತಾಲೂಕಾಗಿ ಮಾರ್ಪಡಿಸಲು ಬೇಕಾಗುವ ಔಪಾಚಾರಿಕ ವಿಧಿ-ವಿಧಾನಗಳು ಇನ್ನುಆಗಬೇಕಷ್ಟೆ. ಈ ನಿಟ್ಟಿನಲ್ಲಿ ಈ ಸಲದ ವಿಧಾನ ಸಭೆ ಸದಸ್ಯ ಚುನಾವಣೆಯಲ್ಲಿ ಆರಿಸಿ ಬಂದ ಜನಪ್ರತಿನಿಧಿಗೆ ಸಾಕಷ್ಟು ಕ್ಷೇತ್ರಕಾರ್ಯ ನಿಭಾಯಿಸಲಿಕ್ಕಿದೆ. ಕೆಲವೊಂದುನಿರ್ಧಾರಗಳು ಸಾರ್ವಜನಿಕವಾಗಿ ಚರ್ಚಿಸಿ ಕೈಗೊಳ್ಳುವುದು ಸೂಕ್ತವಾಗಿದೆ. ತಾಲೂಕು ಕಚೇರಿಗಳು ಡಿಗ್ರಿ ಕಾಲೇಜಿನಂತೆ ಆಥಾವಾ ಬಸ್ ನಿಲ್ದಾಣಗಳಂತೆ ಎಲ್ಲೇಲ್ಲೊನಿರ್ಮಾಣವಾಗದೆ ಜನ ಸಾಮಾನ್ಯರಿಗೆ ಉತ್ತಮ ಸಂಪರ್ಕ ಕಲ್ಪಿಸುವಂತಹ ಪ್ರದೇಶದಲ್ಲಿ ಹೊಂದಿರುವುದು ಅವಶ್ಯಕವಾಗಿದೆ. ಪ್ರವಾಸದ್ಯೋಮ ಪುಟದಲ್ಲಿ ಬೈಂದೂರುಬೀಚ್ ಸಿರಿವಂತಿಕೆ ಸೇರಿದೆ, ಆದರೆ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನದಲ್ಲಿ ವಿಫಲತೆ ಕಂಡುಬಂದಿದೆ. ಹೆದ್ದಾರಿ ಚತುಷ್ಟಗೊಳ್ಳುವ ಕಾಮಾಗಾರಿ ಕೂಡ ಬೇಗನೆಬರಬಹುದು ಇಲ್ಲಿಯು ಕೂಡ ಹಲವು ಸಮಸ್ಯೆಗಳು ಉದ್ಬವಿಸುವ ಸಂಭವನೀಯತೆ ಹೆಚ್ಚು ಹೀಗಿರುವಾಗ ನಮ್ಮ ಭಾವಿ ಜನಪ್ರತಿನಿಧಿ ಹೆಚ್ಚಿನ ಜವಾಬ್ದಾರಿ ಕಂಡುಕೊಳ್ಳಬೇಕಾಗಿದೆ.

ಸಾರ್ವಜನಿಕ ಸೌಲಭ್ಯಗಳ ಸಮಸ್ಯೆಗಳನ್ನು ಪರಿಹಾರಗೊಳಿಸಲು ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ ಅವರೊಂದಿಗೆ ಜನತೆ ಕೂಡ ಸಹಕಾರ ನೀಡಬೇಕು.ಸಂಧರ್ಭಕ್ಕನುಸಾರವಾಗಿ ಜನ ಪ್ರತಿನಿಧಿ ಕೂಡ ಜನರ ಅರಿವನ್ನು ಸಾರ್ವಜನಿಕ ಸಂಪರ್ಕ ಸಭೆಗಳ ಮೂಲಕವೋ, ನಾಗರಿಕ ಹಿತಾ ಸಮಿತಿ ಆಥಾವಾ ಸಾಕಷ್ಟು ಸಾಹಿತ್ಯ,ಸಾಂಸ್ಕೃತಿಕ, ಕ್ರೀಡಾ ಸಂಸ್ಥೆಗಳಿವೆ, ನಾಡಿನ ಗಣ್ಯ ಹಿರಿಯರಿದ್ದಾರೆ, ಮಾಧ್ಯಮಗಳಿಂದ ಜನರ ಸಮಸ್ಯೆಗಳನ್ನು ಎತ್ತಿ ಹಿಡಿಯಲು ಉತ್ತಮ ಪತ್ರಕರ್ತರಿದ್ದಾರೆ,ಬರಹಗಾರರಿದ್ದಾರೆ ಹಾಗೂ ನಾಡಿನ ಜನತೆಗೆ ಹುರಿದುಂಬಿಸುವ ಬೈಂದೂರು.ಕೊಮ್ ಅಂತರ್ಜಾಲ ಮಾಧ್ಯಮ ಕೂಡ ಇದೆ ಇವೆರೆಲ್ಲರ ಅಭಿಪ್ರಾಯದಂತೆ ಜೊತೆಗೂಡಿಸಮಾಲೋಚನೆ ಕೂಡ ಅಗತ್ಯ.

ನಮ್ಮ ವಿಧಾನಸಭೆಯ ವ್ಯಾಪ್ತಿಯಲ್ಲಿ ಏನೇನು ಸೌಕರ್ಯಗಳು ಸೌಲಭ್ಯಗಳು ಜನತೆಗೆ ಬೇಕಾಗಿದೇಯೋ ಅದು ಜನಸಾಮಾನ್ಯರಿಗೆ ಸಿಗಲಿ. ಜನರೆ ಬಂದು ಬಲವಂತವಾಗಿಸೌಕರ್ಯಗಳನ್ನು ಕಸಿದುಕೊಳ್ಳುವಂತಹ ಪರಿಸ್ಥಿತಿ ಬರದೆ, ಜನಸಾಮಾನ್ಯರು ಅದರಲ್ಲೂ ಕೂಡ ಬಡವರಿಗೆ ಸಿಗುವ ಸೌಕರ್ಯಗಳು ಸರಳವಾಗಿ ಪಡೆದುಕೊಳ್ಳಲುಅನೂಕೂಲಕರವಾಗಲಿ, ಹೀಗಿರುವಾಗ ನಮ್ಮ ಮುಂದಿನ ಭಾವಿ ಜನಪ್ರತಿನಿಧಿಗಳೆ ದಯವಿಟ್ಟು ನಿಮ್ಮ ಭರವಸೆಗಳು ಯಾವುದು ಅಗತ್ಯವಿಲ್ಲ, ಮುಂದೆ ನಿಮ್ಮ ಅಗತ್ಯಸಂಧರ್ಭಕ್ಕನುಸಾರವಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ ಪಾರದರ್ಶಕ ಆಡಳಿತದಿಂದ ನಿಮ್ಮ ಬಜೆಟ್ ಮಿತಿಯಲ್ಲಿ ಸಾಧ್ಯವಾಗುವ, ನಿಮ್ಮ ಕೈಲಾದ ಸಾಮಾಜಿಕಹಾಗೂ ಶೈಕ್ಷಣಿಕ ಹಾದಿಯಲ್ಲಿ ಬೈಂದೂರಿನ ಪ್ರಗತಿ ನಿಮ್ಮಿಂದ ಆಗಲಿ, ನಿಮ್ಮ ನಿರ್ಧಾರಗಳು-ನಿಲುವುಗಳು ಸರಿಯಾಗಿರಲಿ, ಜನತೆಯ ಪ್ರಯೋಜನಕ್ಕಿರಲಿ ಅಂತ ನನ್ನಹಾರೈಕೆ.

ಹಾಗಾದಾರೆ ಬೈಂದೂರು ವಿಧಾನಸಭೆ ಕ್ಷೇತ್ರದ ಮತದಾರರೆ ನಮ್ಮ-ನಿಮ್ಮ ಅಮೂಲ್ಯ ಮತ ಚಲಾಯಿಸೋಣ, ಮುಂದಿನ ನಮ್ಮ ಭಾವಿ ಜನಪ್ರತಿನಿಧಿಯ ಆಯ್ಕೆಗೆ ನಮ್ಮ-ನಿಮ್ಮ ಅಯ್ಕೆ ಸೂಕ್ತವಾಗಿರಲಿ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)