ಖ್ಯಾತ ಕ್ರಿಕೆಟಿಗ “ಹರ್ಭಜನ್ ಸಿಂಗ್” ಜೊತೆ “ಬೈಂದೂರು ಡಾಟ್ ಕಾಮ್ ” ಸಂದರ್ಶನ

0
889

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

24-07-2013-6

ಬೈಂದೂರು : ಭಾರತದ ಖ್ಯಾತ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಶಿರೂರು ಗ್ರೀನ್ ವ್ಯಾಲಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಹೆಜ್ಜೆಹಾಕಿದ ನೃತ್ಯದ ಝಲಕ್ ಇನ್ನೂ ಕಣ್ಮುಂದಿದೆ. ಇಲ್ಲಿನ ರಮಣೀಯ ವಾತಾವರಣವನ್ನು ಅವರು ಬಹಳಷ್ಟು ಮೆಚ್ಚಿಕೊಂಡಿದ್ದರು. ಕ್ರಿಕೆಟ್ ಜೊತೆಗೆ ಸಂಗೀತ ಕ್ಷೇತ್ರದಲ್ಲೂ ಉತ್ತಮ ಆಸಕ್ತಿ ಹೊಂದಿರುವ ಭಜ್ಜಿ ಸ್ವತ: ಹಾಡಿರುವ ಪಂಜಾಬಿ ಆಲ್ಬಂ ಮೇರಿ ಮಾ ಈಗ ಸಾಕಷ್ಟು ಜನಪ್ರಿಯಗೊಂಡಿದೆ. ಸಾಮಾಜಿಕ ತಾಣಗಳಲ್ಲಿ ವಿಶೇಷ ಪ್ರಶಂಸೆಗೊಳಗಾಗಿದೆ. ತಾಯಿ ಬಗೆಗಿನ ಅದಮ್ಯ ಪ್ರೀತಿಯನ್ನು ಹಾಡಿನ ಮೂಲಕ ಪ್ರಚುರಪಡಿಸಿದ ಹರ್ಭಜನ್ ಬೈಂದೂರು ಡಾಟ್ ಕಾಮ್ ನೊಂದಿಗೆ ತಮ್ಮ ಆಲ್ಬಮ್ ಹಾಡು ಹಾಗೂ ಕ್ರಿಕೆಟ್ ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.

24-07-2013-7

 * ಕ್ರಿಕೆಟ್ ಜೊತೆಗೆ ನೃತ್ಯ ಹಾಗೂ ಸಂಗೀತದಲ್ಲೂ ಗುರುತಿಸಿಕೊಂಡಿದ್ದೀರಿ. ಇದು ಆಕಸ್ಮಿಕವೋ ? ಮೇರಿ ಮಾ ಹಾಡಿಗೆ ಸ್ಪೂರ್ತಿ ಯಾರು ? 

ಶಾಲಾ ಕಾಲೇಜು ದಿನಗಳಲ್ಲೇ ಅವಕಾಶ ಸಿಕ್ಕಿದ್ದಾಗ ಹಾಡುತ್ತಿದ್ದೆ. ಮೇರಿ ಮಾ ಹಾಡಿಗೆ ಸ್ಪೂರ್ತಿ ನನ್ನ ತಾಯಿ. ಹಾಡಿನ ಸಾಹಿತ್ಯ ಅತ್ಯದ್ಭುತವಾಗಿದೆ. ಹೀಗಾಗಿ ನನಗೆ ಹಾಡಲು ಅನುಕೂಲವಾಯಿತು. ಇದರ ಸಾಹಿತ್ಯ ಕೇಳಿದಾಗ ಯಾರು ಬೇಕಾದರು ಹಾಡುವ ಮನಸ್ಸು ಮಾಡುತ್ತಾರೆ. ತಾಯಿಯನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಹೃದಯಸ್ಪರ್ಶಿ ಹಾಡು. ಆಕಸ್ಮಿಕವಾಗಿ ಹಾಡಿದ ಹಾಡು ಸೂಪರ್ ಹಿಟ್ ಆಗಿರುವುದಕ್ಕೆ ಅಪಾರ ಆನಂದವಾಗಿದೆ. ನೀವೂ ನನ್ನ ಕಂಠಸಿರಿ ಆಲಿಸಿರಿ!

24-07-2013-8

* ನಿಮ್ಮ ಹಾಡಿಗೆ ಪ್ರತಿಕ್ರಿಯೆ ಹೇಗಿದೆ ? ಸಂಗೀತ ಕ್ಷೇತ್ರದಲ್ಲಿ ಬೇರೇನಾದರೂ ಚಿಂತನೆ ?

ಹಾಡಿಗೆ ಉತ್ತಮ ಪ್ರತಿಕ್ರಿಯೆಯಿದೆ. ಯೂ – ಟ್ಯೂಬ್ ನಲ್ಲಿ ಮೇರಿ ಮಾ ಕ್ರೇಜ್ ಸ್ಪಷ್ಟಿಸಿದೆ. ಅಪಾರ ಅಭಿಮಾನಿಗಳಿಂದ ಮೆಚ್ಚುಗೆಯ ಮಾತುಗಳೂ ಕೇಳಿ ಬಂದಿದೆ. ವೃತ್ತಿಪರ ಗಾಯಕನಾಗುವ ಉದ್ದೇಶವಿಲ್ಲ. ನನ್ನ ಆದ್ಯತೆ ಯಾವತ್ತೂ ಕ್ರಿಕೆಟಿಗೆ ಮೀಸಲು. ಬಿಡುವಿನಲ್ಲಷ್ಟೇ ಈ ಚಟುವಟಿಕೆಯಲ್ಲಿ ನಿರತನಾಗಿರುತ್ತೇನೆ. ಪಂಜಾಬಿನ ಜನತೆ ಹಾಡಿನೊಂದಿಗೆ ಗುರುತಿಸಿಕೊಂಡಿದ್ದಾರೆ. ಪ್ರಸಿದ್ಧ ಗಾಯಕರು ಸಾಹಿತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
* ಜಿಂಬಾಬ್ವೆ ಏಕದಿನ ಸರಣಿಯಲ್ಲಿ ಧೋನಿ, ಅಶ್ವಿನ್ ಸೇರಿದಂತೆ ಹಿರಿಯ ಆಟಗಾರರ್‍ಯಾರೂ ತಂಡದಲ್ಲಿಲ್ಲ. ಕೊಹ್ಲಿ ನೇತೃತ್ವದ ತಂಡ ಯಾವ ರೀತಿ ನಿರ್ವಹಣೆ ನೀಡಬಹುದು ?

ಪ್ರಸ್ತುತ ಭಾರತ ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ. ಕಿರಿಯ ಆಟಗಾರರಾದರೂ ಉತ್ತಮ ಅನುಭವಿಗಳಿರುವುದರಿಂದ ಪರಿಪೂರ್ಣ ನಿರ್ವಹಣೆ ತೋರುವ ವಿಶ್ವಾಸವಿದೆ. ಸರಣಿ ಗೆಲುವಿನ ಬಗ್ಗೆ ಅನುಮಾನವೇ ಇಲ್ಲ.

24-07-2013-9

* ಕೊಹ್ಲಿ ಭವಿಷ್ಯದ ನಾಯಕ ಅಂತಿದ್ದಾರೆ ಇದರ ಬಗ್ಗೆ ನೀವೇನು ಹೇಳುತ್ತೀರಿ ?

ಕೊಹ್ಲಿ ಒಬ್ಬ ಉತ್ತಮ ಆಕ್ರಮಣಕಾರಿ ಆಟಗಾರ. ಐಪಿಎಲ್ ನಲ್ಲಿ ಆರ್ ಸಿಬಿ ನಾಯಕತ್ವ ವಹಿಸಿ ಸೈ ಎನಿಸಿಕೊಂಡಿದ್ದಾರೆ. ಉತ್ತಮ ಭವಿಷ್ಯ ವಿದೆ. ನಾಯಕತ್ವದ ಎಲ್ಲ ಅರ್ಹತೆ ಹೊಂದಿದ್ದಾರೆ.

 * ಪ್ರಸ್ತುತ ಕ್ರಿಕೆಟ್ ಆಡುತ್ತಿಲ್ಲ. ಏನು ಮಾಡುತ್ತಿದ್ದೀರಿ ?

ಕುಟುಂಬದವರೊಂದಿಗೆ ಬೆರೆಯುತ್ತಿದ್ದೇನೆ. ಹರ್ಭಜನ್ ಕ್ರಿಕೆಟ್ ಆಕಾಡಮಿ ಮೂಲಕ ಯುವ ಆಟಗಾರರಿಗೆ ತರಭೇತಿ ನೀಡುತ್ತಿದ್ದೇನೆ. ವೈಯಕ್ತಿಕ ಹಾಗೂ ಇತರ ಕಾರ್ಯಕ್ರಮಗಳಿಗೆ ತೆರಳಲು ಅವಕಾಶವನ್ನು ಉಪಯೋಗಿಸಿಕೊಂಡಿದ್ದೇನೆ.

24-07-2013-10

* ನಿಮ್ಮ ಗೈರು ಹಾಜರಿಯಲ್ಲಿ ಅಶ್ವಿನ್, ಜಡೇಜ ಮೊದಲಾದ ಸ್ಪಿನ್ನರ್ ಗಳು ಮಿಂಚುತ್ತಿದ್ದಾರೆ. ಕಾಶ್ಮೀರಿ ಸ್ಪಿನ್ನರ್ ಫರ್ವೇಜ್ ರಸೂಲ್ ಬಗ್ಗೆ ನಿಮ್ಮ ಅಭಿಪ್ರಾಯವೇನು ?

ಪ್ರತಿಯೊಬ್ಬ ಆಟಗಾರನೂ ದೊರಕಿದ ಅವಕಾಶವನ್ನು ಉಪಯೋಗಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ಜಡೇಜ, ರಸೂಲ್ ಉತ್ತಮ ಆಟಗಾರರು. ಯುವ ಆಟಗಾರರಿಗೆ ಸದಾ ಪ್ರೋತ್ಸಾಹ ನೀಡುತ್ತೇನೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)