ನಾಟಕಾಸಕ್ತ ಶಿಕ್ಷಕ – ರಂಗಕರ್ಮಿ ಗಣೇಶ ಕಾರಂತ

0
849

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

29-07-2013-1

ಬೈಂದೂರು : ಬೈಂದೂರಿನ ಸುತ್ತಮುತ್ತ ಹವ್ಯಾಸೀ ನಾಟಕ ಕಲಾವಿದರ ತಂಡ “ಲಾವಣ್ಯ” ಕಳೆದ ಮೂವತ್ತು ವರ್ಷಗಳಿಂದ ಅನೇಕ ಹೊಸ ಹೊಸ ನಾಟಕಗಳನ್ನಾಡುತ್ತಾ ಮನೆ ಮಾತಾಗಿದೆ. ಈ ಕಲಾ ಕೂಟದ ಬೇರು ಗಟ್ಟಿಗೊಳಿಸಲು ಅವಿರತ ದುಡಿದವರಲ್ಲಿ ಶ್ರೀ ಗಣೇಶ ಕಾರಂತರದು ಬಹು ಮುಖ್ಯ ಪಾತ್ರ.

29-07-2013-2

ಚಿಕ್ಕಂದಿನಲ್ಲೇ ನಾಟಕ, ಯಕ್ಷಗಾನದ ಗೀಳು ಹತ್ತಿಸಿಕೊಂಡ ಕಾರಂತರು ತರಬೇತಿ ಪಡೆದಿದ್ದು ಶಿಕ್ಷಕನಾಗಲು, ಆದರೆ ಜೀವನೋಪಾಯಕ್ಕೆ ಅನುಸರಿಸಿದ್ದು ಹೋಟೆಲ್ ಉದ್ಯಮ. ನಾಟಕ ಕಲೆಯ ಶಿಕ್ಷಕನಾಗಿ ಅವರು ಸುತ್ತಮುತ್ತಲ ಹಳ್ಳಿ ಮಕ್ಕಳಿಗೆಲ್ಲ ಚಿರಪರಿಚಿತರು. ಬೇಸಿಗೆ ರಜಾದಿನಗಳಲ್ಲಿ ಮಕ್ಕಳನ್ನು ಕೂಡಿಸಿಕೊಂಡು  ನಾಟಕಾಸಕ್ತಿ ಮೂಡಿಸುವ , ಅಭಿನಯ ಕಲಿಸುವ ಕಾರಂತರ ಉತ್ಸಾಹ ಅದಮ್ಯ.

29-07-2013-4

ಇದುವರೆಗೆ ಸುಮಾರು ಎಪ್ಪತ್ತಕ್ಕೊ ಮಿಕ್ಕಿ ನಾಟಕಗಳಲ್ಲಿ ಮುಖ್ಯ ಪಾತ್ರವಹಿಸಿರುವ ಇವರು ಹಲವು ನಾಟಕಗಳನ್ನು ಸ್ವತಹ ನಿರ್ದೇಶಿಸಿದ್ದಾರೆ. ಇವರು ಭಾಗವಹಿಸಿದ “ಲಾವಣ್ಯ”ದ ಅನೇಕ ನಾಟಕಗಳು ರಾಜ್ಯದಾದ್ಯಂತ ಪ್ರದರ್ಶಿತಗೊಂಡಿದೆ. ರಾಜ್ಯಮಟ್ಟದ ಅನೇಕ ನಾಟಕ ಸ್ಪರ್ಧೆಗಳನ್ನು ಗೆಲ್ಲುವಲ್ಲಿ ಕಾರಂತರ ಪಾತ್ರ ಹಿರಿದಾದದ್ದು. ಸ್ತ್ರೀ, ಹಾಸ್ಯ ನಟನಾಗಿ ಇವರ ಪಾತ್ರಗಳು ಪ್ರೇಕ್ಷಕರ ಮನ ಸೂರೆಗೊಂಡಿವೆ. ನಾಟಕದ ಜತೆಯಲ್ಲಿ ಯಕ್ಷಗಾನದ ಅಭಿರುಚಿ ಬೆಳೆಸಿಕೊಂಡಿರುವ ಗಣೇಶ ಕಾರಂತರು  2011 ರ ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ಮಹೋತ್ಸವದ ಪ್ರಯುಕ್ತ “ಸುವರ್ಣ ರಂಗ ಸಾಧಕ” ಪ್ರಶಸ್ತಿಗೆ ಭಾಜನರಾಗಿದ್ದಾರೆ

29-07-2013-3.

“ಲಾವಣ್ಯ”ದ ದಶಮಾನೋತ್ಸವ ನಾಟಕ ಸ್ಪರ್ಧೆ(ಹತ್ತು ದಿನ), ಬೆಳ್ಳಿ ಹಬ್ಬದ ನಾಟಕ ಸ್ಪರ್ಧೆ (ಹದಿನಾರು ದಿನ) ಮೂವತ್ತರ ನಾಟಕೋತ್ಸವ (ಎಂಟು ದಿನ) ದಂತಹ ಕಲಾ ಹಬ್ಬದ ಆಯೋಜನದಲ್ಲಿ ಇವರ ಅಹರ್ನಿಶಿ ಸೇವೆಯಿಂದಾಗಿ ಬೈಂದೂರು ಆಸುಪಾಸಿನ ಕಲಾಭಿಮಾನಿಗಳಲ್ಲಿ ಗಣೇಶ ಕಾರಂತರ ಕುರಿತು ಅಪಾರ ಮೆಚ್ಚುಗೆಯಿದೆ. ಹೊಸ ಅಲೆಯ ನಾಟಕಗಳನ್ನೂ ಆಡಿ ಸೈ ಅನ್ನಿಸಿಕೊಂಡ ಕಾರಂತರ ಬಗೆಗೆ ಬೈಂದೂರು ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಸುಬ್ರಹ್ಮಣ್ಯ ಭಟ್ ಅವರು “ಕಾಡುತಿಹದೀ ರಂಗ ತರಂಗ ” (ಕಾ..ರಂ..ತ ) ಎಂಬ ಪುಸ್ತಕವನ್ನೇ ಬರೆದು ಅವರ ಅಪೂರ್ವ ಸಾಧನೆಗೆ ಶಿರಬಾಗಿದ್ದಾರೆ. ಊರ-ಪರ ಊರ ಐವತ್ತಕ್ಕೂ ಅಧಿಕ ಸಂಘ -ಸಂಸ್ಥೆಗಳು ಈವರೆಗೆ ಇವರನ್ನು ಸನ್ಮಾನಿಸಿವೆ.

29-07-2013-5

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)