Byndoor

0
3319

[slide_resp][sliderresp image=”/wp-content/uploads/2014/05/byn_9.jpg”] [/sliderresp] [sliderresp image=”/wp-content/uploads/2014/05/byn_8.jpg”] [/sliderresp] [sliderresp image=”/wp-content/uploads/2014/05/byn_6.jpg”] [/sliderresp] [sliderresp image=”/wp-content/uploads/2014/05/byn_7.jpg”] [/sliderresp] [sliderresp image=”/wp-content/uploads/2014/05/byn_7.jpg”] [/sliderresp] [sliderresp image=”/wp-content/uploads/2014/05/byn_4.jpg”] [/sliderresp] [sliderresp image=”/wp-content/uploads/2014/05/byn_3.jpg”] [/sliderresp] [sliderresp image=”http://localhost/byndoor.com/wp-content/uploads/2014/05/byn_2.jpg”] [/sliderresp] [sliderresp image=”/wp-content/uploads/2014/05/by_9.jpg”] [/sliderresp] [/slide_resp]

 Byndoor or Baindur is a village in Kundapura Taluk of Udupi district in the state of Karnataka, India. It lies on the National Highway NH-17. Sri Someshwara temple is one of the most beautiful temples located on the seashore. It is 45 km from Maravanthe. Seneshwara Temple Byndoor:It is oldest temple in Baindur.

The beaches are the main attractions in the towns located on Coastal Karnataka. Even in Baindur, the Beach is the main places of interest. The beach here is famous for the beautiful sunset. The serenity and silence of this place attract many tourists.

If you still need a glorious sunset with peace and calm, then you should visit ‘Kshitija Nesara Dhama’ in Ottinene near Byndoor.

Another attractions of Baindur are the Seneshwara TempleSri Ramachandra Mandira and Mahakali Temple. The Seneshwara Temple is a very old temple and the history of this temple dates back to few centuries.

One of the popular pilgrim centers of Karnataka, Kollur Mookambika Temple is just 28 Km from Baindur.

The population of Baindur is a mixture of Hindus predominantly belonging to Ramakshatriya caste, a small but progressive Hindu community and Muslims. The Muslims of Baindur are predominantly Nawayati. The main language spoken in Byndoor is Kannada.

Nawayat families in Baindur belong to the shafi jurisdiction of the Islamic school of thought; they are of mixed blood race tracing their ancestry to Arabs & Persians, their mother tongue is called Nawaythi a amalgamation of Persian, Arabic, Marathi & Hindi words with konkani as its base. Byndoor Muslims are predominantly Nawayati’s with some Urdu speaking Muslims also known as Dakhni’s meaning from the deccan region. Most of the Baindur Muslims are now settled in banglore or abroad in the Persian Gulf, United States and even in Europe.

Baindur also has many co-operative banks.

The preferred occupation of the locals is farming.

Near Baindur is the scenic Ottinane with its overhanging cliffs, an ideal place for viewing the sunset. The beautiful Belaka Theerthe Falls lie near Byndoor.

[sws_gmap3 map_type=”ROADMAP” map_title=”” canvas_width=”689″ canvas_height=”300″ zoom=”13″ name=”Byndoor” address=”byndoor india” glat=”13.868518″ glon=”74.634188″ info_windows=”” disableDefaultUI=”false” traffic=”false”][gmarker marker_latitude=”” marker_longitud=”” marker_label=””] [/gmarker] [/sws_gmap3]

[module10_newsimage title=”Tourist places” category=”Tourist places” showpost=”6″ bgcolor=”98b632″ fontcolor=”ffffff”] [/module10_newsimage]

 

ಶ್ರೀ. ಕೆ.ವೆಂಕಟೇಶ್ ಕಾರಂತರ ಅಭಿಪ್ರಾಯದಲ್ಲಿ ಬೈಂದೂರು…
ಕನ್ನಡನಾಡಿನ ಪಡುಗಡಲ ತಡಿಯಲ್ಲಿ ಪ್ರಕ್ರತಿ ಸೌಂದರ್ಯವನ್ನೇ ಹಾಸಿ ಹೊದೆದು ಮಲಗಿದ ನಯನ ಮನೋಹರ ಭುಪ್ರದೇಶವೇ ಬೈಂದೂರು. ಇಲ್ಲಿನ ಗಂಗಾನಾಡು, ಸುತ್ತಮುತ್ತಲಿನ ಕಾಡು ಪ್ರದೇಶ ನನ್ನಂತ ಅಲೆಮಾರಿ ಪ್ರವಾಸಿಗನ ಕಣ್ಣಿಗೆ ಹಬ್ಬ. ಬಿಂದು ಋಷಿಗಳು ಇಲ್ಲಿ ತಪಸ್ಸು ಆಚರಿಸಿ, ಇಲ್ಲಿಯ ಜನರ ಜೀವನೋನ್ನತಿಗೆ ಕಾರಣರಾಗಿದ್ದಾರೆಂದು ಹಿರಿಯರ ಬಲವಾದ ನಂಬಿಕೆ.

ಕ್ರಮೇಣ ಬಿಂದುಪುರ, ಬಿಂದೂರು ಮತ್ತು ಬೈಂದೂರು ಆಗಿ ಮಾರ್ಪಟ್ಟಿತು ಎಂದು ನಂಬಲಾಗಿದೆ.

203232_1459033715_176775872_q

Written by : Mohan Devadiga, Byndoor
ಹಾಯ್ ಬೆಂಗಳೂರು ಪತ್ರಿಕೆಯವರು ಓದುಗರಿಂದ ತಮ್ ತಮ್ಮ ಊರಿನ ಹೆಸರು ಹೇಗೆ ಬಂತೆಂಬುದರ ಬಗ್ಗೆ ಓದುಗರಿಂದ ಲೇಖನ ಕೇಳಿದಾಗ ನನ್ನಿಂದ ಹುಟ್ಟಿದ್ದು ಈ ಲೇಖನ. ಅವರಿಗೆ ಕಲಿಸುವ ಮುನ್ನ ನಿಮ್ಮದೇನಾದರೂ ಅಭಿಪ್ರಾಯವಿದ್ದಲ್ಲಿ ತಿಳಿಸಿ. ಯಾಕೆಂದರೆ ಹುಟ್ಟೂರಿನ ಬಗ್ಗೆ ನನ್ನಷ್ಟೇ ನಿಮಗೂ ಜವಾಬ್ದಾರಿ ಇದೆ ತಾನೇ ?

ಉಡುಪಿ ಜಿಲ್ಲೆಯ ತುತ್ತ ತುದಿಯಲ್ಲಿ ಬೆಟ್ಟದ ಕೆಳಗೆ ಹರಿವಿಕೊಂಡು ಅರಬ್ಬೀ ಸಮುದ್ರದ ಅಲೆಗಳಿಂದ ಸದಾ ಮುತ್ತಿಕ್ಕಿಸಿಕೊಳ್ಳುವ ಊರು ಬೈಂದೂರು. ಮೇಲೆ ನಿಂತು ಊರಿನತ್ತ ದ್ರಷ್ಟಿ ಹಾಯಿಸಿದರೆ ತೆಂಗಿನ ಮರಗಳ ಸಾಲು ಸಾಲಿನ ಮಧ್ಯೆ ಅಲ್ಲಲ್ಲಿ ಮಂಗಳೊರು ಹೆಂಚನ್ನು ಹೊದ್ದ ಮನೆಗಳು, ನಡುವೆ ಹಾವಿನಂತೆ ಹರಿಯುವ ರಾಷ್ಟ್ರೀಯ ಹೆದ್ದಾರಿ. ನನ್ನಂತಹವರ ಉಸಿರು, ನಿಟ್ಟುಸಿರು, ಉತ್ಸಾಹ, ಸ್ಖಲನ ಮುಂತಾದ ವಿಭಿನ್ನ ಭಾವನಾತ್ಮಕ ಪ್ರಯಾಣಕ್ಕೆ ಸಾತ್ ಕೊಟ್ಟ ಬೈಂದೂರನ್ನು ನಮ್ಮ ಜನ ಪರಶುರಾಮ ಸೃಷ್ಟಿ ಎಂದು ಕರೆಯುತ್ತಾರೆ. ಅಂತಹ ವಿಶ್ವಾಸದ ಕಲ್ಪನೆಯಿಂದಾಗಿಯೇ ಈ ಕಡಲ ತಡಿಯ ಜನರನ್ನು ತ್ಸುನಾಮಿ ಮುಂತಾದ ಸಂಗತಿಗಳು ನಿದ್ದೆಗೆಡಿಸುವುದಿಲ್ಲ.

ಬೈಂದೂರು ಎಂಬ ಹೆಸರಿನ ಮೂಲದ ಬಗ್ಗೆ ಚಿಕ್ಕಂದಿನಲ್ಲಿದ್ದಾಗ ಕೇಳಿದ ಕತೆ ಎಂದರೆ ಇಲ್ಲೊಬ್ಬ ಬಿಂದು ಎಂಬ ಹೆಸರಿನ ಋಷಿ ಇದ್ದ. ಅವನು ತಪಸ್ಸು ಮಾಡಿದ ಜಾಗ ಇದು. ಬಿಂದುಪುರ ಕ್ರಮೇಣ ಬೈಂದೂರು ಆಗಿ ಬದಲಾಯಿತು ಎಂದು. ಇಲ್ಲಿನ ತುಂಬು ಪ್ರಕೃತಿ, ತಂಗಾಳಿ, ಎಳೆನೀರು, ರುಚಿಕರ ತಾಜಾ ಮೀನುಗಳನ್ನು ನಿರ್ಲಕ್ಷಿಸಿ ತಪಸ್ಸಿಗೆ ಮೊರೆ ಹೋದ ಅರಸಿಕ ಋಷಿಯ ಅಸ್ತಿತ್ವದ ಬಗ್ಗೆ ನನಗೆ ಇನ್ನೂ ಅನುಮಾನವಿದೆ. “ಸಂಗೀತಪುರ ವೆಂಬ ರಾಜದಾನಿಯಿಂದ ಆಳಲ್ಪುಡುವ ದೇವರಸ ರಿಂದ ಆಜ್ಣಾಪಿಸಿದ್ದು..” ಎಂದು ಆರಂಭವಾಗುವ ಪ್ರಾಚೀನ ಕಾಲದ ಶಿಲಾ ಶಾಸನವೊಂದು ಕೂಡ ಬೈಂದೂರಿನ ಹೆಸರಿನ ಮೂಲದ ಗುಟ್ಟು ಬಿಟ್ಟು ಕೊಡುವುದಿಲ್ಲ.

“ಹೆಸರಿನಲ್ಲೇನಿದೆ” ಎಂದು ಶೇಕ್ಸ್ ಪಿಯರ್ ಹೇಳಿದಂತೆ ಊರಲ್ಲಿ ಸುತ್ತುತ್ತಾ ಹೊರಟರೆ ನಾಲ್ಕೂ ದಿಕ್ಕುಗಳಲ್ಲಿ ಪ್ರಕೃತಿಯ ಅದ್ಭುತ ಸೌಂದರ್ಯ ನಿಮ್ಮ ಮನಸ್ಸು ಸೂರೆಗೊಳ್ಳುವುದು ಖಚಿತ. ಸಮುದ್ರ ತೀರದಲ್ಲೊಂದು ದೇಗುಲ. ಅದರೊಳಗೆ ವರ್ಷ ಪೂರ್ತಿ ಹರಿಯುವ ಸಿಹಿ ನೀರಿನ ಬುಗ್ಗೆ. ಎದುರಿಗೆ ಉಪ್ಪು ನೀರಿನ ಕಡಲಿನ ಸನಿಹಕ್ಕೆ ಆಂಟಿ ಕೊಂಡು ಸೂರ್ಯಾಸ್ತ ವೀಕ್ಷಿಸಲು ಪ್ರಕೃತಿಯೇ ನಿರ್ಮಿಸಿದ ದೊಡ್ಡ ದೊಡ್ಡ ಬಂಡೆಗಳು. ಅಲ್ಲೇ ಎಡಕ್ಕೆ ದೃಷ್ಟಿ ಹರಿಸಿದರೆ ಕಡಲನ್ನು ನದಿಯೊಂದು ಸೇರುವ ವಿಹಂಗಮ ದೃಶ್ಯ. ಊರಿನೊಳಕ್ಕೆ ಬಂದರೆ ಅದ್ಭುತ ಶಿಲ್ಪಿ ಕಲೆಯುಳ್ಳ ಸೇನೆಶ್ವರ ದೇವಸ್ಥಾನ. ಇನ್ನು ಪೂರ್ವ ದಿಕ್ಕನ್ನು ಅನುಸರಿಸಿ ಹೋದರೆ ಪಶ್ಚಿಮ ಘಟ್ಟಕ್ಕೆ ತಬ್ಬಿ ಕೊಂಡಿರುವ ಅರಣ್ಯ. ದೂರದಲ್ಲೊಂದು ಚಾರಣ ಪ್ರಿಯರನ್ನು ಕೈ ಬೀಸಿ ಕೂಸಳ್ಳಿ ಜಲಪಾತ. ಇತ್ತೀಚಿಗೆ ಪ್ರವಾಸಿಗರ ಭೂಪಟದಲ್ಲಿ ಸೇರ್ಪಡೆಯಾಗಿರುವ ಬೈಂದೂರಿನಲ್ಲಿ ಬೀಚ್ ರೆಸಾರ್ಟ್, ಬೆಟ್ಟದ ಮೇಲೆ ಅರಣ್ಯ ಇಲಾಖೆಯ ವಿಶ್ರಾಂತಿ ಧಾಮ ಇದೆ. ಅರಣ್ಯದ ತಪ್ಪಲಲ್ಲಿ ಮತ್ತೊಂದು ಅಗಾಧ ವಸತಿ ತಾಣ ಕೂಡಾ ತಯಾರಾಗುತ್ತಿದೆ. ಹೆಚ್ಚಿನ ರೈಲುಗಳು ನಿಲ್ಲುವ ಬೈಂದೂರು- ಕೊಲ್ಲೂರು, ಮರವಂತೆ, ಮುರ್ಡೆಶ್ವರ ಗಳಿಗೂ ಸಮೀಪದ ಊರು. ಇಲ್ಲಿನ ಹೋಟೆಲುಗಳ ಮೀನು ಊಟದ ರುಚಿ ಸವಿದವನೇ ಬಲ್ಲ.

ಊರಿನ ಜನ ಮಾತನಾಡುವ ಹೋಯ್ಕ್ , ಬರ್ಕ್ ಎಂಬ ಶಾರ್ಟ್ ಹ್ಯಾಂಡ್ ಕನ್ನಡದಲ್ಲಿ ಪ್ರೀತಿಯ ಸೊಗಡನ್ನು ಅನುಭವಿಸಲು ಬನ್ನಿ ಬೈಂದೂರಿಗೆ…..

[module10_newsimage title=”Tourist places” category=”Tourist places” showpost=”6″ bgcolor=”98b632″ fontcolor=”ffffff”] [/module10_newsimage]

 

 

ಇಲ್ಲಿ ನಿಮ್ಮ ಅಭಿಪ್ರಾಯ ‌ಬರೆಯಿರಿ

16 − six =

SHARE
Previous articleBhatkal
Next articleKollur