ಬೈಂದೂರು : ಜನವಾದಿ ಮಹಿಳಾ ಸಂಘಟನೆ ವಿಸ್ತೃತ ಸಭೆ

0
304

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ದೇಶದ ಜನಸಂಖ್ಯೆಯ ಶೇಕಡಾ 50 ಭಾಗ ಮಹಿಳೆಯರು ಇದ್ದು, ಸಮಾಜದಲ್ಲಿ ಆಥಿ೯ಕ, ಸಮಾಜಿಕ,ದೌಜ೯ನ್ಯ ಲೈಂಗಿಕ ಕಿರುಕುಳ ಇತ್ಯಾದಿ ಶೋಷಣೆಗೆ ಒಳಗಾಗುತ್ತಿದ್ದು ಇಂತಹ ದೌಜ೯ನ್ಯಗಳವಿರುದ್ಧ ಮಹಿಳೆಯರು ಸಂಘಟಿತ ಹೋರಾಟಕ್ಕೆ ಮುಂದಾಗ ಬೇಕು ಎಂದು ಜನವಾದಿ ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ದೇವಿ ಅಭಿಪ್ರಾಯ ಪಟ್ಟರು. ಬೈಂದೂರು ತಾಲೂಕು ಜನವಾದಿ ಮಹಿಳೆಯರ ಸಮಾವೇಶವು ಬೈಂದೂರು ಸಿಐಟಿಯು ಕಚೇರಿ ಸಭಾಂಗಣದಲ್ಲಿ  ಜರಗಿದ ವಿಸ್ತೃತ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಶೀಲಾವತಿ ಹಡವು,ಜಯಶ್ರೀ ಪಡುವರಿ,ನಾಗರತ್ನ ನಾಡ, ನಾಗರತ್ನ ಪಡುವರಿ ಮೊದಲಾದವರು ವೇದಿಕೆಯಲ್ಲಿದ್ದರು.

ಸಿಐಟಿಯು ತಾಲೂಕು ಸಂಚಾಲಕಿ ಸಿಂಗಾರಿ ನಾವುಂದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜನವಾದಿ ಮಹಿಳಾ ಸಂಘಟನೆಯ ಬೈಂದೂರು ತಾಲೂಕು ಸಂಚಾಲಕ ಸಮಿತಿಗೆ ನಾಗರತ್ನ ನಾಡ,ಮನೋರಮ ಭಂಡಾರಿ,ನಾಗರತ್ನ ಪಡುವರಿ,ಜಯಶ್ರೀ ಪಡುವರಿ,ವಸಂತಿ ಯಡ್ತರೆ,ಸಾವಿತ್ರಿ ಹೆಮ್ಮಾಡಿ,ಸರಸ್ವತಿ ಬೈಂದೂರು,ಸಿಂಗಾರಿನಾವುಂದ,ಶೋಭಾ.ವಿ.ನಾಯಕ್ ಮುಬಾರಕ್ ಶಿರೂರು ಇವರನ್ನು ನವಾ೯ನುಮತದಿಂದ ಆಯ್ಕೆ ಮಾಡಲಾಯಿತು.

ವರದಿ : ವೆಂಕಟೇಶ್

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)