ಬೈಂದೂರು : ಸಿಪಿಐ(ಎಂ)ಕಚೇರಿ ಉದ್ಘಾಟನೆ

0
612

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ಸ್೯ವಾದಿ)ಬೈಂದೂರು ವಲಯ ಸಮಿತಿ ಕಚೇರಿಯನ್ನು ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಸಿಐಟಿಯು ಕಚೇರಿಯ ಬಳಿ ಆರಂಭಿಸಲಾಗಿದ್ದು,ಸಿಪಿಐ(ಎಂ)ಬೈಂದೂರು ವಲಯ ಕಾಯ೯ದಶಿ೯ ಸುರೇಶ್ ಕಲ್ಲಾಗರ್ ಕಚೇರಿ ಉದ್ಘಾಟನೆಯನ್ನು ನೆರವೇರಿಸಿ, ಸಭೆಯನ್ನುದ್ದೆಶಿಸಿ ಮಾತನಾಡುತ್ತಾ, ರಾಜಕೀಯ,ಪ್ರಜಾಪ್ರಭುತ್ವ ನಮ್ಮ ಉಸಿರು ಕಾಮಿ೯ಕ ವಗ೯ಕ್ಕೆ ತನ್ನದೇ ಆದ ರಾಜಕೀಯ ಪಕ್ಷ ಅಗತ್ಯವಾಗಿ ಬೇಕು ಎಂದು ಹೇಳಿದರು. ಸಿಪಿಐ(ಎಂ)ಪಕ್ಷದ ಜಿಲ್ಲಾ ಕಾಯ೯ದಶಿ೯ಮಂಡಳಿ ಸದಸ್ಯ ವೆಂಕಟೇಶ ಕೋಣಿ ಪ್ರಾಸ್ತಾವಿಕ ಭಾಷಣ ಮಾತನಾಡಿ, ಬೈಂದೂರು ತಾಲೂಕಿನಲ್ಲಿ ದುಡಿಯುವ ವಗ೯ವಾದ ರೈತ,ಕೃಷಿ ಕೂಲಿ,ಕಾಮಿ೯ಕರ ವಗ೯ ರಾಜಕೀಯ ಹೋರಾಟ ಚಟುವಟಿಕೆಯ ಕೇಂದ್ರವಾಗಿ ಈ ಕಚೇರಿ ಬೆಳೆದು ಬರಲಿ ಎಂದು ಶುಭ ಹಾರೈಸಿದರು.

ಸಿಐಟಿಯು ತಾಲೂಕು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ,ಡಿವೈಎಪ್ಐ ಮಾಜಿ ಮುಖಂಡ ಬಿ.ಶ್ರೀನಿವಾಸ ಹಳವಳ್ಳಿ, ಕನಾ೯ಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಹೆಬ್ಬಾರ್ ಕಾಲ್ತೋಡು,ಇವರು ಸಿಪಿಐ(ಎಂ)ಪಕ್ಷದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದು,ಶುಭ ಕೋರಿ ಮಾತನಾಡಿದರು. ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ರಾಜೀವ ಪಡುಕೋಣೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ(ಎಂ)ಮುಖಂಡ ಕಂಭದಕೋಣೆ ರಾಮ ಧನ್ಯವಾದ ನೀಡಿದರು.

ವರದಿ:ವೆಂಕಟೇಶ್ ಕೋಣಿ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)