ಬಿಜೂರು: ಮಕ್ಕಳ ಹಕ್ಕುಗಳ ಜಾಗೃತಿ, ಮಹಿಳಾ ಸಬಲೀಕರಣ ಉಪನ್ಯಾಸ

0
532

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ : ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರಕೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಹಿಳಾ ಶಕ್ತಿ ಕೇಂದ್ರ ಮಣಿಪಾಲ, ಅಭಿವೃದ್ಧಿ ಸಂಸ್ಥೆ ಬಾಳ್ಕುದ್ರು ಹಂಗಾರಕಟ್ಟೆ ಹಾಗೂ ಸರಕಾರಿ ಹಿರಿಯ ಪ್ರಾ.ಶಾಲೆ ಕಂಚಿಕಾನ್ ಹಾಗೂ ಗ್ರಾಮ ಪಂಚಾಯತ್ ಬಿಜೂರು ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಮತ್ತು ಮಹಿಳಾ ಸಬಲೀಕರಣ ವಿಶೇಷ ಉಪನ್ಯಾಸ-2021 ಕಾರ್ಯಕ್ರಮ ಕಂಚಿಕಾನ್ ಸ.ಹಿ.ಪ್ರಾ.ಶಾಲೆಯಲ್ಲಿ ಮಾ.10ರಂದು ನಡೆಯಿತು.

ಮಹಿಳಾ ಶಕ್ತಿ ಕೇಂದ್ರ ಜಿಲ್ಲಾ ಸಂಯೋಜಕಿ ಶಾರದ ಮಹಿಳಾ ಸಬಲೀಕರಣದ ಕುರಿತು ಮಾತನಾಡಿ, ದೇಶವು ಆಧುನಿಕತೆಯೊಂದಿಗೆ ಮುಂದುವರಿಯುತ್ತಿದರು ಸಹ ಹೆಣ್ಣು ಮಕ್ಕಳ ಮೇಲಿನ ಶೋಷಣೆ ಮುಂದುವರಿದಿರುವುದು ಕಳವಳಕಾರಿಯಾಗಿದೆ. ಮಹಿಳೆಗೆ ಸಾಮಾಜಿಕ, ಆರ್ಥಿಕ, ಭೌತಿಕವಾಗಿ ಹಾಗೂ ಶೈಕ್ಷಣಿಕವಾಗಿ ಇನ್ನಷ್ಟು ಪೆÇ್ರೀತ್ಸಹ ಸಿಗಬೇಕಿದೆ ಎಂದರು.

ಬೈಂದೂರು ಠಾಣಾಧಿಕಾರಿ ಸಂಗೀತ ಉದ್ಘಾಟಿಸಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ನಮ್ಮ ಸಂಸ್ಕøತಿ, ಸಂಸ್ಕಾರವನ್ನು ಕಲಿಸುವ ಅಗತ್ಯವಿದೆ ಎಂದರು.

ಬಿಜೂರು ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ತಾ.ಪಂ.ಸದಸ್ಯ ಜಗದೀಶ ದೇವಾಡಿಗ, ಬಿಜೂರು ಗ್ರಾ.ಪಂ.ಸದಸ್ಯರಾದ ವೀರೇಂದ್ರ ಶೆಟ್ಟಿ, ರಾಜೇಂದ್ರ ಬಿಜೂರು, ಗಂಗಾಧರ ದೇವಾಡಿಗ, ಗೀರೀಶ ದೇವಾಡಿಗ ಸಾಲಿಮಕ್ಕಿ, ರಾಘವೇಂದ್ರ ದೇವಾಡಿಗ, ಸರೋಜ ದೇವಾಡಿಗ, ಶಾಂತ ದೇವಾಡಿಗ, ಲಕ್ಷ್ಮೀ, ಸೀತು, ಗ್ರಾ.ಪಂ.ಅಭಿವೃದ್ಧಿ ಅ„ಕಾರಿ ಸತೀಶ ತೋಳಾರ್ ವಜ್ರ ದುಂಬಿ ಗೆಳೆಯರ ಬಳಗದ ಅಧ್ಯಕ್ಷ ರಾಘವೇಂದ್ರ ದೇವಾಡಿಗ ಬೈಂದೂರು, ಖಂಬದಕೋಣೆ ಸಂವೇದನಾ ಪ್ರಥಮ ದರ್ಜೆ ಕಾಲೇಜು ಅಧ್ಯಕ್ಷ ಡಾ| ಸುಬ್ರಹ್ಮಣ್ಯ ಭಟ್ ಹಂಗಾರಕಟ್ಟೆ ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ರಮೇಶ ವಕ್ವಾಡಿ, ಕಾಂಚಿಕಾನ್ ಶಾಲೆಯ ಮುಖ್ಯ ಶಿಕ್ಷಕಿ ಸಾವಿತ್ರಿ ಹೆಗ್ಡೆ, ಮಾತೃ ಭೂಮಿ ಸಂಸ್ಥೆಯ ಕೃಪಾ, ಗಿರಿಜಾ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾ„ಕಾರಿ ಪ್ರಭಾಕರ ಆಚಾರ್ ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿದರು.

ಕ್ರಿಸ್ಟಿನಾ ಸ್ವಾಗತಿಸಿದರು. ರವೀಂಂದ್ರ ಪ್ರಾರ್ಥನೆ ಗೈದರು. ವಿದ್ಯಾರ್ಥಿನಿ ದೀಪಾ ನಿರೂಪಿಸಿದರು. ಆಶಾ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)