ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಕೊಡುಗೆಗಳ ಹಸ್ತಾಂತರ

0
379

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಉಪ್ಪುಂದ :  ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ಜಿಲ್ಲಾ ಗರ್ವನರ್ ಎನ್.ಎಂ.ಹೆಗ್ಡೆ ಅ„ಕೃತ ಭೇಟಿ ಸಂದರ್ಭ ನಡೆಯಿತು.

ಹೇರಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ಕೊಠಡಿಗೆ  ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್ ವತಿಯಿಂದ ನೆಲಹಾಸು (ಟೈಲ್ಸ್) ಹಾಕಿಸಲಾಗಿದ್ದು ಜಿಲ್ಲಾ ಗರ್ವನರ್ ಎನ್.ಎಂ.ಹೆಗ್ಡೆ ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿ, ಶಾಲೆಯ ಅಭಿವೃದ್ಧಿ ಕಾರ್ಯ ಮಾಡುವುದರಿಂದ ದೇವಸ್ಥಾನದ ಜೀಣೋದ್ಧಾರ ಮಾಡಿದಂತಹ ಪುಣ್ಯ ದೊರೆಯುತ್ತದೆ. ಸಂಘ ಸಂಸ್ಥೆಗಳು ಸರಕಾರಿ ಶಾಲೆಗಳ ಅಗತ್ಯತೆಗಳನ್ನು ಪೂರೈಸುವುದರಿಂದ ಶಾಲೆ ಉಳಿಯುವಿಕೆಗೆ ಸಹಾಯಕವಾಗುತ್ತದೆ ಎಂದರು.

ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಜಯಶೀಲ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಊರಿನ ಹಿರಿಯವರಾದ ಗಿರಿಜಾ ಎನ್,ಶೆಟ್ಟಿ ಇವರನ್ನು ಲಯನ್ಸ್ ಕ್ಲಬ್ ಹಾಗೂ ಶಾಲೆ ವತಿಯಿಂದ ಸಮ್ಮಾನಿಸಲಾಯಿತು.

ಈ ಸಂದರ್ಭ ಲಯನ್ಸ್ ವಲಯಾಧ್ಯಕ್ಷ ವಿಶ್ವನಾಥ ಶೆಟ್ಟಿ, ನಿಕಟ ಪೂರ್ವಾಧ್ಯಕ್ಷ ಪ್ರಭಾಕರ ಶೆಟ್ಟಿ, ಕಾರ್ಯದರ್ಶಿ ಚಂದ್ರ ಹಳಗೇರಿ, ಕೋಶಾ„ಕಾರಿ ರವಿರಾಜ್ ಹೆಗ್ಡೆ, ಹೇರಂಜಾಲು ಶಾಲೆಯ ಸಿಆರ್‍ಪಿ ರಾಮನಾಥ ಮೇಸ್ತ, ಶಾಲಾ ಎಸ್‍ಡಿಎಂಸಿ ಕಾರ್ಯಾಧ್ಯಕ್ಷ ಅರುಣ್ ಹೆಬ್ಬಾರ್, ಶಾಲಾ ಮುಖ್ಯಶಿಕ್ಷಕ ಜಯಾನಂದ ಪಟ್ಗಾರ್, ಜಯಶೀಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕ ಗಿರೀಶ ಶ್ಯಾನುಬಾಗ್ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯಶಿಕ್ಷಕ ಜಯಾನಂದ ಪಟ್ಗಾರ್ ವಂದಿಸಿದರು.

 

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)