ಸೆಲ್ಯೂಟ್ ದಿ ಸೈಲೆಂಟ್ ವರ್ಕರ್’ : ಲೈನ್‌ಮೆನ್ ಕೃಷ್ಣಮೂರ್ತಿಯವರಿಗೆ ಜೆ.ಸಿ.ಐ ಉಪ್ಪುಂದದಿಂದ ಗೌರವ

0
350

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಜೇಸಿಐ ಉಪ್ಪುಂದದಿಂದ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮ. ಎಲೆಮರೆಯ ಕಾಯಿಯಂತೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಿರುವ ಸಮಾಜದ ವಿವಿಧ ಇಲಾಖೆಗಳ ನೌಕರರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಉಪ್ಪುಂದ ಜೇಸಿಐ ಸಂಸ್ಥೆಯು ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿದೆ.

ಈ ದಿಸೆಯಲ್ಲಿ ಬೈಂದೂರು ಮೆಸ್ಕಾಂ ನ ನೌಕರರಾದ ಶ್ರೀ ಕೃಷ್ಣಮೂರ್ತಿ ಯವರನ್ನು ಮೆಸ್ಕಾಂ ಕಚೇರಿಯಲ್ಲಿ ಜೇಸಿಐ ಉಪ್ಪುಂದದಿಂದ ಅಭಿಮಾನ ಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪ್ಪುಂದ ಜೇಸಿಯ ಅಧ್ಯಕ್ಷರಾದ ಶ್ರೀ ಪುರುಷೋತ್ತಮ್ ದೇವಾಡಿಗ ರವರು ಶುಭಾಶಯದ ನುಡಿಗಳನ್ನು ನುಡಿದರು. ಪೂರ್ವಾಧ್ಯಕ್ಷರಾದ ಶ್ರೀ ಮಂಗೇಶ್ ಶ್ಯಾನುಭಾಗ್ ಮಾತನಾಡಿ ಹಗಲಿರುಳು ಎನ್ನದೆ ಜನರ ಸೇವೆಯೇ ಜನಾರ್ದನ ಸೇವೆ ಎಂದು ಸೇವೆ ಸಲ್ಲಿಸುತ್ತಿರುವ ಶ್ರೀ ಕೃಷ್ಣ ಮೂರ್ತಿ ಯವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ವಿದ್ಯುತ್ ವ್ಯತ್ಯಯ ಉಂಟಾದ ಸಮಯದಲ್ಲಿ ಜನರು ವಿದ್ಯುತ್ ಇಲಾಖೆಯನ್ನು ಶಪಿಸುತ್ತಿರುವ ಸಮಯದಲ್ಲೂ ತಮ್ಮ ಕರ್ತವ್ಯದಲ್ಲಿ ತೊಡಗಿಸಿಕೊಂಡ ವಿದ್ಯುತ್ ಇಲಾಖೆ ನಿಜಕ್ಕೂ ಸೈಲೆಂಟ್ ವರ್ಕರ್ ಎಂದು ನುಡಿದರು.

ಕಾರ್ಯದರ್ಶಿ ಶ್ರೀ ಸಂದೀಪ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಜೇಸಿ ಪ್ರದೀಪ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಜೇಸಿ ರಾಮಕೃಷ್ಣ ಖಾರ್ವಿ ವಂದಿಸಿದರು. ಉಪ್ಪುಂದ ಜೇಸಿಐ ನ ಉಪಾಧ್ಯಕ್ಷರಾದ ಜೇಸಿ ಮಂಜುನಾಥ ದೇವಾಡಿಗ, ಜೇಸಿ ಜಗದೀಶ್ ದೇವಾಡಿಗ,ಕಿರಿಯ ಜೇಸಿ ಸದಸ್ಯರಾದ ನಾಗೇಂದ್ರ ದೇವಾಡಿಗ,ಮದುಕರ್ ದೇವಾಡಿಗ ಮೆಸ್ಕಾಂ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)