ಮೆಟ್ಟಿನಹೊಳೆ : ವಿಶ್ವ ಮಹಿಳಾ ದಿನಾಚರಣೆ

0
618

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆಟ್ಟಿನಹೊಳೆ ಇಲ್ಲಿ ವಿಶ್ವ ಮಹಿಳಾ ದಿನವನ್ನು ಜೆಸಿಐ ಉಪ್ಪುಂದ, ಧರ್ಮಶ್ರೀ ರಿಲೀಫ್ ಫೌಂಡೇಶನ್ ಮಟ್ನಕಟ್ಟೆ-ಕೆರ್ಗಾಲ್ ಇವರ ಸಂಯುಕ್ತ ಆಶ್ರಯದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಆಗಮಿಸಿದ್ದ ವಿದ್ಯಾರ್ಥಿಗಳ ತಾಯಂದಿರಿಗೆ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ಜಾನಪದೀಯ ಸ್ಪರ್ಧೆಗಳನ್ನು ನಡೆಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶ್ರೀ ಸೀತಾರಾಮ ಕುಲಾಲ್ ಮಹಿಳಾ ದಿನಾಚರಣೆ ಯ ಪ್ರಯುಕ್ತ ಶುಭಾಶಯಗಳನ್ನು ಕೋರಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧರ್ಮಶ್ರೀ ರಿಲೀಫ್ ಫೌಂಡೇಶನ್ ನ ಟ್ರಸ್ಟಿಗಳಾದ ಶ್ರೀ ವಿಶ್ವನಾಥ ಹೊಸ್ಕೋಟೆ ಯವರು ತಮ್ಮ ಸಂಸ್ಥೆಯ ಕಾರ್ಯವೈಖರಿ ಮತ್ತು ಸೇವಾ ಮನೋಭಾವದ ಬಗ್ಗೆ ನುಡಿದರು. ಉಪ್ಪುಂದ ಜೇಸಿಐ ನ ಅಧ್ಯಕ್ಷರಾದ ಶ್ರೀ ಪುರುಷೋತ್ತಮ್ ದಾಸ್ , ಉಪಾಧ್ಯಕ್ಷರಾದ ಶ್ರೀ ಜಗದೀಶ್ ದೇವಾಡಿಗ ಮೇಲ್ಮನೆ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಶಾರದಾ ಕುಲಾಲ್, ಆಶಾ ಕಾರ್ಯಕರ್ತೆ ಶ್ರೀಮತಿ ಚಂದು ಕುಲಾಲ್, ವೆಂಕಮ್ಮ ಚಾರಿಟೇಬಲ್ ಟ್ರಸ್ಟ್ ನ ಶ್ರೀ ದಿನೇಶ ಗಾಣಿಗ, ಶಿಕ್ಷಕರ ಸಂಘದ ಖಜಾಂಚಿ ಶ್ರೀ ಅಚ್ಯುತ ಬಿಲ್ಲವ, ಎಸ್.ಡಿ.ಎಮ್.ಸಿ. ಉಪಾಧ್ಯಕ್ಷರಾದ ಶ್ರೀ ದಿನೇಶ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಮಂಜುನಾಥ ದೇವಾಡಿಗ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಪ್ರತಿಮಾ ಜಿ. ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಕಿ ಶ್ರೀಮತಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಶ್ರೀ ತಾಜುದ್ದೀನ್ ವಂದಿಸಿದರು.

 ಈ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆ ಶ್ರೀಮತಿ ಚಂದು ಕುಲಾಲ್ ರವರಿಗೆ ಎಲ್ಲಾ ಮಹಿಳೆಯರ ಪರವಾಗಿ ಸನ್ಮಾನಿಸಲಾಯಿತು. ಧರ್ಮಶ್ರೀ ರಿಲೀಫ್ ಫೌಂಡೇಶನ್ ನ ಶ್ರೀ ವಿಶ್ವನಾಥ ಹೊಸ್ಕೋಟೆ ಯವರಿಗೆ ಶಾಲೆಯ ಪರವಾಗಿ ಗೌರವಿಸಲಾಯಿತು. ಜೇಸಿಐ ನ ಅಧ್ಯಕ್ಷರಾದ ಶ್ರೀ ಪುರುಷೋತ್ತಮ್ ದಾಸ್ ರವರನ್ನು ಹಾಗೂ ಶಾಲಾ ಶಿಕ್ಷಕಿಯರಾದ ಶ್ರೀಮತಿ ಶಶಿಕಲಾ, ಶ್ರೀಮತಿ ಪ್ರತಿಮಾ ಜಿ, ಗೌರವ ಶಿಕ್ಷಕಿ ಕು. ರೇಷ್ಮಾ ಆಚಾರ್ಯ ಇವರನ್ನು ಅಭಿಮಾನ ಪೂರ್ವಕವಾಗಿ ಗುರುತಿಸಿ ಗೌರವಿಸಲಾಯಿತು.

ಶಿಕ್ಷಕ ಶ್ರೀ ರಾಮ ಶೆಟ್ಟಿ ಬಹುಮಾನ ವಿತರಣೆ ಪಟ್ಟಿಯನ್ನು ವಾಚಿಸಿದರು.ಗೌರವ ಶಿಕ್ಷಕಿ ಕು.ರೇಷ್ಮಾ ಆಚಾರ್ಯ ಸನ್ಮಾನಿತರ ಪರಿಚಯ ಮಾಡಿದರು. ನಂತರ ಉಪ್ಪುಂದ ಜೇಸಿಐ ಯವರ ಜೊತೆಗೂಡಿಕೊಂಡು ಈ ಭಾಗದ ನಾಟಿವೈದ್ಯೆ ಅತ್ಯಂತ ಹಿರಿಯ ವಯಸ್ಸಿನ ಶ್ರೀಮತಿ ಕೃಷ್ಣಮ್ಮ ಶೆಡ್ತಿ ಹರವರಿಮನೆ ಅಲ್ಸಾಡಿ ಇವರ ಮನೆಗೆ ತೆರಳಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಬಳಿಕ ತಾಯಿಯಂದಿರ ಪಾದಪೂಜೆ ಹಾಗೂ ತಾಯಂದಿರ ಕೈತುತ್ತು ಕಾರ್ಯಕ್ರಮ ಅಪೂರ್ವವಾಗಿ ನಡೆಯಿತು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)