ಸೆಲ್ಯೂಟ್ ದಿ ಸೈಲೆಂಟ್ ವರ್ಕರ್’ : ಪತ್ರಕರ್ತರಾದ ರಾಮ ಪೂಜಾರಿಯವರಿಗೆ ಜೆ.ಸಿ.ಐ ಉಪ್ಪುಂದದಿಂದ ಗೌರವ

0
273

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಜೇಸಿಐ ಉಪ್ಪುಂದದಿಂದ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮ. ವಿವಿಧ ಕ್ಷೇತ್ರಗಳಲ್ಲಿ ಮೌನವಾಗಿ ಕರ್ತವ್ಯ ನಿರ್ವಹಿಸುವವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಉಪ್ಪುಂದ ಜೇಸಿಐ ಸಂಸ್ಥೆಯು ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿದೆ.

ಈ ದಿಸೆಯಲ್ಲಿ ಉಪ್ಪುಂದ ಭಾಗದ ವಿಜಯಕರ್ನಾಟಕ ವರದಿಗಾರರಾದ ರಾಮ ಪೂಜಾರಿಯವರನ್ನು ದಂಪತಿ ಜೊತೆ ಅವರ ಕಚೇರಿಯಲ್ಲಿ ಜೇಸಿಐ ಉಪ್ಪುಂದದಿಂದ ಅಭಿಮಾನ ಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪ್ಪುಂದ ಜೇಸಿಯ ಅಧ್ಯಕ್ಷರಾದ ಶ್ರೀ ಪುರುಷೋತ್ತಮ್ ದೇವಾಡಿಗ ರವರು ಶುಭಾಶಯದ ನುಡಿಗಳನ್ನು ನುಡಿದರು.ಹಿರಿಯ ಜೇಸಿ ಸದಸ್ಯರಾದ ಮಂಜುನಾಥ್ ದೇವಾಡಿಗರು ಮಾತನಾಡಿ ಶ್ರೀಯುತರು ಪತ್ರಿಕಾ ಧರ್ಮವನ್ನು ಪಾಲಿಸಿಕೊಂಡು ಪತ್ರಿಕಾ ಸ್ವಾತಂತ್ರ್ಯವನ್ನೂ ಉಳಿಸಿದ ಹಿರಿಮೆಗೆ ಪಾತ್ರರಾದವರು.

ಅವರ ವ್ಯಕ್ತಿತ್ವ ಉಳಿದವರಿಗೆ ಅನುಕರಣೀಯ ಎಂದರು ಶ್ರೀ ಗಣೇಶ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಜೇಸಿ ಶಿವಾನಂದ ಗಾಣಿಗ ಸ್ವಾಗತಿಸಿದರು. ಜೇಸಿ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು. ಉಪ್ಪುಂದ ಜೇಸಿಐ ನ ಉಪಾಧ್ಯಕ್ಷರಾದ ಜೇಸಿ ಜಗದೀಶ್ ದೇವಾಡಿಗ,ರಾಮಕೃಷ್ಣ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)