ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಬೈಂದೂರು ವಲಯದ ವತಿಯಿಂದ ಟೈಲರ್ಸ್ ದಿನ ಆಚರಣೆ

0
385

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಬೈಂದೂರು ವಲಯದ ವತಿಯಿಂದ “ಟೈಲರ್ಸ್ ದಿನಾಚರಣೆ” ಕಾರ್ಯಕ್ರಮ ಸೇವಾ ಸಂಗಮ ಶಿಶು ಮಂದಿರ ಬೈಂದೂರಿನಲ್ಲಿ ನಡೆಯಿತು.

ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶ್ರೀಯುತ ನವೀನ್ ಟೈಲರ್ ಕೊಲ್ಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿಶು ಮಂದಿರದ ಅಧ್ಯಕ್ಷರಾದ ಶ್ರೀ ಮಂಜುನಾಥ ಶೆಟ್ಟಿ ಉದ್ಘಾಟಿಸಿ, ನಾವು ಜೀವನದಲ್ಲಿ ಕ್ರೀಯಾಶೀಲರಾಗಿರಬೇಕಾದರೆ ಇಂತಹ ಸಂಘ ಸಂಸ್ಥೆಗಳನ್ನು ಸೇರಿಕೊಂಡು ನಮ್ಮ ಪ್ರತಿಭೆಯನ್ನು ಮತ್ತು ಪರಿಶ್ರಮವನ್ನು ಪ್ರಾಮಾಣಿಕವಾಗಿ ತೋರಿಸಿಕೊಂಡಾಗ ಸಂಘ ಬೆಳೆಯುವುದರೊಂದಿಗೆ ನಾವು ಸಾಮಾಜಿಕವಾಗಿ ಬೆಳೆದು ಪ್ರಜ್ಞಾವಂತ ಪ್ರಜೆಯಾಗುವುದಕ್ಕೆ ಆಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒಂದು ಸಂಘಟನೆ ಬೇಕು. ಅದುವೇ ನಮ್ಮಶಕ್ತಿ ಎಂದು ಹೇಳಿದರು. ಹಾಗೂ ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಒಂದು ಹೊಲಿಗೆ ಯಂತ್ರವನ್ನು ಕೊಡುವುದಾಗಿ ಹೇಳಿದರು. ಕ್ಷೇತ್ರದ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀ ರಾಘವೇಂದ್ರ ಬಂಕೇಶ್ವರರವರೂ ಒಂದು ಹೊಲಿಗೆ ಯಂತ್ರ ಕೊಡುವುದಾಗಿ ಹೇಳಿದರು.

ಕೋಶಾಧಿಕಾರಿ ಶ್ರೀಮತಿ ಆಶಾ ದಿನೇಶ ಪ್ರಾಸ್ತಾವಿಕ ಮಾತನಾಡಿದರು. ಬೈಂದೂರು ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಮಹಾಬಲ ಟೈಲರ್ ಉಪಸ್ಥಿತರಿದ್ದರು. ಚಂದ್ರ ಚಿತ್ತೂರುರವರು ಶುಭ ಸಂಶನೆಗೈದರು. ನಾಗೇಂದ್ರ ಚಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ಸದಸ್ಯರಿಗಾಗಿ ಆಟೋಟ ಸ್ಪರ್ಧೆ ಏರ್ಪಡಿಸಲಾಯಿತು. ಹಾಗೂ ಸುಪ್ರೀತಾ ಚಿತ್ತೂರು ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)